ಸತೀಶ್ ಕೌಶಿಕ್ 
ಬಾಲಿವುಡ್

15 ಕೋಟಿ ಆಸೆಗಾಗಿ ನಟ ಸತೀಶ್ ಕೌಶಿಕ್ ಕೊಲೆ: ಮಹಿಳೆಯಿಂದ ದೂರು, ತನಿಖೆಗಿಳಿದ ದೆಹಲಿ ಪೊಲೀಸರು!

ದಿವಂಗತ ನಟ ಸತೀಶ್ ಕೌಶಿಕ್ ಸಾವಿನ ಬಗ್ಗೆ ಆಘಾತಕಾರಿ ವಿಷಯವೊಂದು ಬಯಲಿಗೆ ಬಂದಿದ್ದು ಮಹಿಳೆಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ ನಟನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ದಿವಂಗತ ನಟ ಸತೀಶ್ ಕೌಶಿಕ್ ಸಾವಿನ ಬಗ್ಗೆ ಆಘಾತಕಾರಿ ವಿಷಯವೊಂದು ಬಯಲಿಗೆ ಬಂದಿದ್ದು ಮಹಿಳೆಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ ನಟನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಮಹಿಳೆ ಬೇರೆ ಯಾರೂ ಅಲ್ಲ ಸತೀಶ್ ಕೌಶಿಕ್ ಅವರ ಸ್ನೇಹಿತ ಮತ್ತು ಉದ್ಯಮಿ ವಿಕಲ್ ಮಾಲು ಅವರ ಎರಡನೇ ಪತ್ನಿ ಸಾನ್ವಿ ಮಾಲು. 15 ಕೋಟಿ ರುಪಾಯಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಪತಿ ವಿಕಲ್ ಮಾಲುನೇ ಸತೀಶ್ ಕೌಶಿಕ್‌ ಗೆ ವಿಷ ನೀಡಿ ಕೊಂದಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ತನ್ನ ಪತಿ ಸತೀಶ್ ಕೌಶಿಕ್‌ನಿಂದ 15 ಕೋಟಿ ರೂಪಾಯಿ ಪಡೆದಿದ್ದರು ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಗಂಡನ ಬಳಿ ಕೊಡಲು ಹಣ ಇಲ್ಲದ ಕಾರಣ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಪೊಲೀಸರಿಗೆ ಕೊಲೆ ಸಂಬಂಧ ಯಾವುದೇ ಪುರಾವೆ ಸಿಕ್ಕಿಲ್ಲ
ಮಾಧ್ಯಮಗಳ ಪ್ರಕಾರ, ದೆಹಲಿ ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಸತೀಶ್ ಕೌಶಿಕ್ ಅವರ ಅಸಹಜ ಸಾವಿನ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. ಮಹಿಳೆ ದೆಹಲಿ ಪೊಲೀಸರಿಗೆ ನೀಡಿರುವ ದೂರನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ಬಹಿರಂಗಪಡಿಸಿವೆ. ಆದರೆ ಈ ಆಪಾದಿತ ದೂರಿನ ಕುರಿತು ಅಂತಿಮ ನಿರ್ಧಾರವು ಇನ್ನೂ ಬರಬೇಕಿದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ದೂರಿನ ಸತ್ಯಾಸತ್ಯತೆಯನ್ನು ಖಚಿತಪಡಿಸುತ್ತಾರೆ ಅಥವಾ ನಿರಾಕರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ವರದಿ ಪ್ರಕಾರ, ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೈಋತ್ಯ-ಪಶ್ಚಿಮ) ರಾಜೀವ್ ಕುಮಾರ್ ಅವರನ್ನು ಉಲ್ಲೇಖಿಸಿ, 'ಸ್ಥಳೀಯ ಪೊಲೀಸರು ಕೌಶಿಕ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಅವರ ಸಾವಿನ ಬಗ್ಗೆ ಯಾವುದೇ ಅನುಮಾನಗಳನ್ನು ವ್ಯಕ್ತಪಡಿಸಿಲ್ಲ. ಇದುವರೆಗೆ ನಡೆದ ವಿಚಾರಣೆಗಳು ಯಾವುದೇ ಅನುಮಾನಾಸ್ಪದ ಅಥವಾ ಕೊಲೆಗೆ ಪೂರಕವಾದ ವಿಷಯಗಳು ಕಂಡುಬಂದಿಲ್ಲ. ಆದರೆ, ಪೊಲೀಸ್ ಕ್ರಮ ಮುಂದುವರಿದಿದೆ ಎಂದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ