ಲಾರ್ಡ್ಸ್ ಸಂಭ್ರಮದ ದೃಶ್ಯ ಬಳಕೆ ವಿವಾದ Online Desk
ಬಾಲಿವುಡ್

ದಾದಾಗೆ ದೆಹಲಿ ಹೈಕೋರ್ಟ್ ಶಾಕ್! ಲಾರ್ಡ್ಸ್ ಸಂಭ್ರಮದ ದೃಶ್ಯ ಬಳಕೆ ವಿವಾದ: ಸೌರವ್ ಗಂಗೂಲಿ ಅರ್ಜಿ ತಿರಸ್ಕರಿಸಿ ದೂಸ್ರಾ ಚಿತ್ರ ರಿಲೀಸ್‌ಗೆ ಅಸ್ತು ಎಂದ ನ್ಯಾಯಾಲಯ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಅಕ್ಟೋಬರ್ 23 ರಂದು ಬಿಡುಗಡೆಯಾಗಲಿರುವ ದೂಸ್ರಾ ಚಲನಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಅಕ್ಟೋಬರ್ 23 ರಂದು ಬಿಡುಗಡೆಯಾಗಲಿರುವ ದೂಸ್ರಾ ಚಲನಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿದೆ. ಈ ಮೂಲಕ ತಮ್ಮ ಅನುಮತಿಯಿಲ್ಲದೆ ಜೀವನದ ಪ್ರಮುಖ ಘಟನೆಗಳು ಹಾಗೂ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಚಿತ್ರದ ಬಿಡುಗಡೆಗೆ ತಡೆ ಕೋರಿದ್ದ ಸೌರವ್ ಗಂಗೂಲಿ ಮತ್ತು ಲವ್ ಫಿಲ್ಮ್ಸ್ ಸಂಸ್ಥೆಯ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

2002ರ ಐತಿಹಾಸಿಕ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದಾಗ, ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಈ ಐತಿಹಾಸಿಕ ದೃಶ್ಯ ಹಾಗೂ ತಮ್ಮ ನಾಯಕತ್ವದ ಉಲ್ಲೇಖಗಳನ್ನು ದೂಸ್ರಾ ಚಲನಚಿತ್ರದಲ್ಲಿ ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಗಂಗೂಲಿ ವಾದಿಸಿದ್ದಾರೆ. ಇದರೊಂದಿಗೆ, ಪ್ರೊಡಕ್ಷನ್ ಹೌಸ್ ಲವ್ ಫಿಲ್ಮ್ಸ್ ಜೊತೆ ಗಂಗೂಲಿ ಈಗಾಗಲೇ ತಮ್ಮ ಅಧಿಕೃತ ಬಯೋಪಿಕ್ ದಾದಾ - ದಿ ಸೌರವ್ ಗಂಗೂಲಿ ಸ್ಟೋರಿ ನಿರ್ಮಾಣಕ್ಕೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ, ದೂಸ್ರಾ ಚಿತ್ರದ ಟ್ರೈಲರ್‌ನಲ್ಲಿ ಗಂಗೂಲಿ ಅವರ ದೃಶ್ಯಗಳನ್ನು ವ್ಯಾಪಕವಾಗಿ ಬಳಸಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಬಹುದು ಮತ್ತು ಇದು ತಮ್ಮ ವಾಣಿಜ್ಯ ಹಕ್ಕುಗಳ ಉಲ್ಲಂಘನೆ ಎಂದು ಅವರು ಕೋರ್ಟ್ ಮೆಟ್ಟಿಲೇರಿದ್ದರು.

ಮುಂದುವರೆದು, ದೂಸ್ರಾ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕ ಅಭಿನಯ್ ದಿಯೋ ಅವರು, ಇದು ಸೌರವ್ ಗಂಗೂಲಿ ಅವರ ಬಯೋಪಿಕ್ ಅಲ್ಲ ಎಂದು ಸ್ಪಷ್ಟಪಡಿಸಿದ್ದು, ಇದು ರಾಜಸ್ಥಾನದ ಮಧ್ಯಮ ವರ್ಗದ ತಾರಾ ಎಂಬ ಹೆಣ್ಣುಮಗಳ ಕಥೆಯಾಗಿದ್ದು, ಆಕೆ ಸೌರವ್ ಗಂಗೂಲಿ ಅವರ ಲಾರ್ಡ್ಸ್ ಆಚರಣೆಯನ್ನು ಟಿವಿಯಲ್ಲಿ ನೋಡಿ ತನ್ನ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಹೋರಾಡಲು ಪ್ರೇರಣೆ ಪಡೆಯುತ್ತಾಳೆ ಎಂದು ತಿಳಿಸಿದೆ. ಇದರೊಂದಿಗೆ, ಚಿತ್ರದಲ್ಲಿ ಬಳಸಲಾದ ಕ್ರಿಕೆಟ್ ಪಂದ್ಯದ ಹಳೆಯ ದೃಶ್ಯಾವಳಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಸೂಕ್ತ ಲೈಸೆನ್ಸ್ ಮತ್ತು ಅನುಮತಿ ಪಡೆಯಲಾಗಿದೆ ಎಂದು ಚಿತ್ರತಂಡ ಕೋರ್ಟ್‌ಗೆ ತಿಳಿಸಿದೆ.

ಇನ್ನು ಪ್ರಕರಣದ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ದಿನೇಶ್ ಭಟ್ ಅವರ ನೇತೃತ್ವದ ರಜಾಕಾಲದ ಪೀಠವು, ಚಿತ್ರ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ನಡೆದಿರುವುದರಿಂದ ಸಮತೋಲನದ ಅನುಕೂಲತೆ ಚಿತ್ರತಂಡದ ಪರವಾಗಿದೆ ಎಂದು ಅಭಿಪ್ರಾಯಪಟ್ಟು ತಡೆಯಾಜ್ಞೆ ನೀಡಲು ನಿರಾಕರಿಸಿತು. ಈ ಮೂಲಕ "ನಾನು ಯಾವುದೇ ತಡೆ ನೀಡಿಲ್ಲ, ಸಿನಿಮಾ ಬಿಡುಗಡೆ ಮುಂದುವರಿಯಬಹುದು" ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಚಿತ್ರದ ಬಿಡುಗಡೆಗೆ ಕೋರ್ಟ್ ತಡೆ ನೀಡದಿದ್ದರೂ, ಗಂಗೂಲಿ ಅವರ ವ್ಯಕ್ತಿತ್ವದ ಹಕ್ಕುಗಳ ಕುರಿತಾದ ಮುಖ್ಯ ಪ್ರಕರಣದ ಕಾನೂನು ವಿಚಾರಣೆಯನ್ನು ಮುಂದುವರಿಸುವುದಾಗಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ ಆಯುಕ್ತರು, ಕೇಂದ್ರ ಹೇಳಿದ್ದೇನು?

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಮೆಟ್ರೋ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂ.ಜಿ.ಆರ್. ಹೆಸರು! ಬೆಂಗಳೂರು-ಹೊಸೂರು ಮೆಟ್ರೋಗೆ ಕನ್ನಡ ಸಂಘಟನೆಗಳ ವಿರೋಧ: ಮಿನಿ ತಮಿಳುನಾಡು ಆಗುತ್ತಾ ಸಿಲಿಕಾನ್ ಸಿಟಿ?

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ