ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

100 ಕೋಟಿ ಕ್ಲಬ್ ಸೇರಿದ ಸನ್ನಿ ಡಿಯೋಲ್ ಅಭಿನಯದ 'ಜಾಟ್'

ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿವೆ.

ಸನ್ನಿ ಡಿಯೋಲ್
Lingaraj Badiger
Updated On : 21 Apr 2025, 7:42 pm

ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ 'ಜಾಟ್' ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 102.13 ಕೋಟಿ ರೂ. ಗಳಿಸಿದೆ ಎಂದು ನಿರ್ಮಾಪಕರು ಸೋಮವಾರ ತಿಳಿಸಿದ್ದಾರೆ.

ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿವೆ. ಜಾಟ್ ಚಿತ್ರ ಇದೇ ಏಪ್ರಿಲ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಮೈತ್ರಿ ಮೂವಿ ಮೇಕರ್ಸ್ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಹಂಚಿಕೊಂಡಿದೆ.

Advertisement

Advertisement

Also Read

ದಕ್ಷಿಣ ಚಿತ್ರರಂಗದ ಜನರು ನಮ್ಮಿಂದ ಕಲಿತು ಮುಂದೆ ಸಾಗಿದ್ದಾರೆ, ನಾವು ಹಿಂದೆ ಉಳಿದಿದ್ದೇವೆ: ಸನ್ನಿ ಡಿಯೋಲ್

"ಸಾಮೂಹಿಕ ಕಮರ್ಷಿಯಲ್ ಸಿನಿಮಾದ ಸಂಭ್ರಮ. ಸಿಂಗಲ್ ಸ್ಕ್ರೀನ್‌ಗಳಿಗೆ ಹಬ್ಬ ಮುಂದುವರೆದಿದೆ. #JAAT ವಿಶ್ವಾದ್ಯಂತ 102.13 ಕೋಟಿ ರೂ. ಗಳಿಸಿದೆ" ಎಂದು ಮೈತ್ರಿ ಮೂವಿ ಮೇಕರ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಈ ಚಿತ್ರದಲ್ಲಿ ರಣದೀಪ್ ಹೂಡಾ, ವಿನೀತ್ ಕುಮಾರ್ ಸಿಂಗ್ ಮತ್ತು ಸಯಾಮಿ ಖೇರ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement