ಸಿದ್ದಾರ್ಥ್, ನೀಲಂ ಉಪಾಧ್ಯಾಯ 
ಬಾಲಿವುಡ್

ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ದಾರ್ಥ್, ನೀಲಂ ಉಪಾಧ್ಯಾಯ ದಾಂಪತ್ಯ ಜೀವನಕ್ಕೆ ಪ್ರವೇಶ!

ಪ್ರಿಯಾಂಕಾ ಅವರ ಸೋದರ ಸಂಬಂಧಿ ಪರಿಣಿತಿ ಚೋಪ್ರಾ, ಅವರ ರಾಜಕಾರಣಿ ಪತಿ ರಾಘವ್ ಚಡ್ಡಾ ಮತ್ತು ನೀತಾ ಅಂಬಾನಿ, ನಿಕ್ ಅವರ ಪೋಷಕರಾದ ಡೆನಿಸ್ ಮಿಲ್ಲರ್-ಜೋನಸ್ ಮತ್ತು ಕೆವಿನ್ ಜೋನಾಸ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ತಮ್ಮ ಸಿದ್ದಾರ್ಥ್ ಹಾಗೂ ನಟಿ ನೀಲಂ ಉಪಾಧ್ಯಾಯ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜುಹುವಿನ ಆರ್ಮಿ ಕ್ಲಬ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ನಡೆಯಿತು. ಸಂಜೆ 4-30 ಮದುವೆ ದಿಬ್ಬಣ ಹೊರಡುವುದರೊಂದಿಗೆ ವಿವಾಹ ಮಹೋತ್ಸವ ಆರಂಭವಾಯಿತು. ಪ್ರಿಯಾಂಕಾ ಮತ್ತು ನಿಕ್ ಸೇರಿದಂತೆ ಕುಟುಂಬಸ್ಥರು ಸಂಗೀತದೊಂದಿಗೆ ನೃತ್ಯ ಪ್ರದರ್ಶನ ಮೂಲಕ ಸಂಭ್ರಮಿಸಿದರು.

ಪ್ರಿಯಾಂಕಾ ಅವರ ಸೋದರ ಸಂಬಂಧಿ ಪರಿಣಿತಿ ಚೋಪ್ರಾ, ಅವರ ರಾಜಕಾರಣಿ ಪತಿ ರಾಘವ್ ಚಡ್ಡಾ ಮತ್ತು ನೀತಾ ಅಂಬಾನಿ , ನಿಕ್ ಅವರ ಪೋಷಕರಾದ ಡೆನಿಸ್ ಮಿಲ್ಲರ್-ಜೋನಸ್ ಮತ್ತು ಕೆವಿನ್ ಜೋನಾಸ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂಜೆ 6-6:30 ರ ಸುಮಾರಿಗೆ ಮದುವೆ ಪ್ರಾರಂಭವಾಯಿತು. ತದನಂತರ ಮುಂಬೈನ ಓಶಿವಾರಾ ಪ್ರದೇಶದ ಬಟರ್‌ಫ್ಲೈ ಹೈ ರೆಸ್ಟೊರೆಂಟ್‌ನಲ್ಲಿ ಪಾರ್ಟಿ ನಡೆಯುವುದಾಗಿ ಮೂಲಗಳು ತಿಳಿಸಿವೆ.

ಸಿದ್ಧಾರ್ಥ್ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಇನ್ನೂ ನೀಲಂ Mr.7, Action 3D, Unnodu Oru Naal, ಮತ್ತು Om Shanthi Om ನಂತಹ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

SCROLL FOR NEXT