ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ 
ಬಾಲಿವುಡ್

ಎರಡನೇ ಮಗುವಿನ ಆಗಮನಕ್ಕೂ ಮುನ್ನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ರಣವೀರ್ ಸಿಂಗ್- ದೀಪಿಕಾ ಪಡುಕೋಣೆ!

ಸೆಪ್ಟೆಂಬರ್ 8 ರಂದು ತಮ್ಮ ಮೊದಲ ಮಗಳು 'ದುವಾ'ಳ ಎರಡನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸುಂದರವಾದ ಕೌಟುಂಬಿಕ ಚಿತ್ರಗಳನ್ನು ಹಂಚಿಕೊಂಡರು.

ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಇದೀಗ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಇಂದು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದಂಪತಿ ರಣವೀರ್ ಸಿಂಗ್ ಅವರ ಪೋಷಕರೊಂದಿಗೆ ದೇಗುಲಕ್ಕೆ ಆಗಮಿಸಿದ್ದರು.

ದೀಪಿಕಾ ಪಡುಕೋಣೆ ಕಿತ್ತಳೆ ಮತ್ತು ನೇರಳೆ ಬಣ್ಣದ ಕುರ್ತಾ ಸೆಟ್ ಧರಿಸಿದ್ದರೆ, ರಣವೀರ್ ಸಿಂಗ್ ನೇರಳೆ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪ್ಯಾಂಟ್ (ಟ್ರಸರ್) ಧರಿಸಿದ್ದರು.

ಈ ದಂಪತಿ ಇತ್ತೀಚೆಗೆ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಕುತೂಹಲಕಾರಿ ವಿಷಯವೆಂದರೆ, ಎರಡು ವರ್ಷಗಳ ಹಿಂದೆ ತಮ್ಮ ಮಗಳು 'ದುವಾ'ಳ ಜನನಕ್ಕೆ ಕೇವಲ ಎರಡು ದಿನಗಳ ಮೊದಲು, ದಂಪತಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ರಣವೀರ್ ಸಿಂಗ್ ಇಂದು ಮುಂಜಾನೆ ಮುಂಬೈನ ಪ್ರಸಿದ್ಧ 'ಲಾಲ್‌ಬಾಗ್ಚಾ ರಾಜ'ನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದ ರಣವೀರ್ ಸಿಂಗ್, ದೇವತೆಯ ವಿಗ್ರಹದ ಮುಂದೆ ಕೈಮುಗಿದು 'ಬಪ್ಪ'ನ ಆಶೀರ್ವಾದ ಪಡೆಯುತ್ತಿರುವುದು ಕಂಡುಬಂತು. ಅವರ ಶಾಂತ, ಸಂಯಮದ ಮತ್ತು 'ಪಕ್ವ'ವಾದ ಸಾರ್ವಜನಿಕ ವರ್ತನೆಯು ನೆಟ್ಟಿಗರ ಗಮನ ಸೆಳೆಯಿತು.

ಸೆಪ್ಟೆಂಬರ್ 8 ರಂದು ತಮ್ಮ ಮೊದಲ ಮಗಳು 'ದುವಾ'ಳ ಎರಡನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸುಂದರವಾದ ಕೌಟುಂಬಿಕ ಚಿತ್ರಗಳನ್ನು ಹಂಚಿಕೊಂಡರು. ಮಗಳು 'ದುವಾ' ಮತ್ತು ರಣವೀರ್ ಸಿಂಗ್ ಅವರ ಮುಖದ ಹೋಲಿಕೆಗಳು ಅಂತರ್ಜಾಲದಲ್ಲಿ ಹೆಚ್ಚು ಗಮನ ಸೆಳೆದಿವೆ.

ದೀಪಿಕಾ ಮತ್ತು ರಣವೀರ್ ತಮ್ಮ ಎರಡನೇ ಗರ್ಭಧಾರಣೆಯ ಸುದ್ದಿಯನ್ನು ಏಪ್ರಿಲ್ 19 ರಂದು ಹಂಚಿಕೊಂಡಿದ್ದರು.

ದೀಪಿಕಾ ಮತ್ತು ರಣವೀರ್ 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೋಮೋದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಾಹವಾದರು. ದೀಪಿಕಾ ಅವರ ಕೊಂಕಣಿ ಸಂಪ್ರದಾಯ ಮತ್ತು ರಣವೀರ್ ಅವರ ಸಿಂಧಿ ಸಂಪ್ರದಾಯದಂತೆ ನಡೆಯಿತು.

ಈ ಜೋಡಿಯ ಪಯಣ 2013ರಲ್ಲಿ 'ಗೋಲಿಯೋನ್ ಕಿ ರಾಸ್‌ಲೀಲಾ ರಾಮ್-ಲೀಲಾ' ಚಿತ್ರದ ಚಿತ್ರೀಕರಣದ ವೇಳೆ ಆರಂಭವಾಯಿತು. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು 2015ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ದೀಪಿಕಾ ಮತ್ತು ರಣವೀರ್ 2024ರ ಸೆಪ್ಟೆಂಬರ್ 8ರಂದು ತಮ್ಮ ಮೊದಲ ಮಗು 'ದುವಾ'ಳನ್ನು ಬರಮಾಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!

ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ: ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video