ಮುಂಬೈ: 'Udaipur Files'ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬೆನ್ನಲ್ಲೇ ನಿರ್ಮಾಪಕ ಅಮಿತ್ ಜಾನಿ ಅವರಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ.
ಸೆನ್ಸಾರ್ ವಿಳಂಬದ ನಂತರ ಅಂತಿಮವಾಗಿ ಆಗಸ್ಟ್ 8 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ವಿಜಯ್ ರಾಜ್ ನಾಯಕನಾಗಿ ನಾಯಕ ನಟರಾಗಿ ನಟಿಸಿದ್ದು, ಭರತ್ ಎಸ್ ಶ್ರೀನೇಟ್ ಮತ್ತು ಜಯಂತ್ ಸಿನ್ಹಾ ನಿರ್ದೇಶಿಸಿದ್ದಾರೆ.
ಈ ಕುರಿತು ನಿನ್ನೆ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮಿತ್ ಜಾನಿ, ತನಗೆ ಅಪರಿಚಿತ ಸಂಖ್ಯೆಯಿಂದ ಪದೇ ಪದೇ ಕರೆಗಳು ಬರುತ್ತಿವೆ. ಕರೆ ಮಾಡಿದವರು ಬಾಂಬ್‌ನಿಂದ ಕೊಲ್ಲುವುದಾಗಿ ಅಥವಾ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
971566707310 ಸಂಖ್ಯೆಯಿಂದ ಇಂತಹ ನಿರಂತರ ಬೆದರಿಕೆ ಸಂದೇಶ ಬಂದಿವೆ. ಕರೆ ಮಾಡಿದ ವ್ಯಕ್ತಿ ಬಿಹಾರದವನೆಂದು ಹೇಳಿಕೊಂಡಿದ್ದಾನೆ. ಆತನ ಹೆಸರು ತಬ್ರೇಜ್ ಎಂದು ಹೇಳುತ್ತಾನೆ. ಆತನ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಮತ್ತು ಆನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
'ಉದಯಪುರ ಫೈಲ್ಸ್' ಚಿತ್ರ 2022 ರಲ್ಲಿ ಮಾಜಿ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಹಾಡ ಹಾಗಲೇ ಹತ್ಯೆಯಾದ ಟೈಲರ್ ಕನ್ಹಯ್ಯಲಾಲ್ ಹತ್ಯೆಯನ್ನು ಆಧಾರಿಸಿದೆ.
ಜುಲೈ 11 ರಂದು ಬಿಡುಗಡೆಯಾಗಬೇಕಿದ್ದ 'ಉದಯಪುರ ಫೈಲ್ಸ್' ಸೆನ್ಸಾರ್ ವಿಳಂಬದಿಂದಾಗಿ ಆಗಸ್ಟ್ ನಲ್ಲಿ ಬಿಡುಗಡೆಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿತು.