ಸಲ್ಮಾನ್ ಖಾನ್ - ಕರಣ್ ಜೋಹರ್ 
ಬಾಲಿವುಡ್

ಸಲ್ಮಾನ್ ಖಾನ್ ಗೆ ಡೆಂಗ್ಯೂ, ಬಿಗ್ ಬಾಸ್ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹರ್

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಡೆಂಗ್ಯೂನಿಂದ ಬಳಲುತ್ತಿರುವ ಕಾರಣ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 16ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್...

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಡೆಂಗ್ಯೂನಿಂದ ಬಳಲುತ್ತಿರುವ ಕಾರಣ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 16ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಮೂಲಗಳು ಶನಿವಾರ ತಿಳಿಸಿವೆ.

ವರದಿಗಳ ಪ್ರಕಾರ, ಸಲ್ಮಾನ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಮತ್ತು ದೀರ್ಘಕಾಲದ ಕಲರ್ಸ್ ಚಾನೆಲ್ ಕಾರ್ಯಕ್ರಮದ ಹೋಸ್ಟಿಂಗ್ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಕರಣ್ ಜೋಹರ್ ವಹಿಸಿಕೊಂಡಿದ್ದಾರೆ.

"ಸಲ್ಮಾನ್ ಅವರು ಅಸ್ವಸ್ಥರಾಗಿದ್ದಾರೆ ಎಂದು ಅವರ ತಂಡದಿಂದ ನಮಗೆ ತಿಳಿಸಲಾಗಿದೆ. ಅವರು ಈ ಗುರುವಾರ ಶೂಟಿಂಗ್‌ಗೆ ಬಂದಿಲ್ಲ. ಸಾಮಾನ್ಯವಾಗಿ ಅವರು ಶುಕ್ರವಾರ ಮತ್ತು ಶನಿವಾರದ ಸಂಚಿಕೆಗಳ 'ವೀಕೆಂಡ್ ಕಾ ವಾರ್' ಅನ್ನು ಗುರುವಾರವೇ ಶೂಟ್ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

"ಕರಣ್ ಜೋಹರ್ ಅವರು ಸಲ್ಮಾನ್‌ ಸ್ಥಾನವನ್ನು ತುಂಬುತ್ತಿದ್ದಾರೆ. ಅವರು ದೀಪಾವಳಿ ವಿಶೇಷ ಸೇರಿದಂತೆ ಬಿಗ್ ಬಾಸ್‌ ನ ಮೂರು ಸಂಚಿಕೆಗಳಿಗೆ ಚಿತ್ರೀಕರಣ ಮಾಡಲಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಬದಲಾಗಿ ಸೋಮವಾರ ಪ್ರಸಾರವಾಗಲಿದೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಶನಿವಾರ ರಾತ್ರಿ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ 'ಸಲ್ಮಾನ್ ಖಾನ್ ಅಸ್ವಸ್ಥರಾಗಿದ್ದಾರೆ. ಅವರ ಬದಲಿಗೆ ಕರನ್ ಜೋಹರ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ' ಎಂದು ಬಿಗ್ ಬಾಸ್ ತಂಡ ಘೋಷಿಸಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT