ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಆರೋಪಗಳು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಮನರಂಜನಾ ಉದ್ಯಮದಲ್ಲಿನ ಪ್ರಣಯ, ಹಾಟ್ ದೃಶ್ಯಗಳನ್ನು (intimate scenes) ಬಗ್ಗೆ ನಟಿಯೊಬ್ಬರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಪ್ರಣಯ, ಹಾಟ್ ದೃಶ್ಯಗಳನ್ನು ಚಿತ್ರೀಕರಣದ ಸಮಯದಲ್ಲಿ ನಟರು ಉದ್ರೇಕಗೊಳ್ಳುವುದನ್ನು ತಪ್ಪಿಸಲು, ಕೆಲವು ನಟರಿಗೆ ಹಾಟ್ ದೃಶ್ಯಗಳ ಚಿತ್ರೀಕರಣಕ್ಕೂ ಮುನ್ನ ಹಸ್ತಮೈಥುನ (masturbation) ಮಾಡಿಕೊಳ್ಳುವಂತೆ ಹೇಳಲಾಗುತ್ತಿತ್ತು ಎಂದು ನಟಿ ನೈರಾ ಬ್ಯಾನರ್ಜಿ (Nyrraa Banerji) ಹೇಳಿದ್ದಾರೆ.
ಪೋಡ್ಕಾಸ್ಟ್ ಮಾತನಾಡಿದ್ದ ಕನ್ನಡದ ಸವಾರಿ 2, ಟೈಗರ್ ಚಿತ್ರಗಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ನೈರಾ ಬ್ಯಾನರ್ಜಿ, ಬಾಲಿವುಡ್ ನಲ್ಲಿ ಹಾಟ್ ದೃಶ್ಯಗಳನ್ನು ಚಿತ್ರೀಕರಿಸುವ ಮುನ್ನ ನಟರಿಗೆ ಉದ್ರೇಕಗೊಳ್ಳುವಂತೆ ಕೆಲ ವಸ್ತುಗಳನ್ನು ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ಕೆಲ ನಟರಿಗೆ ಹಸ್ತಮೈಥುನ ಮಾಡಿಕೊಳ್ಳುವಂತೆಯೂ ಸೂಚಿಸಲಾಗುತ್ತದೆ. ಈ ವಿಷಯವನ್ನು ಸಹ ನಟರೊಬ್ಬರು ನನಗೆ ಹೇಳಿದ್ದರು ಎಂದು ನೈರಾ ಬ್ಯಾನರ್ಜಿ ಹೇಳಿದ್ದಾರೆ.