ಗುಡ್ ನ್ಯೂಸ್: ‘ರಾಮಾಯಣ’ ಸಿನಿಮಾದ ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಕಡಿತ; ಈಗ ಕೇವಲ ₹99!
'ರಾಮಾಯಣ' ಸಿನಿಮಾದ ಕಲೆಕ್ಷನ್ ಕುಗ್ಗಿದ ಹಿನ್ನೆಲೆಯಲ್ಲಿ, ಚಿತ್ರತಂಡವು ಟಿಕೆಟ್ ದರಗಳನ್ನು ಭಾರೀ ಪ್ರಮಾಣದಲ್ಲಿ ಅಂದರೆ ಶೇಕಡಾ 80ರಷ್ಟು ಕಡಿತಗೊಳಿಸಿದೆ.
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ 'ರಾಮಾಯಣ 1: ರೈಸ್ ಆಫ್ ಎ ಲೆಜೆಂಡ್' ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಗಳಿಕೆಯ ಕೊಂಚ ತಗ್ಗಿದೆ. ಹೀಗಾಗಿ ಚಿತ್ರತಂಡ ಪ್ರೇಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ.
'ರಾಮಾಯಣ' ಸಿನಿಮಾದ ಕಲೆಕ್ಷನ್ ಕುಗ್ಗಿದ ಹಿನ್ನೆಲೆಯಲ್ಲಿ, ಚಿತ್ರತಂಡವು ಟಿಕೆಟ್ ದರಗಳನ್ನು ಭಾರೀ ಪ್ರಮಾಣದಲ್ಲಿ ಅಂದರೆ ಶೇಕಡಾ 80ರಷ್ಟು ಕಡಿತಗೊಳಿಸಿದೆ.
ಸೋಮವಾರದ ಹೊತ್ತಿಗೆ, ಚಿತ್ರದ ಗಳಿಕೆಯು ಒಂದೇ ದಿನಕ್ಕೆ ₹12 ಕೋಟಿಯಷ್ಟು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯಲು ಚಿತ್ರತಂಡವು ದೇಶಾದ್ಯಂತ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.
ರಾಮಾಯಣ 2 ಬಗ್ಗೆ ಬಿಗ್ ಅಪ್‌ಡೇಟ್: ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಬ್ಬರ; ವಾನರ ಸೇನೆಯ 'ಅದ್ಭುತ ದೃಶ್ಯಗಳು'!
ರಾಮಾಯಣ ಟಿಕೆಟ್ ದರ 99 ರೂ.ಗೆ ಇಳಿಕೆ
ಸೋಮವಾರ, ಚಿತ್ರತಂಡವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಟಿಕೆಟ್ ದರ ಇಳಿಕೆಯ ಸಿಹಿಸುದ್ದಿ ನೀಡಿದೆ.
"ಈ ಮಂಗಳವಾರ ದೊಡ್ಡ ಪರದೆಯಲ್ಲಿ ರಾಮಾಯಣವನ್ನು ನೋಡಿ ಆನಂದಿಸಿ, ಟಿಕೆಟ್ ದರ ಕೇವಲ 99 ರೂಪಾಯಿನಿಂದ ಪ್ರಾರಂಭವಾಗುತ್ತವೆ. ಎಲ್ಲರಿಗೂ ಗುರುಪೂರಬ್ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದೆ.
ಚಿತ್ರತಂಡದ ಈ ಘೋಷಣೆಯ ಬೆನ್ನಲ್ಲೇ ದೇಶದ ಬಹುತೇಕ ಚಿತ್ರಮಂದಿರಗಳು ‘ರಾಮಾಯಣ’ ಪ್ರದರ್ಶನದ ಟಿಕೆಟ್ ದರವನ್ನು 99 ರೂಪಾಯಿಗೆ ಇಳಿಸಿವೆ. ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಈ ಹಿಂದೆ 2D ಪ್ರದರ್ಶನಗಳಿಗೆ 300ರಿಂದ 400 ರೂಪಾಯಿ ಇದ್ದ ಟಿಕೆಟ್ ದರ ಈಗ ಕೇವಲ 99 ರೂಪಾಯಿಗೆ ಲಭ್ಯವಿದೆ. ಬಹುತೇಕ ಕಡೆಗಳಲ್ಲಿ ಶೇ.50ರಿಂದ 60ರಷ್ಟು ದರ ಕಡಿತವಾಗಿದ್ದರೆ, ಕೆಲವು ಚಿತ್ರಮಂದಿರಗಳಲ್ಲಿ ಬರೋಬ್ಬರಿ ಶೇ.80ರಷ್ಟು ದರ ಇಳಿಕೆ ಮಾಡಲಾಗಿದೆ.