ಸ್ವರಾ ಭಾಸ್ಕರ್ 
ಬಾಲಿವುಡ್

ನಾನು ಸಮರ್ಥ ನಟಿ, ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ರೂ ಖಾಲಿ ಕೂತಿದ್ದೇನೆ: ಸ್ವರಾ ಭಾಸ್ಕರ್

ಬಾಲಿವುಡ್ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಸ್ವರಾ ಬಾಸ್ಕರ್ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ರಿಸ್ಕ್‌ ತೆಗೆದುಕೊಂಡು ಕೆಲಸ ಮಾಡುತ್ತಿರುವುದಕ್ಕೆ ದೊಡ್ಡ ನಷ್ಟವೇ ಆಗಿದೆ ಎಂದಿದ್ದಾರೆ.

ಬಾಲಿವುಡ್ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಸ್ವರಾ ಬಾಸ್ಕರ್ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ರಿಸ್ಕ್‌ ತೆಗೆದುಕೊಂಡು ಕೆಲಸ ಮಾಡುತ್ತಿರುವುದಕ್ಕೆ ದೊಡ್ಡ ನಷ್ಟವೇ ಆಗಿದೆ ಎಂದಿದ್ದಾರೆ.

ಇತ್ತೀಚೆಗೆ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ,   6 ರಿಂದ 7 ಬ್ಲಾಕ್‌ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದರೂ ಕೈಯಲ್ಲಿ ಒಂದು ಸಿನಿಮಾವಿಲ್ಲ ಇದೆಲ್ಲಾ ನನಗೆ ವೆಬ್‌ ಸೀರಿಸ್‌ ಮಾಡಿದ ರೀತಿ ಅನಿಸುತ್ತಿದೆ  ಎಂದು  ಹೇಳಿದ್ದಾರೆ.

ಸ್ವರಾ ಭಾಸ್ಕರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2009ರಲ್ಲಿ. ‘ತನು ವೆಡ್ಸ್​ ಮನು’, ‘ಪ್ರೇಮ್​ ರಥನ್​ ಧನ್​ ಪಾಯೋ’, ‘ಅನಾರ್ಕಲಿ ಆಫ್​ ಆರಾ’, ‘ವೀರೇ ದಿ ವೆಡ್ಡಿಂಗ್​’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ‘ನನಗೆ ಅತಿ ಇಷ್ಟವಾಗಿರುವ ನಟನೆಯ ವಿಚಾರದಲ್ಲೇ ನಾನು ರಿಸ್ಕ್​ ತೆಗೆದುಕೊಂಡೆ’ ಎಂದು ಸ್ವರಾ ಭಾಸ್ಕರ್​ ಹೇಳಿದ್ದಾರೆ.

‘ನಾನು ಸಮರ್ಥ ನಟಿ. ನನ್ನ ಪ್ರತಿಭೆಗೆ ತಕ್ಕಂತಹ ಅವಕಾಶಗಳು ಬರುತ್ತಿಲ್ಲ. ನನ್ನ ಟ್ರ್ಯಾಕ್​ ರೆಕಾರ್ಡ್​ ಚೆನ್ನಾಗಿದೆ. 6-7 ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದೇನೆ. ವೆಬ್​ ಸೀರಿಸ್​ಗಳಲ್ಲೂ ಕಾಣಿಸಿಕೊಂಡಿದ್ದೇನೆ. ಕೆಟ್ಟ ವಿಮರ್ಶೆ ಎಂದಿಗೂ ಪಡೆದಿಲ್ಲ. ಚಾನ್ಸ್​ ಸಿಗದೇ ಇರಲು ಏನಾದರೂ ಕಾರಣ ಇರಬೇಕಿತ್ತು. ಆದರೆ ಅವಕಾಶ ಇಲ್ಲ ಎಂಬುದಂತೂ ಸ್ಪಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.

ಸ್ವರಾ ಭಾಸ್ಕರ್​ ಅವರು ಮೊದಲಿನಿಂದಲೂ ಕೇಂದ್ರ ಸರ್ಕಾರದ ಕೆಲವು ವಿಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಾಲಿವುಡ್​ನಲ್ಲೂ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಇತ್ತೀಚೆಗೆ ಸ್ವರಾ ಭಾಸ್ಕರ್​ ಅವರು ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್​ ಗಾಂಧಿ ಜೊತೆ ಮಧ್ಯ ಪ್ರದೇಶದಲ್ಲಿ ಅವರು ಹೆಜ್ಜೆ ಹಾಕಿ ಸುದ್ದಿ ಆಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT