ಬಾಲಿವುಡ್ ನಟಿ ವಿದ್ಯಾ ಬಾಲನ್ ಅರೆಬೆತ್ತಲೆ ಫೋಟೋ ವೈರಲ್!
ದ ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾ ಬಾಲನ್ ಅವರ ಅರೆಬೆತ್ತಲೆ ಫೋಟೋವೊಂದು ಇಂಟರ್ ನೆಟ್ ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡು ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ: ದ ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾ ಬಾಲನ್ ಅವರ ಅರೆಬೆತ್ತಲೆ ಫೋಟೋವೊಂದು ಇಂಟರ್ ನೆಟ್ ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡು ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಒಂದು ಕೈಯಿಂದ ನ್ಯೂಸ್ ಪೇಪರ್ ಹಿಡಿದು ಅಂಗಾಂಗ ಮುಚ್ಚಿಕೊಂಡಿರುವ, ಮತ್ತೊಂದು ಕೈಲಿ ಮಗ್ ಹಿಡಿದಿರುವ ವಿದ್ಯಾ ಬಾಲನ್, ಹೀಲ್ಸ್ ಧರಿಸಿದ್ದು, ಕಣ್ಣಿಗೆ ಸನ್ ಗ್ಲಾಸ್ ಧರಿಸಿದ್ದಾರೆ. ಈ ಫೋಟೋ ಕಂಡ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಸದಾ ಸೀರೆಯಲ್ಲೇ ವಿದ್ಯಾ ಬಾಲನ್, ಯಾಕೆ ಈ ರೀತಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳೇ ಕೇಳುತ್ತಿದ್ದಾರೆ. ಮತ್ತೆ ಕೆಲವರು ವಿದ್ಯಾ ಬಾಲನ್ ಅವರನ್ನು ‘ಡರ್ಟಿ ಸಿನಿಮಾ’ದ ಪಾತ್ರಕ್ಕೆ ಹೋಲಿಸಿದ್ದರೆ, ಇನ್ನೂ ಕೆಲವರು ಆ ಸೌಂದರ್ಯವನ್ನು ಹೊಗಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.