ಸೋನು ಸೂದ್ - ಕಂಗನಾ 
ಬಾಲಿವುಡ್

'ನಾಚಿಕೆಯಾಗಬೇಕು ನಿಮಗೆ'; ಯುವಕರಿಂದಲೇ ನಾವು ಸ್ಟಾರ್‌ ಆಗಿರೋದು: Gen-Z ವಿರುದ್ಧ ಕಂಗನಾ ಹೇಳಿಕೆಗೆ ಸೋನು ಸೂದ್ ಆಕ್ರೋಶ

Gen Z ಪ್ರತಿಭಟನಾಕಾರರ ಬಗ್ಗೆ ಕಂಗನಾ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋನು ಸೂದ್, ಯುವಕರನ್ನು ಗೌರವಿಸಬೇಕು ಮತ್ತು ಅವರ ಧ್ವನಿಯನ್ನು ಆಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

ಜೆನ್ ಝಡ್ ಪ್ರತಿಭಟನಾಕಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ ನಟ ಸೋನು ಸೂದ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಯುವಕರಿಂದಲೇ ಸ್ಟಾರ್‌ ಆಗಿರೋದು ಎಂದು ತಿರುಗೇಟು ನೀಡಿದ್ದಾರೆ.

Gen Z ಪ್ರತಿಭಟನಾಕಾರರ ಬಗ್ಗೆ ಕಂಗನಾ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋನು ಸೂದ್, ಯುವಕರನ್ನು ಗೌರವಿಸಬೇಕು ಮತ್ತು ಅವರ ಧ್ವನಿಯನ್ನು ಆಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು, ಕಂಗನಾ ಅವರ ಕಾಮೆಂಟ್‌ಗಳನ್ನು ನಾನು ಕೇಳಿಲ್ಲ ಎಂದು ಆರಂಭದಲ್ಲಿ ಹೇಳಿದರು. ಬಳಿಕ, ಯುವಜನರ ಬಗ್ಗೆ ಮಾತನಾಡುತ್ತಾ, ಈ ಯುವಕರೇ ನಟರನ್ನು ಸ್ಟಾರ್ ಮಾಡುತ್ತಾರೆ. ಈ ಸ್ಥಾನಕ್ಕೆ ತಲುಪಲು ಅವರೇ ಕಾರಣ. ಅವರು ನಮ್ಮ ಜೊತೆ ಇರುವವರೆಗೂ ನಾವು ಬೆಳೆಯುತ್ತೇವೆ. ಅವರು ದೂರವಾದರೆ ಅದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು ಎಂದರು.

‘ನೀವು ನಟರಾಗಿರಲಿ, ವೈದ್ಯರಾಗಿರಲಿ ಅಥವಾ ಬೇರೆ ಯಾವುದೇ ವೃತ್ತಿಯಲ್ಲಿರಲಿ, ಜನರು ನಿಮ್ಮನ್ನು ಬೆಂಬಲಿಸುವವರೆಗೂ ಮಾತ್ರ ನಿಮ್ಮ ಅಸ್ತಿತ್ವಕ್ಕೆ ಅರ್ಥ ಇರುತ್ತದೆ ಎಂದು ಸೋನು ಸೂದ್ ಹೇಳಿದ್ದಾರೆ.

ಕಂಗನಾ ಅವರು ‘ಜನರೇಷನ್ ಗಟರ್’ ಎಂದು ಪ್ರತಿಭಟನಾಕರರನ್ನು ಟೀಕಿಸಿದ ಬಗ್ಗೆ ಪ್ರಶ್ನಿಸಿದಾಗ, ಅವರು ಹಾಗೆ ಹೇಳಿದ್ದರೆ, ಅದು ಸರಿಯಲ್ಲ. ಅಂತಹ ಮಾತು ಹೇಳಬಾರದಿತ್ತು. ಅವರು ಹಾಗೆ ಹೇಳಿದ್ದರೆ, ಅದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಮಾತನಾಡುವ ಮೊದಲು ನಿಮ್ಮ ಮಾತುಗಳನ್ನು ತೂಗಿ ನೋಡಿ ಎಂಬ ಮಾತಿದೆ. ನೀವು ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ ಏಕೆಂದರೆ ಸಾರ್ವಜನಿಕರು ದೇವರ ಮತ್ತೊಂದು ರೂಪ ಎಂದು ನಟ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

ನಾಳೆ ಮುಂಜಾನೆ 4.15ರ ಬ್ರಹ್ಮ ಮುಹೂರ್ತದಲ್ಲಿ 'Ramayana' ಟ್ರೇಲರ್ ಬಿಡುಗಡೆ!

ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಲಿದೆ: RCB ಮಾಜಿ ಬ್ಯಾಟರ್ ಡಿವಿಲಿಯರ್ಸ್

ರಾಜ್ಯದಲ್ಲಿ SIR ಶಾಕ್! ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಡಿಲೀಟ್; ಬೆಂಗಳೂರಿನಲ್ಲಿಯೇ ಅತಿ ಹೆಚ್ಚು- ಚುನಾವಣಾ ಆಯೋಗ; Video

ಕಂಟೆಂಟ್ ಕ್ರಿಯೇಟರ್ ಆಗಲು ₹35 ಲಕ್ಷ ಸಂಬಳದ ಉದ್ಯೋಗ ತೊರೆದ ಟೆಕ್ಕಿ ದಂಪತಿ; ಒಂದೇ ವರ್ಷದಲ್ಲಿ ₹1 ಕೋಟಿಗೂ ಹೆಚ್ಚು ಆದಾಯ!