ಬಾಲಿವುಡ್

ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಇಲಿಯಾನ ಡಿ ಕ್ರೂಸ್

Sumana Upadhyaya

ಬಾಲಿವುಡ್ ನಟಿ ಇಲಿಯಾನ ಡಿ ಕ್ರೂಜ್ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಬಗ್ಗೆ ನಿನ್ನೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಅನುಯಾಯಿಗಳು ಮತ್ತು ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. 

ಮಗುವಿನ ಮುದ್ದಾದ ಫೋಟೋ ಹಂಚಿಕೊಂಡಿರುವ ಇಲಿಯಾನ, ಅದರಲ್ಲಿ ಅವರ ಗಂಡು ಮಗುವಿಗೆ ಕೋವಾ ಫಿಯೋನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದು, ಮುದ್ದಾಗಿ ಮಲಗಿರುವುದನ್ನು ಕಾಣಬಹುದು.

ನಮ್ಮ ಪ್ರೀತಿಯ ಹುಡುಗನನ್ನು ಜಗತ್ತಿಗೆ ಸ್ವಾಗತಿಸಲು ನಾವು ಎಷ್ಟು ಸಂತೋಷವಾಗಿದ್ದೇವೆ ಎಂಬುದನ್ನು ವಿವರಿಸಲು ಯಾವುದೇ ಪದಗಳಿಲ್ಲ. ಹೃದಯವನ್ನು ಮೀರಿದೆ ಎಂದು ಬರೆದುಕೊಂಡಿದ್ದಾರೆ. 

ಇಲಿಯಾನಾ ಆಗಸ್ಟ್ 1 ರಂದು ಕೋವಾ ಫಿಯೋನಿಕ್ಸ್ ಡೋಲನ್ ಅವರಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಬಾಲಿವುಡ್ ನಟ-ನಟಿಯರು, ಹಿತೈಷಿಗಳು ನಟಿಗೆ ಶುಭಕೋರಿದ್ದಾರೆ. 

SCROLL FOR NEXT