ಇರಾ ಖಾನ್ ಮತ್ತು ನೂಪುರ್ ಶಿಖರೆ 
ಬಾಲಿವುಡ್

ಬಹುಕಾಲದ ಗೆಳೆಯ ನೂಪುರ್​ ಶಿಖರೆ ಜೊತೆ ಆಮೀರ್ ಖಾನ್ ಪುತ್ರಿ ಅದ್ಧೂರಿ ನಿಶ್ಚಿತಾರ್ಥ

ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎಂದೇ ಖ್ಯಾತಿಯಾಗಿರುವ ನಟ ಆಮೀರ್​ ಖಾನ್ ಪುತ್ರಿ ಇರಾ ಖಾನ್​ ತಮ್ಮ ಬಹುಕಾಲದ ಗೆಳೆಯ ನೂಪುರ್​ ಶಿಖರೆ ಜೊತೆ ನಿನ್ನೆ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎಂದೇ ಖ್ಯಾತಿಯಾಗಿರುವ ನಟ ಆಮೀರ್​ ಖಾನ್ ಪುತ್ರಿ ಇರಾ ಖಾನ್​ ತಮ್ಮ ಬಹುಕಾಲದ ಗೆಳೆಯ ನೂಪುರ್​ ಶಿಖರೆ ಜೊತೆ ನಿನ್ನೆ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಆಮೀರ್​ ಖಾನ್​, ಮಾಜಿ ಪತ್ನಿ ಕಿರಣ್ ರಾವ್​ ಭಾಗವಹಿಸಿದ್ದರು.

ಅಮೀರ್ ಖಾನ್ ಪುತ್ರಿ ಇರಾ ಖಾನ್ ಮುಂಬೈನಲ್ಲಿ ತನ್ನ ಗೆಳೆಯ ನೂಪುರ್ ಶಿಖಾರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇರಾ ಅವರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫೋಟೋಗಳಲ್ಲಿ ಇರಾ ಖಾನ್ ಸುಂದರವಾದ ಕೆಂಪು ಗೌನ್ ಧರಿಸಿರುವುದನ್ನು ಕಾಣಬಹುದು. ನೂಪುರ್ ಶಿಖಾರೆ ಕಪ್ಪು ಸೂಟ್‌ನಲ್ಲಿ ಕಂಡುಬಂದರು.

ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ಆಗಿರುವ ನೂಪುರ್ ಶಿಖಾರೆ ಅವರು ಕೆಲವು ತಿಂಗಳ ಹಿಂದೆ ಇರಾ ಖಾನ್ ಅವರಿಗೆ ಇಟಲಿಯಲ್ಲಿ ನಡೆದ ತಮ್ಮ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಪ್ರಪೋಸ್ ಮಾಡಿದ್ದರು.

ನಿಶ್ಚಿತಾರ್ಥ ಸಮಾರಂಭದಲ್ಲಿ ಇರಾ ಅವರ ತಂದೆ ಅಮೀರ್ ಖಾನ್, ತಾಯಿ ರೀನಾ ದತ್ತಾ, ಕಿರಣ್ ರಾವ್, ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್  ಭಾಗವಹಿಸಿದ್ದರು. ಆಮೀರ್​ ಖಾನ್​ ಮೊದಲ ಪತ್ನಿ ರೀನಾ ದತ್ತಾರ ಮಗಳು ಇರಾ ಖಾನ್ .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ: ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!

ರನ್‌ವೇಯಿಂದ ಜಾರಿದ ಅಮೆಜಾನ್ ಕಾರ್ಗೋ ವಿಮಾನ; ವಾಹನಗಳಿಗೆ ಡಿಕ್ಕಿ, ಕನಿಷ್ಠ ಐವರು ಸಾವು!

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕುಗಳ ಮಾರಾಟ? ರಾಜಮೌಳಿಗೆ ತಲೆಬಿಸಿ!