ಆಪರೇಷನ್ ಸಿಂಧೂರ್ ಹೆಸರಲ್ಲಿ ಸಿನಿಮಾ 
ಬಾಲಿವುಡ್

'ಖ್ಯಾತಿ ಗಳಿಸಲೋ ಅಥವಾ ಹಣ ಗಳಿಸಲೋ Operation Sindoor ಘೋಷಿಸಲಿಲ್ಲ': ಕ್ಷಮೆ ಕೋರಿದ ನಿರ್ದೇಶಕ

ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ವೀರೋಚಿತ ಪ್ರಯತ್ನಗಳಿಂದ ಪ್ರೇರಿತವಾದ ಆಪರೇಷನ್ ಸಿಂಧೂರ್ ಆಧಾರಿತ ಚಲನಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದಕ್ಕಾಗಿ ನನ್ನ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ.

ಮುಂಬೈ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ Operation Sindoor ಕಾರ್ಯಾಚರಣೆ ಹೆಸರಲ್ಲೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ಚಿತ್ರ ನಿರ್ದೇಶಕ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.

ಹೌದು.. ಆಪರೇಷನ್ ಸಿಂಧೂರ್ ಚಿತ್ರದ ಘೋಷಣೆಯ ನಂತರ, ನಿರ್ದೇಶಕ ಉತ್ತಮ್ ಮಹೇಶ್ವರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದೇಶದ ರಕ್ಷಣೆಗಾಗಿ ನಡೆಸಿದ ಕಾರ್ಯಾಚರಣೆಯ ಹೆಸರನ್ನೇ ಲಾಭಕ್ಕಾಗಿ ನಿರ್ದೇಶಕರು ಬಳಸಿಕೊಳ್ಳುತ್ತಿದ್ದಾರೆ ಎಂದು ವ್ಯಾಪಕ ಟೀಕೆಗಳು ಬಂದಿತ್ತು. ಇದೀಗ ಈ ಎಲ್ಲ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಉತ್ತಮ್ ಮಹೇಶ್ವರಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಚಿತ್ರದ ಹಿಂದಿನ ಉದ್ದೇಶವು ಯಾರ ಭಾವನೆಗಳನ್ನು ನೋಯಿಸುವುದು ಅಥವಾ ಪ್ರಚೋದಿಸುವುದು ಅಲ್ಲ. ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ವೀರೋಚಿತ ಪ್ರಯತ್ನಗಳಿಂದ ಪ್ರೇರಿತವಾದ ಆಪರೇಷನ್ ಸಿಂಧೂರ್ ಆಧಾರಿತ ಚಲನಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದಕ್ಕಾಗಿ ನನ್ನ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ.

ಯಾರ ಭಾವನೆಗಳನ್ನು ನೋಯಿಸುವುದು ಅಥವಾ ಪ್ರಚೋದಿಸುವುದು ಎಂದಿಗೂ ನನ್ನ ಉದ್ದೇಶವಾಗಿರಲಿಲ್ಲ. ನಮ್ಮ ಸೈನಿಕರು ಮತ್ತು ನಾಯಕತ್ವದ ಧೈರ್ಯ, ತ್ಯಾಗ ಮತ್ತು ಶಕ್ತಿಯಿಂದ ನಾನು ಪ್ರಭಾವಿತನಾದೆ ಮತ್ತು ಈ ಪ್ರಬಲ ಕಥೆಯನ್ನು ತೆರೆ ಮೇಲೆ ತರಲು ಬಯಸುತ್ತೇನೆ ಎಂದು ಮಹೇಶ್ವರಿ ಸ್ಪಷ್ಟಪಡಿಸಿದ್ದಾರೆ.

ಖ್ಯಾತಿಗಳಿಸಲೋ ಅಥವಾ ಹಣಗಳಿಸಲೋ Operation Sindoor ಘೋಷಿಸಲಿಲ್ಲ

ಈ ಚಿತ್ರವನ್ನು ನಾನು ಖ್ಯಾತಿಗಳಿಸಲೋ ಅಥವಾ ಹಣಗಳಿಸಲೆಂದು ಘೋಷಣೆ ಮಾಡಲಿಲ್ಲ. ಈ ಚಿತ್ರ ಸಿನಿಮೀಯ ಉದ್ಯಮಕ್ಕಿಂತ ದೊಡ್ಡದು. ಇದು ಕೇವಲ ಚಲನಚಿತ್ರವಲ್ಲ, ಇದು ಇಡೀ ರಾಷ್ಟ್ರದ ಭಾವನೆ ಮತ್ತು ಜಾಗತಿಕವಾಗಿ ದೇಶದ ಸಾಮಾಜಿಕ ಚಿತ್ರಣವಾಗಿರಲಿದೆ ಎಂದು ಹೇಳಿದರು.

ರಾಷ್ಟ್ರದ ಮೇಲಿನ ಗೌರವ ಮತ್ತು ಪ್ರೀತಿಯಿಂದ ರಚಿಸಲಾಗಿದೆಯೇ ಹೊರತು ಖ್ಯಾತಿ ಅಥವಾ ಹಣಗಳಿಕೆಗಾಗಿ ಅಲ್ಲ. ಆದಾಗ್ಯೂ, ಸಮಯ ಮತ್ತು ಸೂಕ್ಷ್ಮತೆಯು ಕೆಲವರಿಗೆ ಅನಾನುಕೂಲ ಅಥವಾ ನೋವನ್ನು ಉಂಟುಮಾಡಿರಬಹುದು ಎಂದು ನನಗೆ ಅರ್ಥವಾಗಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕಾಗಿ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಅವರು, ಹುತಾತ್ಮರ ಕುಟುಂಬಗಳೊಂದಿಗೆ ನಾವಿದ್ದೇವೆ. ನಮಗೆ ಹೊಸ ಬೆಳಿಗ್ಗೆ ನೀಡಲು ಗಡಿಯಲ್ಲಿ ಹಗಲಿರುಳು ಹೋರಾಡುತ್ತಿರುವ ಧೈರ್ಯಶಾಲಿ ಯೋಧರೊಂದಿಗೆ ನಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳು ಯಾವಾಗಲೂ ಇರುತ್ತವೆ" ಎಂದು ಪೋಸ್ಟ್ ಮಾಡಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆಯಿಂದ ಪ್ರೇರಿತವಾದ ಈ ಚಿತ್ರವನ್ನು ನಿಜ ಜೀವನದ ಘಟನೆಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ ಎಂದು ಈ ಹಿಂದೆ ಚಿತ್ರತಂಡ ಹೇಳಿತ್ತು. ಈ ಚಿತ್ರವನ್ನು ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ನಿರ್ಮಿಸುತ್ತಿದ್ದಾರೆ ಮತ್ತು ಅದರ ಪಾತ್ರವರ್ಗವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT