ಮುಂಬೈ: ಬಾಲಿವುಡ್ ನ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರನ್ನು ಅನಾರೋಗ್ಯ ಹಿನ್ನೆಲೆಯಲ್ಲಿ ಮುಂಬೈನ ಉಪನಗರದಲ್ಲಿರುವ ಲೀಲಾವತಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ಸುಭಾಷ್ ಘಾಯ್ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ, ಅಸ್ವಸ್ಥತೆ, ತಲೆಸುತ್ತುವಿಕೆ, ಜ್ಞಾಪಕ ಶಕ್ತಿ ಕೊರತೆ ಮತ್ತು ಮಾತನಾಡಲು ತೊಂದರೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮ್ ಲಖನ್, ಖಲ್ನಾಯಕ್, ಪರ್ದೇಸ್ ಮತ್ತು ತಾಲ್ ಮುಂತಾದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
ಸುಭಾಷ್ ಘಾಯ್ ಅವರ ಪ್ರತಿನಿಧಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅವರನ್ನು ಸಾಮಾನ್ಯ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಭಾಷ್ ಘಾಯ್ ಅವರ ಆರೋಗ್ಯ ಈಗ ಸುಧಾರಿಸಿದೆ. ಎಂದಿನಂತೆ ತಪಾಸಣೆಗೆ ದಾಖಲಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಕಾಳಜಿ ಹಾರೈಕೆಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
79 ವರ್ಷದ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರು ಪತ್ರಕರ್ತ ಮತ್ತು ಲೇಖಕ ಸುವೀನ್ ಸಿನ್ಹಾ ಜೊತೆ ಸೇರಿ ಬರೆದ ಕರ್ಮಾಸ್ ಚೈಲ್ಡ್ ಎಂಬ ಶೀರ್ಷಿಕೆಯ ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದ್ದರು.