'ಪ್ರೇಮದ ಊರಲಿ' ಚಿತ್ರದ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ: ತಪಸ್ವಿನಿ ಕೊಂಡಾಡಿದ ನಟಿ!

ಪ್ರೇಮದ ಊರಲಿ ಚಿತ್ರ ತಂಡಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ತಮ್ಮೂರಿನ ಹುಡುಗಿ ತಪಸ್ವಿನಿ ಪೊಣಚ್ಚ ನಟನೆಗೂ ಫಿದಾ ಆಗಿದ್ದಾರೆ. ಮನಸಾರೆ ಶುಭ ಹಾರೈಸಿದ್ದಾರೆ. ‘
'ಪ್ರೇಮದ ಊರಲಿ' ಚಿತ್ರದ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ: ತಪಸ್ವಿನಿ ಕೊಂಡಾಡಿದ ನಟಿ!
Updated on: 

'ಪ್ರೇಮದ ಊರಲಿ' 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 50 ಕೋಟಿ ಗಳಿಕೆಯತ್ತ ಸಾಗುತ್ತಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿನ ನಟಿ ತಪಸ್ವಿನಿ ಪೂಣಚ್ಚಾ ಅವರ ನಟನೆಗೆ ರಶ್ಮಿಕಾ ಮಂದಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗಿನ ಮತ್ತೊಬ್ಬ ನಟಿಯ ಸಾಧನೆಯನ್ನೂ ಅವರು ಕೊಂಡಾಡಿದ್ದಾರೆ. ಕನ್ನಡದಲ್ಲಿ ಯಶಸ್ಸು ಕಂಡ ಈ ಚಿತ್ರವು ಈಗ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ.

ಪ್ರೇಮದ ಊರಲಿ ಚಿತ್ರ ತಂಡಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ತಮ್ಮೂರಿನ ಹುಡುಗಿ ತಪಸ್ವಿನಿ ಪೊಣಚ್ಚ ನಟನೆಗೂ ಫಿದಾ ಆಗಿದ್ದಾರೆ. ಮನಸಾರೆ ಶುಭ ಹಾರೈಸಿದ್ದಾರೆ. ‘ಪ್ರೇಮದ ಊರಲಿ’ ಚಿತ್ರದ ಮೂಲಕ ಭರವಸೆಯ ನಾಯಕಿಯಾಗಿ ಗುರುತಿಸಿಕೊಂಡಿರುವ ಕೂರ್ಗ್ (ಕೊಡಗು) ಮೂಲದ ನಟಿ ತಪಸ್ವಿನಿ ಪೂಣಚ್ಚ ಅವರ ಅಭಿನಯದ ಬಗ್ಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ, 'ಕೂರ್ಗ್‌ನಿಂದ ಬಂದು ಸಿನಿಮಾ ಮಾಡಿ, ಚಿತ್ರಮಂದಿರದಲ್ಲಿ ನಿಮ್ಮ ಸಿನಿಮಾ ಇಷ್ಟು ಚೆನ್ನಾಗಿ ಪ್ರದರ್ಶನ ಕಾಣುತ್ತಿರುವುದನ್ನು ಕಂಡು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ನನ್ನ ಸುಂದರ ಹುಡುಗಿಗೆ ಅಪಾರ ಪ್ರೀತಿ ಹಾಗೂ ಅಪ್ಪುಗೆಗಳು. ಇದು ಕೇವಲ ಆರಂಭ. ನಿನ್ನ ಎಲ್ಲಾ ಕನಸುಗಳು ನನಸಾಗಲಿ ಎಂದು ನಾನು ನನ್ನ ಹೃದಯಪೂರ್ವಕವಾಗಿ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು, ‘ರಶ್ಮಿಕಾ ಮಂದಣ್ಣ ಅವರ ಪೋಸ್ಟ್‌ನ ಮರು ಹಂಚಿಕೊಂಡಿರುವ ನಟಿ ತಪಸ್ವಿನಿ ಪೂಣಚ್ಚ ಅವರು, ‘ನನ್ನ ದೇವತೆ ನೀವು ರಶ್ಮಿಕಾ, ನಿಮ್ಮಿಂದ ಈ ಮಾತುಗಳನ್ನು ಕೇಳಿ ಬಹಳ ಸಂತೋಷ ಆಯಿತು. ನನ್ನ ದಿನ ಸಾರ್ಥಕವಾಯ್ತು’ ಎಂದು ಬರೆದುಕೊಂಡಿದ್ದಾರೆ.

'ಪ್ರೇಮದ ಊರಲಿ' ಚಿತ್ರದ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ: ತಪಸ್ವಿನಿ ಕೊಂಡಾಡಿದ ನಟಿ!
'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್‌ಗೆ ಜೋಡಿಯಾದ ತಪಸ್ವಿನಿ ಪೂಣಚ್ಚ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com