ಸಪ್ತಮಿ ಗೌಡ 
ಬಾಲಿವುಡ್

ಭಾರತೀಯ ಚಿತ್ರರಂಗದ ದಿಗ್ಗಜರ ಸಿನಿಮಾದಲ್ಲಿ ಲಾಂಚ್ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ: ನಟಿ ಸಪ್ತಮಿ ಗೌಡ

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರವನ್ನು ನಿರ್ವಹಿಸಿದ್ದ ಸಪ್ತಮಿ ಗೌಡ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿ ನಟಿಸಲಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರವನ್ನು ನಿರ್ವಹಿಸಿದ್ದ ಸಪ್ತಮಿ ಗೌಡ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿ ನಟಿಸಲಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕರ ಮುಂದಿನ ಚಿತ್ರದಲ್ಲಿ ಕೆಲಸ ಮಾಡುವ ಕುರಿತು ಮಾತನಾಡಿದ ಸಪ್ತಮಿ, 'ಮೊದಲಿಗೆ, ಕಾಶ್ಮೀರ್ ಫೈಲ್ಸ್ ಸಿನಿಮಾ ಎಷ್ಟು ದೊಡ್ಡದಾಗಿದೆ ಎಂಬುದು ನಮಗೆ ತಿಳಿದಿದೆ. ವಿವೇಕ್ ಅಗ್ನಿಹೋತ್ರಿ ಸರ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ಹೊಸ ಭಾಷೆ, ಹೊಸ ಉದ್ಯಮ, ಮತ್ತು ಹಲವು ಅಂಶಗಳನ್ನು ಕಲಿತುಕೊಳ್ಳುವ ಅಗತ್ಯವಿರುತ್ತದೆ ಎಂಬುದು ನನಗೆ ಖಚಿತವಾಗಿದೆ. ಚಿತ್ರದ ಭಾಗವಾಗುವುದು ಮತ್ತು ದೊಡ್ಡ ತಾರೆಯರೊಂದಿಗೆ ನಟಿಸುವುದು ಸೇರಿದಂತೆ ಬಹುಭಾಷಾ ಚಿತ್ರದಲ್ಲಿ ಅನ್ವೇಷಿಸಲು ಸಾಕಷ್ಟು ಹೊಸ ಮಾರ್ಗಗಳಿವೆ' ಎಂದರು.

ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಜ. 14 ರಂದು ಸಪ್ತಮಿ ಹೈದರಾಬಾದ್ ಶೆಡ್ಯೂಲ್‌ಗೆ ಸೇರಿಕೊಳ್ಳಲಿದ್ದಾರೆ.

'ಇದು ಕೇವಲ ಬಾಲಿವುಡ್‌ನಲ್ಲಿ ಕೆಲಸ ಮಾಡುವುದು ಮಾತ್ರವಲ್ಲ. ನಾನು ಭಾರತೀಯ ಚಿತ್ರರಂಗದ ಅದ್ಭುತ ದಿಗ್ಗಜರಾದ ಅನುಪಮ್ ಖೇರ್ ಮತ್ತು ನಾನಾ ಪಾಟೇಕರ್ ಅವರೊಂದಿಗೆ ಕೆಲಸ ಮಾಡುತ್ತೇನೆ. ಅಲ್ಲದೆ, ಪಲ್ಲವಿ ಜೋಶಿಯವರ ಐ ಆ್ಯಮ್ ಬುದ್ಧ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲು ದುಪ್ಪಟ್ಟು ಉತ್ಸುಕಳಾಗಿದ್ದೇನೆ. ಶೀರ್ಷಿಕೆಯು ಹೇಳುವಂತೆ ದಿ ವ್ಯಾಕ್ಸಿನ್ ವಾರ್ ತುಂಬಾ ಉತ್ತಮವಾಗಿದೆ ಮತ್ತು ಈ ನೈಜ ಚಿತ್ರದ ಭಾಗವಾಗಲು ನನಗೆ ಸಂತೋಷವಾಗಿದೆ' ಎನ್ನುತ್ತಾರೆ ಸಪ್ತಮಿ.

'ಕಾಂತಾರ ಸಿನಿಮಾದಿಂದ ನನಗೆ ಸಿಕ್ಕಿರುವುದು ನಾನು ಕೇಳಿದ್ದಕ್ಕಿಂತ ಹೆಚ್ಚಿನದಾಗಿದೆ. ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡುವುದು ನಾನು ಕನಸಿನಲ್ಲೂ ಯೋಚಿಸದ ಸಂಗತಿಯಾಗಿತ್ತು. ಅದರಂತೆ ಕಾಂತಾರ ನಂತರ ಪಟ್ಟಿಯಲ್ಲಿರುವ ಮುಂದಿನ ಚಿತ್ರ ದಿ ಕಾಶ್ಮೀರ ಫೈಲ್ಸ್. ಕಳೆದ ವರ್ಷ, ನಾನು ಕಾಂತಾರ ಸೆಟ್‌ನಲ್ಲಿ ಸಂಕ್ರಾಂತಿಯನ್ನು ಆಚರಿಸಲು ಸಂತೋಷಪಟ್ಟಿದ್ದೆ ಮತ್ತು ಈ ವರ್ಷ ವ್ಯಾಕ್ಸಿನ್ ವಾರ್ ಸೆಟ್‌ನಲ್ಲಿ ಹಬ್ಬದ ಉತ್ಸಾಹವಿದೆ' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು: ರಾಷ್ಟ್ರೀಯ 'ಪಲ್ಸ್ ಪೋಲಿಯೊ ಲಸಿಕಾ' ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ರಾಜ್ಯದಲ್ಲಿ 'ಸೀಸನಲ್ ಫ್ಲೂ' ಹೆಚ್ಚಳ ಹಿನ್ನೆಲೆ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

video| ಹವಾಮಾನ ಬದಲಾವಣೆ: ಸುಡುವ ಮರಳುಗಾಡಲ್ಲಿ ಕಂಡು ಕೇಳರಿಯದ ಹಿಮಪಾತ!

Epstein files: ನ್ಯಾಯಾಂಗ ಇಲಾಖೆ ವೆಬ್‌ಪುಟದಿಂದ ಟ್ರಂಪ್ ಫೋಟೋ ಸೇರಿ ಕನಿಷ್ಠ 16 ದಾಖಲೆಗಳು ಕಣ್ಮರೆ..!

ಚಳಿಗಾಲದ ಅಧಿವೇಶನ ಮುಕ್ತಾಯ: 2026-27ನೇ ಸಾಲಿನ ರಾಜ್ಯ ಬಜೆಟ್'ಗೆ ಸಿದ್ದರಾಮಯ್ಯ ಸಿದ್ಧತೆ: ಈ ಬಾರಿ ಬಜೆಟ್ ಗಾತ್ರ, ಸಾಲ ಪ್ರಮಾಣ ಹೆಚ್ಚಳ ಸಾಧ್ಯತೆ..!

SCROLL FOR NEXT