ಶಬಾನಾ ಅಜ್ಮಿ ಮತ್ತು ಜಾವೇದ್ ಅಖ್ತರ್ 
ಬಾಲಿವುಡ್

'ನಾನು ಮುಸ್ಲಿಂ, ಆದರೆ ನಾವು ನಮಾಜ್ ಮಾಡಲ್ಲ, ಧರ್ಮದೊಂದಿಗೆ ನಮಗೆ ನೇರ ಸಂಬಂಧವಿಲ್ಲ': ಜಾವೇದ್ ಅಖ್ತರ್ 'ಕಟ್ಟಾ ನಾಸ್ತಿಕ' ಎಂದ ಶಬಾನಾ ಅಜ್ಮಿ!

ಜಾವೇದ್ ಅಖ್ತರ್ ಅವರು 1972ರಲ್ಲಿ ಚಿತ್ರಕಥೆಗಾರ್ತಿ ಹನಿ ಇರಾನಿ ಅವರನ್ನು ಮದುವೆಯಾಗಿದ್ದರು. ನಂತರ ಅವರು 1984ರಲ್ಲಿ ಶಬಾನಾ ಆಜ್ಮಿ ಅವರನ್ನು ವಿವಾಹವಾದರು.

ನವದೆಹಲಿ: ಶಬಾನಾ ಆಜ್ಮಿ ಇತ್ತೀಚೆಗೆ ತಮ್ಮ ಬಾಲ್ಯದ ದಿನಗಳಲ್ಲಿ ಧರ್ಮದ ಕುರಿತಾದ ತಮ್ಮ ಅಭಿಪ್ರಾಯಗಳು ಮತ್ತು ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ತಮ್ಮ ತಂದೆ, ಉರ್ದು ಕವಿ ಮತ್ತು ಗೀತರಚನೆಕಾರ ಕೈಫಿ ಆಜ್ಮಿ ಅವರು ನಾಸ್ತಿಕರಾಗಿದ್ದರೆ, ರಂಗಭೂಮಿ ಮತ್ತು ಚಲನಚಿತ್ರ ನಟಿಯಾಗಿದ್ದ ತಮ್ಮ ತಾಯಿ ಶೌಕತ್ ಕೈಫಿ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಿದ್ದರೂ, ಅದನ್ನು ಅಷ್ಟೊಂದು 'ಗಂಭೀರವಾಗಿ' ಪರಿಗಣಿಸುತ್ತಿರಲಿಲ್ಲ ಎಂದು ವಿವರಿಸಿದರು.

IIMUNನ ಯೂಟ್ಯೂಬ್ ಚಾನೆಲ್‌ನಲ್ಲಿನ ಸಂವಾದವೊಂದರಲ್ಲಿ ಶಬಾನಾ ಆಜ್ಮಿ, 'ಕೆಲವೊಮ್ಮೆ ನಾನು 'ಮಾಶಾ ಅಲ್ಲಾ' (mashallah) ಮತ್ತು 'ಇನ್ಶಾ ಅಲ್ಲಾ' (inshallah) ಎಂದು ಹೇಳುತ್ತೇನೆ. ಆಗ ಜಾವೇದ್, 'ನೀವು ಯಾಕೆ ಪದೇ ಪದೆ ಹೀಗೆ ಹೇಳುತ್ತೀರಿ? ಯಾರಾದರೂ ಸದಾಕಾಲ 'ಪ್ರಭು ಜಿ ಕಿ ಮರ್ಜಿ' (ದೇವರ ಇಚ್ಛೆ) ಎಂದು ಹೇಳುತ್ತಿದ್ದರೆ, ಆಗ ನಿಮಗೆ ಹೇಗನಿಸುತ್ತದೆ?' ಎಂದು ಕೇಳುತ್ತಾರೆ. ಆದರೆ, ನನ್ನ ಪ್ರಕಾರ ಇವು ನನ್ನ ಭಾಷೆಯ ಅವಿಭಾಜ್ಯ ಅಂಗಗಳಷ್ಟೇ' ಎಂದಿದ್ದಾರೆ.

ಶಬಾನಾ ಅಜ್ಮಿ ಅವರು ತಮಗೆ ಧರ್ಮದ ಬಗ್ಗೆ ಎಂದಿಗೂ ಕುತೂಹಲವಿರಲಿಲ್ಲ. ಅಲ್ಲದೆ, ತಮ್ಮ ಪತಿ, ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಅವರು 'ಕಟ್ಟಾ ನಾಸ್ತಿಕ' ಎಂದು ತಿಳಿಸಿದರು.

'ಅವರು ಒಬ್ಬ ಕಟ್ಟಾ ನಾಸ್ತಿಕರು. ನಾನು ಅವರನ್ನು, 'ನೀವು ಇದನ್ನು ಇಷ್ಟೊಂದು ಬಹಿರಂಗವಾಗಿ ಏಕೆ ಪ್ರದರ್ಶಿಸುತ್ತೀರಿ? ಯಾರಾದರೂ ಧರ್ಮವನ್ನು ಆಚರಿಸುವುದರಿಂದ ಸಮಾಧಾನ ಕಂಡುಕೊಳ್ಳುತ್ತಿದ್ದರೆ, ಅದನ್ನು ಹಾಗೆಯೇ ಬಿಡಿ. ಅವರನ್ನು ಏಕೆ ನೋಯಿಸಬೇಕು?' ಎಂದು ಕೇಳಿದೆ. ಅದಕ್ಕವರು, 'ಏಕೆಂದರೆ ಅವರು ನನ್ನನ್ನು ನೋಯಿಸುತ್ತಾರೆ. ಒಬ್ಬ ನಾಸ್ತಿಕನಾಗಿ, ಅದರಿಂದ ನೊಂದುಕೊಳ್ಳುವ ಹಕ್ಕು ನನಗಿಲ್ಲವೇ?' ಎಂದು ಉತ್ತರಿಸಿದರು ಎಂದು ತಿಳಿಸಿದರು.

'ಹೌದು, ನಾನು ಮುಸ್ಲಿಂ. ನನಗೆ ಈದ್, ಉರ್ದು ಭಾಷೆ ಮತ್ತು ಅಲ್ಲಿನ ಖಾದ್ಯಗಳು ಇಷ್ಟ; ಇವೆಲ್ಲವೂ ನನಗೆ ಇಷ್ಟವೇ. ಆದರೆ ನಾವು ನಮಾಜ್ ಮಾಡುವುದಿಲ್ಲ ಮತ್ತು ಧರ್ಮದೊಂದಿಗೆ ನಮಗೆ ಯಾವುದೇ ನೇರ ಸಂಬಂಧವಿಲ್ಲ. ದೇವರ ಪರಿಕಲ್ಪನೆಯ ವಿಷಯಕ್ಕೆ ಬಂದರೆ... ಇದು ಸಂಪೂರ್ಣವಾಗಿ ವೈಯಕ್ತಿಕ ವಿಷಯ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಬೇರೆ ಯಾರೂ ತಲೆಹಾಕುವ ಅಗತ್ಯವಿಲ್ಲ. ಇದರಲ್ಲಿ ಸರ್ಕಾರವೂ ಮಧ್ಯಪ್ರವೇಶಿಸಬಾರದು. ಇದು ಖಾಸಗಿ ವಿಷಯ; ಪ್ರಾರ್ಥನೆ ಮಾಡುವುದರಿಂದ ನಿಮಗೆ ಒಳ್ಳೆಯ ಭಾವನೆ ಉಂಟಾಗುವುದಾದರೆ, ಅದರಲ್ಲಿ ನನಗೇನೂ ತೊಂದರೆಯಿಲ್ಲ' ಎಂದು ಶಬಾನಾ ಆಜ್ಮಿ ಹೇಳಿದರು.

ಶಬಾನಾ ಆಜ್ಮಿ ಅವರೊಂದಿಗಿನ ವಿವಾಹಕ್ಕೂ ಮೊದಲು, ಜಾವೇದ್ ಅಖ್ತರ್ ಅವರು 1972ರಲ್ಲಿ ಚಿತ್ರಕಥೆಗಾರ್ತಿ ಹನಿ ಇರಾನಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು; ಅವರೇ ನಿರ್ದೇಶಕಿ, ನಿರ್ಮಾಪಕಿ ಜೋಯಾ ಅಖ್ತರ್ ಮತ್ತು ನಟ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್.

ಜಾವೇದ್ ಮತ್ತು ಹನಿ 1978ರಲ್ಲಿ ಬೇರ್ಪಟ್ಟರು. ಆದರೆ, 1985ರಲ್ಲಿ ಅಧಿಕೃತವಾಗಿ ವಿಚ್ಛೇದನ ಸಿಕ್ಕಿತು. ಜಾವೇದ್ ಅಖ್ತರ್ ಅವರು 1984ರಲ್ಲಿ ಶಬಾನಾ ಆಜ್ಮಿ ಅವರನ್ನು ವಿವಾಹವಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರ ಸಾವು, 8 ಮಂದಿಗೆ ಗಾಯ..!

ಮೈಸೂರು ದಸರಾ ಜಂಬೂಸವಾರಿ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ! ICUನಲ್ಲಿ ಸಾವು-ಬದುಕಿನ ಹೋರಾಟ!

CS ಗೆ ತನಿಖೆ ಮಾಡಿ ವರದಿ ನೀಡಲು ಹೇಳಿದ್ದೇನೆ: ಮೈಸೂರಿನಲ್ಲಿ ಸಚಿವರನ್ನೇ ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರ ವರ್ತನೆಗೆ ಸಿಎಂ ಡಿಕೆಶಿ ಏನೆಂದರು?

ಡಿ-ಕಂಪನಿ ನಮ್ಮದಲ್ಲ, Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್, ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!

'ಭಾರತೀಯ ಕ್ರಿಕೆಟ್‌ನ ಕರಾಳ ದಿನಗಳು'!; 'ತಂಡವನ್ನು ಒಡೆದು ಹಾಕಿದ್ದೇ ಚಾಪೆಲ್, ಒಡಕು ಮೂಡಿಸಿ ಆಸ್ಟ್ರೇಲಿಯಾಕ್ಕೆ ಲಾಭ': ಮಾಜಿ ಕೋಚ್ ವಿರುದ್ಧ Harbhajan Singh ವಾಗ್ದಾಳಿ! Video