ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಎಂಬುದು ಸಾಮಾನ್ಯ ಸಂಗತಿಯಾಗಿಬ್ಬಿಟಿದೆ. ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದ ನಂತರ ಇದೀಗ ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಿವೆ.
37 ವರ್ಷಗಳ ದಾಂಪತ್ಯ ಜೀವನದ ನಂತರ ಉಂಟಾದ ಮನಸ್ತಾಪವೇ ಅವರಿಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ. ಕೆಲದಿನಗಳಿಂದ ಅವರು ಒಟ್ಟಿಗೆ ವಾಸಿಸುತ್ತಿರಲಿಲ್ಲ ಎಂದು ಕೆಲವೊಂದು ಮಾಧ್ಯಮಗಳು ಹೇಳಿವೆ.
ಅಲ್ಲದೇ ಗೋವಿಂದ ಯುವ ನಟಿಯೊಂದಿಗೆ ಸಂಬಂಧ ಹೊಂದಿರುವ ಆರೋಪವೂ ಕೇಳಿಬಂದಿದೆ. ಆದರೆ, ವಿಚ್ಛೇದನದ ಸುದ್ದಿಯನ್ನು ದಂಪತಿ ಇನ್ನೂ ದೃಢಿಕರಿಸಿಲ್ಲ. 61 ವರ್ಷದ ಗೋವಿಂದ ಅವರಿಗೆ ಸುನೀತಾ ಈಗಾಗಲೇ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುನೀತಾ ವಿಚ್ಛೇದನ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದರು.
ನಾವು ಮದುವೆಯಾಗಿ 37 ವರ್ಷಗಳು ಆಗಿವೆ. ಪತಿ ಎಲ್ಲಿಗೆ ಹೋಗುತ್ತಾರೆ? ಏನು ಮಾಡುತ್ತಾರೆ ಎಂದು ನನಗೆ ತಿಳಿದಿಲ್ಲ .ಗೋವಿಂದ ಅವರೊಂದಿಗೆ ತಾವು ವಾಸಿಸುತ್ತಿಲ್ಲ. ನಾನು ಮಕ್ಕಳೊಂದಿಗೆ ಫ್ಲ್ಯಾಟ್‌ನಲ್ಲಿದ್ದು, ಎದುರಿನ ಬಂಗಲೆಯಲ್ಲಿ ಗೋವಿಂದ ಒಬ್ಬರೇ ಇರುವುದಾಗಿಯೂ ಮಾಹಿತಿ ನೀಡಿದ್ದರು. ಆತ ಯಾವಾಗಲೂ ಕೆಲಸದಲ್ಲಿ ಬ್ಯುಸಿ ಇರುತ್ತಾನೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ನೋಡಲು ಹೋದ ಸಮಯವು ನನಗೆ ನೆನಪಿಲ್ಲ. ನನ್ನ ಮುಂದಿನ ಜನ್ಮದಲ್ಲಿ ಅವನು ನನ್ನ ಗಂಡನಾಗಬಾರದು ಎಂದು ಅವರಿಗೆ ಹೇಳಿದ್ದೆ ಎಂದು ಸುನೀತಾ ಹೇಳಿಕೊಂಡಿದ್ದರು.
ಗೋವಿಂದ ಮತ್ತು ಸುನೀತಾ ಅವರು 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಟಿನಾ ಅಜುಜಾ ಮತ್ತು ಯಶವರ್ಧನ್ ಅಹುಜಾ ಎಂಬ ಮಕ್ಕಳಿದ್ದಾರೆ.