ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ 
ಬಾಲಿವುಡ್

'ನಿಜಕ್ಕೂ ಅಚ್ಚರಿಯಾಗಿದೆ': ಲಲಿತ್ ಮೋದಿ, ನಟಿ ಸುಶ್ಮಿತಾ ಸೇನ್ ಜೊತೆಗಿನ ಸಂಬಂಧದ ಬಗ್ಗೆ ಸುಶ್ಮಿತಾ ಸಹೋದರನ ಮಾತು!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ, ನಟಿ ಸುಶ್ಮಿತಾ ಸೇನ್ ಜೊತೆಗಿನ ಸಂಬಂಧವನ್ನು ಗುರುವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತಗೊಳಿಸಿದ್ದಾರೆ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ, ನಟಿ ಸುಶ್ಮಿತಾ ಸೇನ್ ಜೊತೆಗಿನ ಸಂಬಂಧವನ್ನು ಗುರುವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತಗೊಳಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಸುಶ್ಮಿತಾ ಸೇನ್ ಅವರನ್ನು ಬೆಟರ್ ಹಾಫ್ ಎಂದು ಕರೆದಿದ್ದು ನಾವು ಮದುವೆಯಾಗಿಲ್ಲ. ಕೇವಲ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ನನಗೂ ಆಶ್ಚರ್ಯವಾಗಿದೆ, ನಾನು ಈ ಬಗ್ಗೆ ನನ್ನ ಸಹೋದರಿಯೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಗೆಳೆಯ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ನಂತರ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಸು ಗುಸು ಜೋರಾಗಿತ್ತು. ಇದೀಗ ಆ ಗುಸುಗುಸು ಮಾತಿಗೆ ಲಲಿತ್ ಮೋದಿ ಸ್ಪಷ್ಟನೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಅವರು ನಟಿ ಸುಶ್ಮಿತಾ ಸೇನ್ ಅವರೊಂದಿಗೆ “ಹೊಸ ಆರಂಭ” ವನ್ನು ಘೋಷಿಸಿದ್ದಾರೆ. ಸುಶ್ಮಿತಾ ಸೇನ್ ಅವರನ್ನು ತಮ್ಮ ಬೆಟರ್ ಹಾಫ್ ಎಂದು ಕರೆದಿದ್ದಾರೆ.

ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಮದುವೆಯಾಗಿದ್ದಾರೆಂಬ ವದಂತಿ ನಡುವೆ ಸರಣಿ ಫೋಟೋಗಳನ್ನು ಹಂಚಿಕೊಂಡಿರುವ ಲಲಿತ್ ಮೋದಿ ಮಾಲ್ಡೀವ್ಸ್, ಸರ್ದಾನಿಯಾ ಗಳಲ್ಲಿ ಸುಶ್ಮಿತಾ ಸೇನ್ ಜೊತೆ ಸುತ್ತಾಡಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಲಂಡನ್ ನಲ್ಲಿರುವುದಾಗಿ ತಿಳಿಸಿರುವ ಲಲಿತ್ ಮೋದಿ ಬೆಟರ್‌ಹಾಫ್ ಸುಶ್ಮಿತಾ ಸೇನ್ ಜೊತೆ ಹೊಸ ಜೀವನ ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ