ಟೆಸ್ಲಾಗಿಂತಲೂ 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಹಾರುವ ಕಾರಿತ್ತು Online Desk
ಬಾಲಿವುಡ್

ಟೆಸ್ಲಾಗಿಂತಲೂ 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಹಾರುವ ಕಾರಿತ್ತು: ರಾಮಾಯಣ ಪ್ರಚಾರದ ವೇಳೆ ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಮುಂಬರುವ ಬಹುನಿರೀಕ್ಷಿತ ರಾಮಾಯಣ ಚಿತ್ರದ ಪ್ರಚಾರದ ವೇಳೆ ಎಲಾನ್ ಮಸ್ಕ್ ಅವರ ಹಾರುವ ಕಾರಿನ ಪರಿಕಲ್ಪನೆಯನ್ನು ರಾಮಾಯಣದ ಪುಷ್ಪಕ ವಿಮಾನಕ್ಕೆ ಹೋಲಿಸಿ ಮಾತನಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಇವತ್ತು ವೆಸ್ಟರ್ನ್ ವರ್ಲ್ಡ್ ಹಾರುವ ಕಾರಿನ ಕನಸು ಕಾಣುತ್ತಿರುವಾಗ, ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಆ ಕನಸನ್ನು ನನಸು ಮಾಡಿ ಆಕಾಶದಲ್ಲಿ ಹಾರಾಡಿದ್ದರು ಎಂಬುದಕ್ಕೆ ರಾಮಾಯಣವೇ ದೊಡ್ಡ ಸಾಕ್ಷಿ! ಹೌದು, ಇತ್ತೀಚೆಗೆ ಲಾನ್ ಮಸ್ಕ್ ಎಂಬ ಟೆಕ್ ದಿಗ್ಗಜ, ಹಾರುವ ಕಾರಿನ ಪರಿಕಲ್ಪನೆಯನ್ನ ಜಗತ್ತಿನ ಮುಂದೆ ಇಟ್ಟಿದ್ದಾನೆ. ಆದರೆ, ಆತನ ಪರಿಕಲ್ಪನೆಗೂ 5 ಸಾವಿರ ವರ್ಷಗಳ ಹಿಂದೆಯೇ ಭಾರತ ಇದನ್ನು ಮಾಡಿತ್ತು ಎಂದು ರಣಬೀರ್ ಕಪೂರ್ ಹೆಮ್ಮೆಯಿಂದ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ರಣಬೀರ್ ಕಪೂರ್ ಹೇಳಿದ್ದೇನು?

ನಿರೂಪಕಿ ಸುಮ ಅವರೊಂದಿಗಿನ ವಿಶೇಷ ಸಂವಾದದಲ್ಲಿ, ರಾಮಾಯಣ ಕಾಲದ ಆಯುಧಗಳು ಮತ್ತು ತಂತ್ರಜ್ಞಾನದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ ರಣಬೀರ್, "ಎಲಾನ್ ಮಸ್ಕ್ ಇತ್ತೀಚೆಗೆ ಹಾರುವ ಕಾರನ್ನು (ಟೆಸ್ಲಾ ರೋಡ್‌ಸ್ಟರ್) ಕಂಡುಹಿಡಿದಿದ್ದಾರೆ. ಆದರೆ, ಭಾರತ ಇದನ್ನು 5,000 ವರ್ಷಗಳ ಹಿಂದೆಯೇ (ಪುಷ್ಪಕ ವಿಮಾನದ ರೂಪದಲ್ಲಿ) ಮಾಡಿ ತೋರಿಸಿತ್ತು!" ಎಂದು ತಮಾಷೆಯ ಧಾಟಿಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.

ಮುಂದುವರೆದು, ಇದೇ ಸಂದರ್ಶನದಲ್ಲಿ ಭಾಗವಹಿಸಿದ್ದ ಚಿತ್ರದ ನಿರ್ದೇಶಕ ನಿತೀಶ್ ತಿವಾರಿ ಅವರು, ಸಿನಿಮಾದಲ್ಲಿ ಪುಷ್ಪಕ ವಿಮಾನದ ಅಂತಿಮ ವಿನ್ಯಾಸವನ್ನು ರೂಪಿಸಲು ಮತ್ತು ರಾವಣ-ಜಟಾಯು ನಡುವಿನ ಕಾಳಗದ ದೃಶ್ಯಗಳನ್ನು ಕಲ್ಪಿಸಿಕೊಳ್ಳಲು ತಂಡಕ್ಕೆ ಬರೋಬ್ಬರಿ ಎರಡು ವರ್ಷಗಳು ಬೇಕಾದವು ಎಂದು ಬಹಿರಂಗಪಡಿಸಿದ್ದಾರೆ.

ಏನಿದು ಪುಷ್ಪಕ ವಿಮಾನ?

ರಾಮಾಯಣದಲ್ಲಿ ಪುಷ್ಪಕ ವಿಮಾನವನ್ನು ಕೇವಲ ವಾಹನವಲ್ಲದೆ, ಆಕಾಶದಲ್ಲಿ ಸಂಚರಿಸಬಲ್ಲ ಅದ್ಭುತ ವೈಮಾನಿಕ ರಥವೆಂದು ವರ್ಣಿಸಲಾಗಿದೆ. ಪುರಾಣಗಳ ಪ್ರಕಾರ, ದೇವತೆಗಳ ಶಿಲ್ಪಿ ವಿಶ್ವಕರ್ಮನು ಈ ವಿಮಾನವನ್ನು ಬ್ರಹ್ಮದೇವನಿಗಾಗಿ ನಿರ್ಮಿಸಿದ್ದನು. ನಂತರ ಬ್ರಹ್ಮನು ಅದನ್ನು ಕುಬೇರನಿಗೆ ನೀಡಿದನು. ಬಳಿಕ ಕುಬೇರನಿಂದ ರಾವಣನು ಈ ಪುಷ್ಪಕ ವಿಮಾನವನ್ನು ವಶಪಡಿಸಿಕೊಂಡಿದ್ದನೆಂದು ಕಥೆಯಲ್ಲಿ ವಿವರಿಸಲಾಗಿದೆ. ಅದರಲ್ಲೂ,  ಭಾರತದ ಮೊದಲ ಹಾರುವ ವಾಹನವಾಗಿರುವ ಪುಷ್ಪಕ ವಿಮಾನವು ಮನಸ್ಸಿನ ವೇಗದಲ್ಲಿ ಚಲಿಸುವ ಹಾಗೂ ಅಗತ್ಯಕ್ಕೆ ತಕ್ಕಂತೆ ವಿಸ್ತಾರಗೊಳ್ಳುವ ಸಾಮರ್ಥ್ಯ ಹೊಂದಿತ್ತು.

ಒಟ್ಟಾರೆಯಾಗಿ, ನಿತೀಶ್ ತಿವಾರಿ ನಿರ್ದೇಶನದ ಈ ಭವ್ಯ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದರೆ, ರಾಕಿಭಾಯ್ ಯಶ್ ರಾವಣನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಲಿವುಡ್‌ನ ಖ್ಯಾತ ಡಿಎನ್‌ಇಜಿ ಸ್ಟುಡಿಯೋ ಚಿತ್ರದ ವಿಎಫ್‌ಎಕ್ಸ್ ಜವಾಬ್ದಾರಿ ಹೊತ್ತಿದ್ದು, ದೀಪಾವಳಿ ಹಬ್ಬದ ಪ್ರಯೋಗವಾಗಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

INDIA bloc's rally:'ಸರಿಯಾಗಿ ನಕಲಿ ಮಾಡಲೂ ಆಗಿಲ್ಲ; ರಾಮಲೀಲಾ ಮೈದಾನದ ಜನಸಾಗರ ತೋರಿಸಲು ಕಾಂಗ್ರೆಸ್ AI ಫೋಟೋ ಬಳಕೆ- ಕಿರಣ್ ರಿಜಿಜು ಲೇವಡಿ

'ಮಾನಸಿಕವಾಗಿ ಬಳಲಿದ್ದೇನೆ, ಆದರೆ ಒತ್ತಡ ನಿಭಾಯಿಸುವ ಶಕ್ತಿ ನನಗಿದೆ': ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್!

ಟಿ20 ವಿಶ್ವಕಪ್‌ಗೆ ಇನ್ನೂ ಸಮಯವಿದೆ, ಈಗ ಭುವನೇಶ್ವರ್‌ ಕುಮಾರ್‌ ಆಯ್ಕೆ ಯಾಕೆ?; BCCI ಆಯ್ಕೆ ಸಮಿತಿ ನಿರ್ಧಾರಕ್ಕೆ ಇರ್ಫಾನ್ ಪಠಾಣ್ ಕಿಡಿ!