ಜಾಕ್ವೆಲಿನ್ ಫರ್ನಾಂಡಿಸ್ Online Desk
ಬಾಲಿವುಡ್

ಸ್ವಂತ ಐಲ್ಯಾಂಡ್‌ ಹೊಂದಿರುವ ಸ್ಯಾಂಡಲ್‌ವುಡ್ ರಕ್ಕಮ್ಮ: ನೂರಾರು ಕೋಟಿ ಆಸ್ತಿಯ ಒಡತಿ ಜಾಕ್ವೆಲಿನ್ ಫರ್ನಾಂಡಿಸ್ ಒಟ್ಟು ಆಸ್ತಿ ಎಷ್ಟು ಗೊತ್ತಾ?

ವಿಕ್ರಾಂತ್ ರೋಣ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನಗೆದ್ದ ಜಾಕ್ವೆಲಿನ್ ಫರ್ನಾಂಡಿಸ್ ಕೇವಲ ಗ್ಲಾಮರ್‌ನಿಂದಷ್ಟೇ ಅಲ್ಲ, ಕೋಟ್ಯಂತರ ರೂಪಾಯಿ ಆಸ್ತಿಯಿಂದಲೂ ಹುಬ್ಬೇರಿಸಿದ್ದಾರೆ. ಶ್ರೀಲಂಕಾದಿಂದ ಬಂದು ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಸದ್ದು ಮಾಡಿದ ನಟಿಯ ಸಂಪತ್ತಿನ ಸತ್ಯ ಇಲ್ಲಿದೆ.

ಸಿನಿಮಾ ಜಗತ್ತಿನಲ್ಲಿ ಸ್ಟಾರ್ ನಟ-ನಟಿಯರು ದುಬಾರಿ ಕಾರುಗಳು ಹಾಗೂ ಕೋಟಿ ಬೆಲೆಯ ಐಷಾರಾಮಿ ಮನೆಗಳನ್ನು ಹೊಂದುವುದು ಸಾಮಾನ್ಯ. ಆದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸ್ವಂತಕ್ಕೊಂದು ಖಾಸಗಿ ದ್ವೀಪವನ್ನೇ (Private Island) ಹೊಂದಿರುವ ಏಕೈಕ ನಟಿ ಯಾರು ಗೊತ್ತಾ? ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಅಲ್ಲ ಈ ನಟಿಯ ಬಳಿ ಇದೆಯಂತೆ ತನ್ನದೇ ಆದ ಸ್ವಂತ ದ್ವೀಪ!

ಹೌದು, ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲೂ ಅಬ್ಬರಿಸಿ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನಗೆದ್ದಿರುವ ಈ ಸುಂದರಿ, ಕೇವಲ ಗ್ಲಾಮರ್‌ನಿಂದಷ್ಟೇ ಅಲ್ಲ, ತಮ್ಮ ಬೃಹತ್ ವ್ಯಾಪಾರ ಸಾಮ್ರಾಜ್ಯ ಮತ್ತು ಕೋಟ್ಯಂತರ ರೂಪಾಯಿ ಆಸ್ತಿಯಿಂದಲೂ ಎಲ್ಲರ ಹುಬ್ಬೇರಿಸಿದ್ದಾರೆ. ಶ್ರೀಲಂಕಾದಿಂದ ಬಂದು ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಸದ್ದು ಮಾಡಿದ ಆ ನಟಿಯ ಅಪಾರ ಸಂಪತ್ತಿನ ಅಚ್ಚರಿಯ ಸತ್ಯ ಇಲ್ಲಿದೆ...

ಸ್ವಂತ ಐಲ್ಯಾಂಡ್‌ ಹೊಂದಿರುವ ಏಕೈಕ ನಟಿ!

ತನ್ನದೇ ಆದ ಸ್ವಂತ ಐಲ್ಯಾಂಡ್ (ಖಾಸಗಿ ದ್ವೀಪ) ಹೊಂದಿರುವ ಏಕೈಕ ನಟಿ ಅಂದರೆ ಅದು ರಾ ರಾ ರಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಫರ್ನಾಂಡಿಸ್. ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ವಿಕ್ರಾಂತ್ ರೋಣ ಚಿತ್ರದ ರಕ್ಕಮ್ಮ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ ಪ್ರೇಕ್ಷಕರ ಮನಗೆದ್ದಿರುವ ಇವರು, ಭಾರತೀಯ ಚಿತ್ರರಂಗದಲ್ಲೇ ಇಂತಹ ಅಪರೂಪದ ಆಸ್ತಿ ಹೊಂದಿರುವ ಏಕೈಕ ನಟಿಯಾಗಿದ್ದಾರೆ.

ಸ್ವಂತ ದ್ವೀಪ ಎಲ್ಲಿದೆ? ದ್ವೀಪದ ಬೆಲೆ ಎಷ್ಟು?

ಮೂಲತಃ ಶ್ರೀಲಂಕಾದವರಾದ ಜಾಕ್ವೆಲಿನ್, ತಮ್ಮ ತಾಯ್ನಾಡಿನ ದಕ್ಷಿಣ ಕರಾವಳಿ ತೀರದಲ್ಲಿ 4 ಎಕರೆ ವಿಸ್ತೀರ್ಣದ ಸುಂದರ ಖಾಸಗಿ ದ್ವೀಪವನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಅವರು ಈ ದ್ವೀಪವನ್ನು 2012 ರಲ್ಲೇ ಸುಮಾರು 6 ಲಕ್ಷ ಡಾಲರ್ (ಆ ಸಮಯದಲ್ಲಿ ಸುಮಾರು ₹3 ಕೋಟಿ) ನೀಡಿ ಖರೀದಿಸಿದ್ದರು ಎನ್ನಲಾಗಿದ್ದು, ಅಲ್ಲಿ ಅವರು ಅದ್ದೂರಿ ವಿಲ್ಲಾವನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ.

ನೂರಾರು ಕೋಟಿ ಆಸ್ತಿಯ ಒಡತಿ

ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಕ್ರಿಯರಾಗಿರುವ ಇವರ ಒಟ್ಟು ಆಸ್ತಿಯ ಮೌಲ್ಯ ₹100 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಅದರಂತೆ, ಇವರ ಬಳಿ ಮುಂಬೈನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಜೊತೆಗೆ ರೇಂಜ್ ರೋವರ್, ಜೀಪ್ ಮತ್ತು ಬಿಎಂಡಬ್ಲ್ಯು ಸೇರಿದಂತೆ ದುಬಾರಿ ಕಾರುಗಳ ಕಲೆಕ್ಷನ್ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಗಂಡನ ಕೊಲೆ; ಮುಖ, ಮರ್ಮಾಂಗಕ್ಕೆ ಗಾಯ, ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ!

'ಇನ್ನೂ ನಾಲ್ಕೈದು ಸಚಿವರ ಮೇಲೆ ED ದಾಳಿ ಹೇಳಿಕೆ': ಈ ರೀತಿಯ ರೇಡ್ ನಲ್ಲಿ ಅವರು ಪರಿಣಿತರು: CM ಡಿಕೆಶಿಗೆ ಮಾಜಿ ಸಚಿವ ಕೆಎನ್ ರಾಜಣ್ಣ ಟಾಂಗ್

ಟ್ರ್ಯಾಕ್ಟರ್‌ ಸಾಲ, ವರದಕ್ಷಿಣೆ ಕಿರುಕುಳ ಆರೋಪ; 10 ತಿಂಗಳ ಮದುವೆ, 5 ತಿಂಗಳ ಗರ್ಭಿಣಿ ದುರಂತ ಅಂತ್ಯ!

BRICS 'ನವದೆಹಲಿ ಘೋಷಣೆ 2026' ಗೆ ಸರ್ವಾನುಮತದ ಅಂಗೀಕಾರ: ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಪ್ರಗತಿ