ಸ್ಕೈ ಫೋರ್ಸ್ ಚಿತ್ರದ ಸ್ಟಿಲ್ 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ Sky Force ಅಬ್ಬರ: ಮೂರು ದಿನಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ಗಳಿಸಿದ್ದೆಷ್ಟು?

ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಹೊಸಬರಾದ ವೀರ್ ಪಹಾರಿಯಾ ನಟನೆಯ 'ಸ್ಕೈ ಫೋರ್ಸ್' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 92.90 ಕೋಟಿ ರೂ. ಗಳಿಸಿದೆ.

ಭಾರತದ ಮೊದಲ ಮತ್ತು ಅತ್ಯಂತ ಮಾರಕ ವೈಮಾನಿಕ ದಾಳಿಯ ಕಥೆಯನ್ನು ಒಳಗೊಂಡಿರುವ ಸ್ಕೈ ಫೋರ್ಸ್ ಚಿತ್ರವು ಶುಕ್ರವಾರ (ಜನವರಿ 24) ದಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಚಿತ್ರವನ್ನು ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದು, ಪ್ರೊಡಕ್ಷನ್ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಗಳಿಕೆಯ ಕುರಿತು ಮಾಹಿತಿ ನೀಡಿದೆ.

'ಸ್ಕೈ ಫೋರ್ಸ್' ಹೊಸ ಎತ್ತರಕ್ಕೆ ಏರುತ್ತಿದೆ, ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಪ್ರೇಕ್ಷಕರ ನೆಚ್ಚಿನ ಚಿತ್ರವಾಗಿ ಆಗಿ ಹೊರಹೊಮ್ಮುತ್ತಿದೆ! ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ Sky Force' ಎಂದು ಬರೆದಿದೆ. ಪೋಸ್ಟ್‌ನಲ್ಲಿ ಲಗತ್ತಿಸಲಾದ ಪೋಸ್ಟರ್ ಚಿತ್ರದ ದೇಶೀಯ ಗಲ್ಲಾಪೆಟ್ಟಿಗೆಯ ಸಂಗ್ರಹದ ಮಾಹಿತಿಯನ್ನು ಹಂಚಿಕೊಂಡಿದೆ.

ಚಿತ್ರ ಬಿಡುಗಡೆಯಾದ ಮೊದಲ ದಿನ 15.30 ಕೋಟಿ ರೂಪಾಯಿ ಗಳಿಸಿದ ಚಿತ್ರವು ಎರಡನೇ ದಿನ ಚಿತ್ರವು 26.30 ಕೋಟಿ ರೂ. ಗಳಿಸಿತು ಮತ್ತು ಭಾನುವಾರದಂದು 31.60 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.

'ಸ್ಕೈ ಫೋರ್ಸ್' ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 86.40 ಕೋಟಿ ರೂ. ಗಳಿಕೆ ಕಂಡಿದೆ ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 92.90 ಕೋಟಿ ರೂ. ಗಳಿಸಿದೆ.

ಚಿತ್ರವು 1965 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕಾಣೆಯಾದ IAF ಅಧಿಕಾರಿ ಟಿ ವಿಜಯ (ಪಹಾರಿಯಾ) ಅವರ ಸುತ್ತ ಸುತ್ತುತ್ತದೆ.

ಚಿತ್ರದಲ್ಲಿ ಅಕ್ಷಯ್ ವಿಂಗ್ ಕಮಾಂಡರ್ KO ಅಜುಹಾ (ನಿಜ ಜೀವನದ OP ತನೇಜಾ ಅವರಿಂದ ಪ್ರೇರಿತ) ಮತ್ತು ಟಿ ವಿಜಯಾ ಪಾತ್ರದಲ್ಲಿ ವೀರ್ ಪಹರಿಯಾ (ಅಜ್ಜಮಾಡ ಬೊಪ್ಪಯ್ಯ ದೇವಯ್ಯ ಅವರಿಂದ ಪ್ರೇರಿತ) ನಟಿಸಿದ್ದಾರೆ. ಸ್ಕೈ ಫೋರ್ಸ್ ಚಿತ್ರದಲ್ಲಿ ನಿಮ್ರತ್ ಕೌರ್ ಮತ್ತು ಸಾರಾ ಅಲಿ ಖಾನ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ