ರಾಜ್ ಕುಮಾರ್ ಕೊಹ್ಲಿ 
ಬಾಲಿವುಡ್

ಹೃದಯಾಘಾತ: ಬಾಲಿವುಡ್ ಹಿರಿಯ ಚಿತ್ರ ನಿರ್ದೇಶಕ ರಾಜ್ ಕುಮಾರ್ ಕೊಹ್ಲಿ ನಿಧನ

ಬಾಲಿವುಡ್ ಹಿರಿಯ ಚಿತ್ರ ನಿರ್ದೇಶಕ ರಾಜ್ ಕುಮಾರ್ ಕೊಹ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮುಂಬೈ: ಬಾಲಿವುಡ್ ಹಿರಿಯ ಚಿತ್ರ ನಿರ್ದೇಶಕ ರಾಜ್ ಕುಮಾರ್ ಕೊಹ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

70 ರ ದಶಕದಲ್ಲಿ ನಾಗಿನ್ ಮತ್ತು ಜಾನಿ ದುಷ್ಮನ್‌ನಂತಹ  ಹಿಟ್‌ ಚಿತ್ರ ನಿರ್ದೇಶನದ ಮೂಲಕ ಅವರು ಭಾರತೀಯ ಚಿತ್ರರಂಗದಲ್ಲಿ  ಹೆಸರುವಾಸಿಯಾಗಿದ್ದರು. ಲೂಟೆರಾ, ಕಹಾನಿ ಹಮ್ ಸಬ್ ಕಿ (1970) ನೌಕರ್ ಬಿವಿ ಕಾ (1983) ಮತ್ತು ಇಂಟೆಕಾಮ್ (1988) ಅವರು ನಿರ್ದೇಶಿಸಿದ ಇತರ ಚಿತ್ರಗಳು. 1990ರಿಂದ ಚಿತ್ರ ನಿರ್ದೇಶನದಿಂದ ಅವರು ದೂರ ಉಳಿದಿದ್ದರು. 

ಜಾನಿ ದುಷ್ಮನ್ ಅವರು ನಿರ್ದೇಶಿಸಿದ ಕೊನೆಯ ಚಿತ್ರ. ಪಂಜಾಬಿ ಚಿತ್ರ ತಾರೆಯನ್ನು ವಿವಾಹವಾಗಿದ್ದ ಕೊಹ್ಲಿ ಅವರಿಗೆ ಗೋಗಿ ಮತ್ತು ಅರ್ಮಾನ್ ಇಬ್ಬರು ಮಕ್ಕಳಿದ್ದಾರೆ. ಅರ್ಮಾನ್ ಕೂಡಾ ನಟರಾಗಿದ್ದು, 2002ರಲ್ಲಿ 'ಜಾನಿ ದುಷ್ಮನ್: ಏಕ್ ಅನೋಖಿ' ಕಹಾನಿ ಬಿಡುಗಡೆ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ