ಸಿನಿಮಾ ಲೇಖನ

ಶೈನಿಂಗ್ ಶ್ವೇತಾ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಎರಡನೇ ಬಾಲಿನಲ್ಲಿ ಸಿಕ್ಸ್ ಹಾರಿಸಿ ಭರ್ಜರಿ ಓಪನಿಂಗ್ ಪಡೆದ ಶ್ವೇತಾ ಅಂಗಳದಲ್ಲಿ ಅವಕಾಶಗಳ ಸುರಿಮಳೆ ಆಗುತ್ತಿದೆ ಎನ್ನುವುದು ವಾಸ್ತವ ಸುದ್ದಿ.

ನಂಗೆ ಪ್ರಾಣಿ, ಪಕ್ಷಿ ಅಂದ್ರೆ ಸಿಕ್ಕಾ ಪಟ್ಟೆ ಪ್ರೀತಿ. ಭವಿಷ್ಯದಲ್ಲಿ ಈ ಕಾಂಸೆಪ್ಟ್‌ನ ಚಿತ್ರವೊಂದರ ನಿರ್ದೇಶನ ಮಾಡಬೇಕೆಂಬುದು ನನ್ನ ಬಹು ದಿನದ ಕನಸು ಎಂದು ಮನದಲ್ಲಿ ಹುದುಗಿದ್ದ ಬುತ್ತಿಯನ್ನು ತೆರೆದಿಟ್ಟಿದ್ದು ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಎರಡನೇ ಬಾಲಿನಲ್ಲಿ ಸಿಕ್ಸ್ ಹಾರಿಸಿ ಭರ್ಜರಿ ಓಪನಿಂಗ್ ಪಡೆದ ಶ್ವೇತಾ ಅಂಗಳದಲ್ಲಿ ಅವಕಾಶಗಳ ಸುರಿಮಳೆ ಆಗುತ್ತಿದೆ ಎನ್ನುವುದು ವಾಸ್ತವ ಸುದ್ದಿ. ಹುಡುಗಿ ಕಾಲ್ಗುಣ ಚೆನ್ನಾಗಿದೆ ಎಂಬ ಅನಿಸಿಕೆಯಲ್ಲಿ ಅನ್ಯಭಾಷಾ ನಿರ್ದೇಶಕರೂ ಕಾಲ್‌ಶೀಟ್ ಕೇಳುತ್ತಿದ್ದಾರಂತೆ. ಆದರೆ ಅವಕಾಶ ಸಿಕ್ಕಿತು ಎಂಬ ಕಾರಣಕ್ಕೆ ಚಿತ್ರರಂಗದಲ್ಲಿ ದುಡ್ಡು ಮಾಡೋ ಆಸೆ ಈಕೆಗಿಲ್ಲವಂತೆ.
ಏನಿದ್ದರೂ ಉತ್ತಮ ಪಾತ್ರಗಳೇ ನನ್ನ ಆದ್ಯತೆ ಎನ್ನುತ್ತಾರೆ ಶ್ವೇತಾ.
 ಶ್ವೇತಾರ ಅಭಿನಯದ ಹಿಂದೆ ರಂಗಭೂಮಿಯ ಸ್ಪರ್ಶವಿದೆ. ಅಪ್ಪ ಎಲ್ ಕೃಷ್ಣಪ್ಪ, ಸುಮಾರು ನಲವತ್ತೈದು ವರ್ಷಗಳ ಕಾಲ ರಂಗಭೂಮಿಯಲ್ಲಿ ಪಳಗಿದ್ದುದರಿಂದ ಬಾಲ್ಯದಲ್ಲೇ ನಟನೆ ಈಕೆಯ ಕೈ ಹಿಡಿದು, ಮೂರನೇ ತರಗತಿಯಲ್ಲಿದ್ದಾಗಲೇ ಅನೇಕ ಕಲಾವಿದರಿಂದ ಭೇಷ್ ಎನಿಸಿಕೊಂಡಿದ್ದ ಖ್ಯಾತಿ ಶ್ವೇತಾದ್ದು.
ಪ್ರಖ್ಯಾತ ರಂಗಕರ್ಮಿ ಪ್ರೇಮಾಕಾರಂತ್ ಅವರ ಗಡಿಯಲ್ಲಿ ಬೆಳೆದ ಶ್ವೇತಾ ಕಾಲೇಜಿನಲ್ಲೂ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಡಾ. ಗೀತಾರಾಮಾನುಜಂ ನಿರ್ದೇಶಿಸಿದ ನಾಟಕಕ್ಕೆ ಬಣ್ಣ ಹಚ್ಚಿ ಪ್ರಶಸ್ತಿ ಪಡೆದವರು.
ಮುಂದಿನ ದಿನಗಳಲ್ಲಿ ಶ್ವೇತಾ, ಇಸ್ಪೀಟ್ ರಾಜ, ಅಪಕಾರಿ ಕಥೆ, ಭಾರತಿ, ಭಾಮತಿ, ದಾಸಪುರಂದರ, ಸಾಯೋ ಆಟ, ನಾನೇ ಬಿಜ್ಜಳ ಸೇರಿದಂತೆ ಹಲವಾರು ನಾಟಕಕ್ಕೆ ಊರೂರು ತಿರುಗಿದರು. ಕಿರುತೆರೆಯಲ್ಲೂ ಶ್ವೇತಾರದ್ದು ಜನಪ್ರಿಯ ಹೆಸರು.
ಇದೇ ಸಮಯದಲ್ಲೇ ಸಾಮಾಜಿಕ ವೆಬ್ ತಾಣದಲ್ಲಿ ಈಕೆಯನ್ನು ಗಮನಿಸಿದ ಸಿನಿಮಾಟೋಗ್ರಾಫರ್ ಜೋಷಿ ಅವರು ಸಿನಿಮಾ ನಟನೆಯಲ್ಲಿ ಆಸಕ್ತಿ ಇದೆಯಾ? ಎಂದು ಕೇಳಿದರಂತೆ. ಹಾಗೆ ಸಿಕ್ಕಿದ್ದೇ 'ಸೈಬರ್ ಯುಗದೊಳ್ ಮಧುರ ಪ್ರೇಮ ಕಾವ್ಯಂ' ಚಿತ್ರ. ಅದಾದ ನಂತರ ಸುನಿ ನಿರ್ದೇಶನದ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ಸಿಕ್ಕಿದ್ದು ಈಗ ಹೊಸ ಇತಿಹಾಸ.

- ನವೀನ್‌ಭಟ್ ಇಳಂತಿಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ