ನಟ ಅನ್ನು ಕಪೂರ್ ಅಭಿನಯದ 'ಹಮಾರೆ ಬಾರಹ್' ಚಿತ್ರಕ್ಕೆ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗಿರುವಂತೆಯೇ, ಈ ಸಿನಿಮಾ ವೀಕ್ಷಿಸಿದ್ದು, ಇದರಲ್ಲಿ ಕುರಾನ್ ಅಥವಾ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾದ ಯಾವುದೇ ಆಕ್ಷೇಪಾರ್ಹದದ್ದು ಏನೂ ಇಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ. ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಯ ಉದ್ದೇಶ ಹೊಂದಿದೆ. ಭಾರತೀಯ ಸಾರ್ವಜನಿಕರು "ಮೋಸಗಾರರಲ್ಲ ಅಥವಾ ಮೂರ್ಖರಲ್ಲ" ಎಂದು ಹೇಳಿದೆ ಎಂದು ಹೈಕೋರ್ಟ್ ಪ್ರತಿಪಾದಿಸಿದೆ.
ಚಿತ್ರದ ಮೊದಲ ಟ್ರೇಲರ್ ಆಕ್ಷೇಪಾರ್ಹವಾಗಿತ್ತು. ಆದರೆ ಅದನ್ನು ತೆಗೆದುಹಾಕಲಾಗಿದೆ ಮತ್ತು ಅಂತಹ ಎಲ್ಲಾ ಆಕ್ಷೇಪಾರ್ಹ ದೃಶ್ಯಗಳನ್ನು ಚಲನಚಿತ್ರದಿಂದ ಡಿಲೀಟ್ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿಪಿ ಕೊಲಬಾವಾಲ್ಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠ ಹೇಳಿದೆ. ಇದು ವಾಸ್ತವವಾಗಿ "ಚಿಂತನಾತ್ಮಕ ಚಲನಚಿತ್ರ" ಎಂದು ನ್ಯಾಯಾಲಯ ಪರಿಗಣಿಸಿದ್ದು, ಪ್ರೇಕ್ಷಕರು ತಮ್ಮ ಜ್ಞಾನವನ್ನು ಮನೆಯಲ್ಲಿ ಇರಿಸಿಕೊಳ್ಳಲು ನಿರೀಕ್ಷಿಸುವ ರೀತಿಯಲ್ಲಿ ಇಲ್ಲ. ಕೇವಲ ಚಿತ್ರ ವೀಕ್ಷಿಸಿ ಆನಂದಿಸಿ ಎಂದು ಹೇಳಿತು.
"ಈ ಸಿನಿಮಾ ವಾಸ್ತವವಾಗಿ ಮಹಿಳೆಯರ ಉನ್ನತಿಗಾಗಿಯೇ ಇದೆ. ಚಿತ್ರದಲ್ಲಿ ಮೌಲನಾ ಒಬ್ಬರು ಕುರಾನ್ ಅನ್ನು ತಪ್ಪಾಗಿ ಅರ್ಥೈಸುವುದು ಇದೆ. ವಾಸ್ತವವಾಗಿ ಒಬ್ಬ ಮುಸ್ಲಿಂ ವ್ಯಕ್ತಿ ಅದೇ ದೃಶ್ಯವನ್ನು ವಿರೋಧಿಸುತ್ತಾನೆ. ಆದ್ದರಿಂದ ಜನರು ತಮ್ಮ ಮನಸ್ಸಿನ ಮಾತು ಕೇಳಬೇಕು. ಅಂತಹ ಮೌಲಾನಾಗಳನ್ನು ಕುರುಡಾಗಿ ಅನುಸರಿಸಬಾರದು ಎಂದು ತೋರಿಸುತ್ತದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿದೆ ಮತ್ತು ಕುರಾನ್ ಹೇಳುವುದನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಲನಚಿತ್ರವನ್ನು ನಿಷೇಧಿಸುವಂತೆ ಕೋರಿ ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ನಲ್ಲಿ ಅನೇಕ ಅರ್ಜಿಗಳ ಸಲ್ಲಿಕೆಯಾಗಿತ್ತು.