ಅಮೀರ್ ಖಾನ್ 
ಬಾಲಿವುಡ್

ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲು: ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಟನೆಯಿಂದ ಬ್ರೇಕ್: ಅಮೀರ್ ಖಾನ್ ಘೋಷಣೆ

ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.

ದೆಹಲಿ: ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ.

35 ವರ್ಷಕ್ಕೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗ ಒಂದು ವರ್ಷ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದ್ದೇನೆ. ಕುಟುಂಬದ ಜತೆ ಇರಲು ಬಯಸಿದ್ದೇನೆ ಎಂದು ಅಮೀರ್ ತಿಳಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಳಿಕ ಚಾಂಪಿಯನ್ಸ್ ಚಿತ್ರದ ಕೆಲಸ ಆರಂಭಿಸುವುದಾಗಿ ಅಮೀರ್ ಹೇಳಿದ್ದರು.

ನಾನು ನಟನಾಗಿ ಸಿನಿಮಾ ಮಾಡುವಾಗ, ನನ್ನ ಜೀವನದಲ್ಲಿ ಬೇರೇನೂ ಆಗುವುದಿಲ್ಲ. ಸಿನಿಮಾದಲ್ಲಿ ನಾನು ತುಂಬಾ ಕಳೆದುಹೋಗುತ್ತೇನೆ. ನಾನು ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ನನ್ನ ಕುಟುಂಬದೊಂದಿಗೆ, ನನ್ನ ತಾಯಿ, ನನ್ನ ಮಕ್ಕಳೊಂದಿಗೆ ಇರಲು ಬಯಸುತ್ತೇನೆ ಎಂದಿದ್ದಾರೆ.

ಇದು ಬಹುಶಃ ನನ್ನ 35 ವರ್ಷಗಳ ವೃತ್ತಿಜೀವನದಲ್ಲಿ ನಾನು ತೆಗೆದುಕೊಳ್ಳುತ್ತಿರುವ ಮೊದಲ ವಿರಾಮ. ನಾನು 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸಿದ್ದೇನೆ ಎಂದಿದ್ದಾರೆ. ನಾನು ಮುಂದಿನ ವರ್ಷಕ್ಕಾಗಿ ಎದುರು ನೋಡುತ್ತಿದ್ದೇನೆ. ಒಂದೂವರೆ ವರ್ಷ ನಾನು ನಟನಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಅಮೀರ್ ಖಾನ್ ಇತ್ತೀಚೆಗೆ ಅಪರೂಪದ ಲುಕ್​​ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು, ಅವರ ಇತ್ತೀಚಿನ ಚಿತ್ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್​​ನಲ್ಲಿ ಫೇಲ್ ಆದ ನಂತರ ಮೊದಲ ಬಾರಿ ಈ ರೀತಿ ಕಾಣಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀರ್ ತಮ್ಮ ಬೆಳ್ಳಿ ಕೂದಲು ಮತ್ತು ಗಡ್ಡವನ್ನು ನ್ಯಾಚುರಲ್ ಲುಕ್​​ನಲ್ಲಿ ತೋರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

'ಬರೀ ಮಾತು ಸಾಕು, ಒಪ್ಪಂದಕ್ಕೆ ಬನ್ನಿ; ಸವಾಲು ಹಾಕಿದರೆ ಸಮುದ್ರದ ತಳ ಸೇರುತ್ತೀರಿ': ಇರಾನ್ ಸಂಧಾನಕಾರರಿಗೆ ಟ್ರಂಪ್ ಎಚ್ಚರಿಕೆ, ಮಾತುಕತೆ ವಿಫಲವಾದರೆ ಮತ್ತೆ ದಾಳಿ..!

ಅಮೆರಿಕದಲ್ಲಿ ಬಂದೂಕು ಧಾರಿಗಳಿಂದ 2 ಪ್ರತ್ಯೇಕ ಗುಂಡಿನ ದಾಳಿ: ಓಹಿಯೋದಲ್ಲಿ ಮೂವರು ಬಲಿ, ಕ್ಯಾಲಿಫೋರ್ನಿಯಾದಲ್ಲಿ 9 ಜನರಿಗೆ ಗಾಯ..!

Asia Cup Rising Stars 2026: ಡಕೌಟ್ ಆದ ಹರ್ಷಿತ್ ರಾಣಾ ಕೆಣಕಿದ ಪಾಕ್ ಬೌಲರ್, ಮೈದಾನದಲ್ಲಿ ಮಾತಿನ ಚಕಮಕಿ, Video

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!