ಬಾಲಿವುಡ್

ಕೇದಾರನಾಥ ದೇವಾಲಯ ಭೇಟಿ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಂ ಧಾರ್ಮಿಕ ಮುಖಂಡ; ‘ಹರಾಮ್’ ಆಕ್ಷೇಪ

ಕೇದಾರನಾಥ ದೇವಾಲಯ ಮತ್ತು ಮಹಾಕಾಳೇಶ್ವರ ದೇವಾಲಯ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳಿಗೆ ಸಾರಾ ಅಲಿ ಖಾನ್ ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸಿರುವ ಧಾರ್ಮಿಕ ಮುಖಂಡರು, ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಮ್ಮ ಧಾರ್ಮಿಕ ನಂಬಿಕೆಗಳ ಕಾರಣದಿಂದ ವಿವಾದಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಧರ್ಮಕ್ಕೆ ಸೇರಿದ ತಂದೆ ಸೈಫ್ ಅಲಿ ಖಾನ್ ಮತ್ತು ಹಿಂದೂ ಧರ್ಮಕ್ಕೆ ಸೇರಿದ ತಾಯಿ ಅಮೃತಾ ಸಿಂಗ್ ಅವರ ಪುತ್ರಿಯಾಗಿರುವ ಸಾರಾ ಅಲಿ ಖಾನ್, ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಉತ್ತರ ಪ್ರದೇಶದ ಇಸ್ಲಾಂ ಧಾರ್ಮಿಕ ಮುಖಂಡ ಶಹಾಬುದ್ದೀನ್ ರಜ್ವಿ ಬರೇಲ್ವಿ ಈ ವಿಷಯವನ್ನು ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇದಾರನಾಥ ದೇವಾಲಯ ಮತ್ತು ಮಹಾಕಾಳೇಶ್ವರ ದೇವಾಲಯ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳಿಗೆ ಸಾರಾ ಅಲಿ ಖಾನ್ ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸಿರುವ ಧಾರ್ಮಿಕ ಮುಖಂಡರು, ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇಂತಹ ಆಚರಣೆಗಳಿಗೆ ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಸಾರಾ ಅಲಿ ಖಾನ್ ಅವರ ದೇವಾಲಯ ಭೇಟಿಯ ಸುತ್ತ ಉದ್ಭವಿಸಿರುವ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಇಸ್ಲಾಂ ಧಾರ್ಮಿಕ ಕಾನೂನಿನ ದೃಷ್ಟಿಕೋನವನ್ನು ವಿವರಿಸಿದ್ದಾರೆ.

ನಟಿ ಸಾರಾ ಅಲಿ ಖಾನ್ ಅವರು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ಕುರಿತು ಅನೇಕ ಮುಸ್ಲಿಂ ಯುವಕರು ಕೂಡ ನನ್ನನ್ನು ಪ್ರಶ್ನಿಸಿದ್ದಾರೆ. ಷರಿಯಾ ಕಾನೂನಿನ ಪ್ರಕಾರ ಇಂತಹ ನಡೆಗೆ ಅವಕಾಶವಿದೆಯೇ? ಷರಿಯಾ ಇಂತಹ ಆಚರಣೆಗಳನ್ನು ಅನುಮತಿಸುತ್ತದೆಯೇ ಎಂದು ಕೇಳಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಸ್ಲಾಂನ ಷರಿಯಾ ಕಾನೂನಿನ ದೃಷ್ಟಿಕೋನ ಹಾಗೂ ಈ ವಿಷಯದಲ್ಲಿ ಅದರ ನಿಯಮಗಳೇನು ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾವುದೇ ವ್ಯಕ್ತಿ, ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ, ಬೇರೆ ಧರ್ಮದ ಧಾರ್ಮಿಕ ನಂಬಿಕೆಗಳಲ್ಲಿ ಪಾಲ್ಗೊಳ್ಳುವುದು, ಪೂಜೆ ಸಲ್ಲಿಸುವುದು ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುವುದು ಷರಿಯಾ ಪ್ರಕಾರ ಅನುಮತಿಸಲಾಗದ (ನಾಜಾಯಿಜ್) ಕೃತ್ಯವೆಂದು ಪರಿಗಣಿಸಲಾಗುತ್ತದೆ. ಇಂತಹ ಆಚರಣೆಗಳಿಗೆ ಅನುಮತಿ ಇಲ್ಲ’ ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭೂತಾನ್‌ನಲ್ಲಿ ಹಿಮನದಿ ಸ್ಫೋಟ: ಭಾರತದ ಗಡಿ ರಾಜ್ಯಗಳಲ್ಲಿ ದಿಢೀರ್ ಪ್ರವಾಹ ಭೀತಿ, ಬಂಗಾಳ-ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಣೆ

ನಟ ಧನ್ವೀರ್‌ಗೆ ಹೆಚ್ಚಿದ ಸಂಕಷ್ಟ: ಮೂರು ಠಾಣೆಗಳಲ್ಲಿ ಎಫ್‌ಐಆರ್ ದಾಖಲು, ವಿಚಾರಣೆಗೆ ಹಾಜರಾಗಲು ಪೊಲೀಸರ ನೋಟಿಸ್

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನೀರಿಗೇ ರೂ.30-35 ಕೊಡ್ತೀರಿ, ಹಾಲಿನ ಬೆಲೆ ಹೆಚ್ಚಾದರೆ ವಿರೋಧವೇಕೆ?: ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

'ನೋಡಲು ಅಸಹ್ಯವಾಗಿದ್ದೀಯ, ಮೊದಲು ದೇಹದ ಆಕಾರ ಸರಿಪಡಿಸಿಕೋ': ಆರೋಗ್ಯದ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಟ್ರಂಪ್ ಅವಮಾನ..!