ನರ್ಗೀಸ್ ಫಕ್ರಿ 
ಬಾಲಿವುಡ್

ಮಾಜಿ ಬಾಯ್‌ಫ್ರೆಂಡ್‌ ಕೊಲೆ ಕೇಸ್‌ನಲ್ಲಿ ಬಾಲಿವುಡ್‌ ನಟಿ ನರ್ಗೀಸ್ ಫಕ್ರಿ ಸಹೋದರಿ ಅಲಿಯಾ ಬಂಧನ!

ಮಾಜಿ ಪ್ರಿಯಕರ 35 ವರ್ಷದ ಎಡ್ವರ್ಡ್ ಜೇಕಬ್ಸ್ ಮತ್ತು 33 ವರ್ಷದ ಅನಸ್ತಾಸಿಯಾ ಎಟಿಯೆನ್ನೆ ಎಂಬಾಕೆಯನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಲಾಗಿದೆ. ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಗ್ಯಾರೇಜ್‌ಗೆ 43 ವರ್ಷದ ಅಲಿಯಾ ಫಕ್ರಿ ಬೆಂಕಿ ಹಚ್ಚಿದ್ದರು.

ನ್ಯೂಯಾರ್ಕ್: ಮಾಜಿ ಪ್ರಿಯತಮ ಹಾಗೂ ಆತನ ಸ್ನೇಹಿತರೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟಿ ನರ್ಗೀಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

ಮಾಜಿ ಪ್ರಿಯಕರ 35 ವರ್ಷದ ಎಡ್ವರ್ಡ್ ಜೇಕಬ್ಸ್ ಮತ್ತು 33 ವರ್ಷದ ಅನಸ್ತಾಸಿಯಾ ಎಟಿಯೆನ್ನೆ ಎಂಬಾಕೆಯನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಲಾಗಿದೆ.ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಗ್ಯಾರೇಜ್‌ಗೆ 43 ವರ್ಷದ ಅಲಿಯಾ ಫಕ್ರಿ ಬೆಂಕಿ ಹಚ್ಚಿದ್ದರು. ಜತೆಗೆ, ‘ನೀವೆಲ್ಲರೂ ಇಂದು ಸಾಯುತ್ತೀರಿ’ ಎಂದು ಕೂಗಾಡಿದ್ದರು ಎಂದು ವರದಿಯಾಗಿದೆ.

ಬೆಂಕಿ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸಿದ್ದರಿಂದ ಎಡ್ವರ್ಡ್ ಜೇಕಬ್ಸ್ ಮತ್ತು ಅನಸ್ತಾಸಿಯಾ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕ್‌ ಅಪ್‌ ಮಾಡಿಕೊಂಡಿದ್ದ. ಆದರೂ ಅಲಿಯಾ, ನನ್ನ ಮಗನನ್ನು ಹಿಂಬಾಲಿಸುತ್ತಿದ್ದಳು ಎಂದು ಜೇಕಬ್ಸ್ ಅವರ ತಾಯಿ ಆರೋಪಿಸಿದ್ದಾರೆ.

ಜೇಕಬ್ಸ್ ಕುಟುಂಬಸ್ಥರ ಆರೋಪದ ಬಗ್ಗೆ ನರ್ಗಿಸ್ ಫಕ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಅವರ ತಾಯಿ ಪ್ರತಿಕ್ರಿಯಿಸಿದ್ದು, ‘ನನ್ನ ಮಗಳು ಅಲಿಯಾ ಯಾರನ್ನಾದರೂ ಕೊಲೆ ಮಾಡುತ್ತಾಳೆ ಎಂಬುದನ್ನು ನಂಬಲು ಆಗುತ್ತಿಲ್ಲ. ಅವಳು ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಸಹಾಯ ಮಾಡಲು ಪ್ರಯತ್ನಿಸಿದ್ದಳು’ ಎಂದು ಹೇಳಿದ್ದಾರೆ. ಅಲಿಯಾ ಫಕ್ರಿಗೆ 43 ವರ್ಷ ವಯಸ್ಸಾಗಿದೆ. ನಟಿ ನರ್ಗೀಸ್ ಫಕ್ರಿ ಅವರ ಕಿರಿಯ ಸಹೋದರಿಯಾಗಿದ್ದಾರೆ. ಅಲಿಯಾ ಮತ್ತು ನರ್ಗೀಸ್ ಅವರ ತಂದೆ ಮೊಹಮ್ಮದ್ ಫಕ್ರಿ ಪಾಕಿಸ್ತಾನದವರಾಗಿದ್ದು, ಅಲಿಯ ಹುಟ್ಟಿದಾಗಿನಿಂದ ನ್ಯೂಯಾರ್ಕ್‌ನ ಕ್ವೀನ್‌ನಲ್ಲಿಯೇ ವಾಸವಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್