ಸಿನಿಮಾ ಲೇಖನ

ಗುರು ಗರಂ

'ಗೋವಿಂದಾಯನಮಃ' ಚಿತ್ರದ ಯಶಸ್ಸಿನಲ್ಲಿ 'ಪ್ಯಾರ್‌ಗೇ ಆಗ್‌ಬಿಟ್ಟೈತೆ' ಹಾಡಿನ ಕೊಡುಗೆ ದೊಡ್ಡದು. ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಕೊಟ್ಟಿದ್ದೂ ಇದೇ ಹಾಡು. ಈಗ ಈ ಚಿತ್ರ ತೆಲುಗಿನಲ್ಲಿ 'ಪೋಟುಗಾಡು' ಎಂಬ ಹೆಸರಿನಲ್ಲಿ ರಿಮೇಕ್ ಆಗಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಗೋವಿಂದಾಯನಮಃ ನಿರ್ದೇಶಿಸಿದ್ದ ಪವನ್ ಒಡೆಯರ್ ತೆಲುಗು ಚಿತ್ರಕ್ಕೂ ನಿರ್ದೇಶಕರಾಗಿದ್ದಾರೆ. ಮನೋಜ್ ಮಂಚು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ಅಲ್ಲ. ಆದರೂ ಈ ಚಿತ್ರದಲ್ಲಿ 'ಪ್ಯಾರ್‌ಗೇ ಆಗ್‌ಬಿಟ್ಟೈತೆ' ಹಾಡು ಮಾತ್ರ ಇದೆ. ಮತ್ತದು ಅಲ್ಲೂ ಫೇಮಸ್ ಆಗುತ್ತಿದೆ. ಈ ಕಾರಣಕ್ಕೆ ನಮ್ಮ ಗುರುಕಿರಣ್ ಕೊಂಚ ಗರಂ ಆಗಿದ್ದಾರೆ. ಈ ಚಿತ್ರದ ಸಂಗೀತ ನಿರ್ದೇಶಕರು ಬೇರೆ. ಆದರೆ, ನನಗೆ ಯಾವುದೇ ಕ್ರೆಡಿಟ್ ಕೊಡದೆ ನನ್ನ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ, ಹಾಗಾಗಿ 'ಪೋಟುಗಾಡು' ಚಿತ್ರದ ಮೇಲೆ ನಾನು ಕೇಸು ಹಾಕಬೇಕೆಂದಿದ್ದೇನೆ ಎನ್ನುತ್ತಾರೆ ಗುರು. ರಿಮೇಕ್ ಹಕ್ಕುಗಳನ್ನು ಕೊಳ್ಳುವಾಗ ಹಾಡುಗಳ ಹಕ್ಕುಗಳನ್ನೂ ಮಾರಿಕೊಳ್ಳುವ ಅವಕಾಶ ನಿರ್ಮಾಪಕನಿಗಿದೆಯೇ ಇಲ್ಲವೇ ಎಂಬ ಅಂಶ ಇಲ್ಲಿ ನಿರ್ಣಾಯಕವಾಗಬಹುದು. ಆದರೆ, ಗುರುಕಿರಣ್‌ಗೆ ಒಂದು ಮಾತೂ ಹೇಳದೆ, ಅಂಥ ಸೂಪರ್ ಹಿಟ್ ಹಾಡು ಕೊಟ್ಟ ಅವರನ್ನು ಒಂದು ಮಾತೂ ಕೇಳದೆ, 'ಪ್ಯಾರ್‌ಗೆ ಆಗ್‌ಬಿಟ್ಟೈತೆ' ಹಾಡನ್ನು ಕದ್ದಿರುವುದು ಮಾತ್ರ ತಪ್ಪೇ.

- ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್