ಧರ್ಮೇಂದ್ರ 
ಬಾಲಿವುಡ್

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಈ ವಾರದ ಆರಂಭದಲ್ಲಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಒಂದೇ ವಾರದ ಅಂತರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಮುಂಬೈ: ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ 89 ವರ್ಷದ ನಟ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ಶನಿವಾರ ತಿಳಿಸಿವೆ. ಈ ವಾರದ ಆರಂಭದಲ್ಲಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಒಂದೇ ವಾರದ ಅಂತರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಈ ಹಿಂದಿನ ವೈದ್ಯಕೀಯ ಪರೀಕ್ಷಾ ವರದಿಗಳು ತಡವಾದ್ದರಿಂದ ಎಲ್ಲಾ ದಿನನಿತ್ಯದ ತಪಾಸಣೆಗಳು ಸರಿಯಾಗಿ ನಡೆಯುವವರೆಗೆ ಅವರು ಅಲ್ಲಿಯೇ ಇರುವುದು ಉತ್ತಮ ಎಂದು ಕುಟುಂಬ ನಿರ್ಧರಿಸಿದೆ. ಅವರಿಗೆ ವಯಸ್ಸಾಗಿದ್ದು, ವೈದ್ಯರಿಂದ ಸರಿಯಾದ ಗಮನದ ಅಗತ್ಯವಿದೆ. ಚಿಂತಿಸಲು ಏನೂ ಇಲ್ಲ" ಎಂದು ಕೌಟುಂಬಿಕ ಮೂಲಗಳು ತಿಳಿಸಿವೆ.

ಈ ವರ್ಷದ ಏಪ್ರಿಲ್‌ನಲ್ಲಿ, ಧರ್ಮೇಂದ್ರ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಮಯದಲ್ಲಿ, ಮುಂಬೈ ಆಸ್ಪತ್ರೆಯಿಂದ ಹೊರಬರುವಾಗ ಅವರ ಬಲಗಣ್ಣಿನ ಮೇಲೆ ಬ್ಯಾಂಡೇಜ್‌ನೊಂದಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ನಾನು ಈಗಲೂ ಬಲಿಷ್ಠವಾಗಿದ್ದೇನೆ ಎಂದು ಹೇಳಿದ್ದರು.

"ನಾನು ಇನ್ನೂ ತುಂಬಾ ಬಲಶಾಲಿ ಮತ್ತು ಜೀವ ತುಂಬಿದ್ದೇನೆ. ನಾನು ಕಣ್ಣಿನ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಲವ್ ಯೂ ಪ್ರೇಕ್ಷಕರೇ. ನಾನು ಸ್ಟ್ರಾಂಗ್" ಎಂದು ಧರ್ಮೇಂದ್ರ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟನ್ ರೈಲಿನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಇರಿತ: 9 ಜನರ ಸ್ಥಿತಿ ಗಂಭೀರ, ಇಬ್ಬರು ಶಂಕಿತರ ಬಂಧನ

ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ.ಶಿವಕುಮಾರ್

ಇನ್ನು ಸಿಎಂ, ಸಚಿವರ ಭೇಟಿಯಾಗುವುದು ಸುಲಭ...! ಹೇಗಂತೀರಾ ಇಲ್ಲಿದೆ ಮಾಹಿತಿ...

ಜನ ಸುರಾಜ್‌ ಪಕ್ಷದ ಬೆಂಬಲಿಗನ ಹತ್ಯೆ ಪ್ರಕರಣ: ಜೆಡಿಯು ಅಭ್ಯರ್ಥಿ ಅನಂತ್‌ ಸಿಂಗ್‌ ಬಂಧನ

ನಮ್ಮ ಈ ಜನ್ಮದ 'ದಾಂಪತ್ಯ' ಪೂರ್ವ ಜನ್ಮದ ಪಾಪ-ಪುಣ್ಯವೇ? ಜಾತಕದಲ್ಲಿ ಇದರ ಬಗ್ಗೆ ತಿಳಿಯುವುದು ಹೇಗೆ; ಇಲ್ಲಿದೆ ಮಾಹಿತಿ...

SCROLL FOR NEXT