ಜೈಲಿನಿಂದ ಹೊರ ಬಂದ ನಟ ಶೀಜಾನ್ ಖಾನ್ 
ಬಾಲಿವುಡ್

ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಶೀಜಾನ್ ಖಾನ್‌ಗೆ ಜಾಮೀನು, 3 ತಿಂಗಳ ಬಳಿಕ ಜೈಲಿನಿಂದ ಹೊರಬಂದ ನಟ

ಬಾಲಿವುಡ್ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ಶೀಜಾನ್ ಖಾನ್‌ಗೆ ಕೊನೆಗೂ ಜಾಮೀನು ದೊರೆತಿದ್ದು, ಬರೊಬ್ಬರಿ 3 ತಿಂಗಳ ಬಳಿಕ ನಟ ಜೈಲಿನಿಂದ ಹೊರಗ ಬಂದಿದ್ದಾರೆ.

ಮುಂಬೈ: ಬಾಲಿವುಡ್ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ಶೀಜಾನ್ ಖಾನ್‌ಗೆ ಕೊನೆಗೂ ಜಾಮೀನು ದೊರೆತಿದ್ದು, ಬರೊಬ್ಬರಿ 3 ತಿಂಗಳ ಬಳಿಕ ನಟ ಜೈಲಿನಿಂದ ಹೊರಗ ಬಂದಿದ್ದಾರೆ.

ಅಲಿಬಾಬಾ ದಸ್ತಾನ್ ಏಕ್ ಕಾಬೂಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಶೀಜಾನ್ ಖಾನ್ ಜೈಲಿನಲ್ಲಿದ್ದರು. ಇದೀಗ ಸುಮಾರು ಮೂರು ತಿಂಗಳ ನಂತರ ಶೀಜನ್ ಗೆ ರಿಲೀಫ್ ಸಿಕ್ಕಿದ್ದು, ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಶೀಜಾನ್ ಖಾನ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. 

ಹೊರಗೆ ಬಂದ ಕೂಡಲೇ ಶೀಜನ್ ಮೊದಲು ತಂಗಿಯರನ್ನು ತಬ್ಬಿಕೊಂಡ ನಟ  ಭಾವುಕರಾದರು. ನಟನ ಕುಟುಂಬ ಸದಸ್ಯರು ಅವರನ್ನು ಬಿಡುಗಡೆ ಮಾಡಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಅದರ ಫಲವಾಗಿ ಮಾರ್ಚ್ 4, 2023 ರಂದು ಕೋರ್ಟ್ ಜಾಮೀನು ನೀಡಿತು. ಶಿಜಾನ್ ನನ್ನು ಒಂದು ಲಕ್ಷ ರೂಪಾಯಿ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮುಂಬೈನ ಥಾಣೆ ಕೇಂದ್ರ ಕಾರಾಗೃಹದಿಂದ ಶೀಜಾನ್ ಖಾನ್ ಹೊರಗೆ ಬಂದಿದ್ದಾರೆ.

ಈಗ ಶೀಜನ್ ಹೊರಗೆ ಬಂದಾಗ ನಟನ ಸಹೋದರಿ ಮತ್ತು ಅವರ ಕುಟುಂಬ ಸದಸ್ಯರು ತುಂಬಾ ಸಂತೋಷದಿಂದ ಸ್ವಾಗತಿಸಿದ್ದಾರೆ. ಶೀಜಾನ್ ಖಾನ್ ಅವರು ಮಾಸ್ಕ್ ಧರಿಸಿ ಜೈಲಿನಿಂದ ಹೊರಬಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT