ಪೊನ್ನಯಿನ್ ಸೆಲ್ವನ್ ಮೋಷನ್ ಪೋಸ್ಟರ್ ಬಿಡುಗಡೆ 
ಬಾಲಿವುಡ್

ಐಶ್ವರ್ಯಾ ರೈ ನಟನೆಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್-1' ಮೋಷನ್ ಪೋಸ್ಟರ್ ಬಿಡುಗಡೆ

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್-1' ನ ಮೊದಲ ಮೋಷನ್ ಪೋಸ್ಟರ್ ನ್ನು ಅನಾವರಣಗೊಳಿಸಲಾಗಿದೆ. 

ನವದೆಹಲಿ: ಖ್ಯಾತ ನಿರ್ದೇಶಕ ಮಣಿರತ್ನಂ (Director Maniratnam) ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್01' ನ ಮೊದಲ ಮೋಷನ್ ಪೋಸ್ಟರ್ ನ್ನು ಅನಾವರಣಗೊಳಿಸಲಾಗಿದೆ. 

ಚಿತ್ರ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ಬಹು ನಿರೀಕ್ಷಿತ ಚಿತ್ರದ ಮೋಷನ್ ಪೋಸ್ಟರ್ ನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. "ನೋಡಿ! ನೀವೇ ಧೈರ್ಯ ಮಾಡಿ. ಸಾಹಸಕ್ಕೆ ಸಿದ್ಧರಾಗಿ. ಚೋಳರು ಬರುತ್ತಿದ್ದಾರೆ! #PS1 # ಮಣಿರತ್ನಂ"  "ಚೋಳರು ಬರುತ್ತಿದ್ದಾರೆ" ಪೋಸ್ಟರ್‌ನಲ್ಲಿ ಕೇಸರಿ ಧ್ವಜವನ್ನು ಹಿಡಿದಿರುವುದನ್ನು ಕಾಣಬಹುದು.

ಮಣಿರತ್ನಂ ನಿರ್ದೇಶನದ, 'ಪೊನ್ನಿಯಿನ್ ಸೆಲ್ವನ್' ದಕ್ಷಿಣದ ನಟರಾದ ವಿಕ್ರಮ್, ಜಯರಾಮ್ ರವಿ, ಕಾರ್ತಿ, ಐಶ್ವರ್ಯ ಲಕ್ಷ್ಮಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ಯಾನ್-ಇಂಡಿಯಾ ಚಲನಚಿತ್ರವಾಗಿದೆ. ಎ.ಆರ್ ರೆಹಮಾನ್ ಸಂಗೀತವು ಚಿತ್ರಕ್ಕಿದ್ದು ಸೆಪ್ಟೆಂಬರ್ 30 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

ಐಶ್ವರ್ಯಾ ರೈಯವರು 2010 ರಲ್ಲಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ 'ರಾವಣ್' ನಂತರ ದಕ್ಷಿಣ ನಟ ವಿಕ್ರಮ್ ಅವರೊಂದಿಗೆ ಎರಡನೇ ಬಾರಿ ನಟಿಸುತ್ತಿದ್ದಾರೆ. 1997 ರಲ್ಲಿ 'ಇರುವರ್', 2007 ರಲ್ಲಿ 'ಗುರು' ನಂತರ 2010 ರಲ್ಲಿ 'ರಾವಣ' ನಂತರ ಮಣಿ ರತ್ನಂ ನಿರ್ದೇಶನದಲ್ಲಿ ನಾಲ್ಕನೇ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಚಿತ್ರದ ಮೊದಲ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್