ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತಮ್ಮ ಟ್ರೂತ್ ನಲ್ಲಿ 'ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಈಗ ಇಂಧನ ಕದನ ವಿರಾಮ ಜಾರಿಗೆ ಬಂದಿದೆ.
Donald Trump
ಡೊನಾಲ್ಡ್ ಟ್ರಂಪ್
Updated on: 

ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತಮ್ಮ ಟ್ರೂತ್ ನಲ್ಲಿ 'ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಈಗ ಇಂಧನ ಕದನ ವಿರಾಮ ಜಾರಿಗೆ ಬಂದಿದೆ. ಎರಡೂ ಕಡೆಯವರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಅದನ್ನು ಮುರಿಯಬೇಡಿ ಎಂದು ಹೇಳಿದರು.

ರಷ್ಯಾದಲ್ಲಿನ ಡೀಸೆಲ್ ಸಂಸ್ಕರಣಾಗಾರದ ಮೇಲೆ ದಾಳಿ ಮಾಡಿ ಜಾಗತಿಕ ಇಂಧನ ಕೊರತೆಯನ್ನು ಉಂಟುಮಾಡಿದ್ದಕ್ಕಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ದೂಷಿಸಿದ ಒಂದು ದಿನದ ನಂತರ ಟ್ರಂಪ್ ಅವರಿಂದ ಈ ಘೋಷಣೆ ಬಂದಿದೆ. ಯುದ್ಧದ ಸಮಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಇಂಧನ ಮೂಲಸೌಕರ್ಯವನ್ನು ಪದೇ ಪದೇ ಗುರಿಯಾಗಿಸಿಕೊಂಡಿವೆ.

Donald Trump
'ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿ ನಿಲ್ಲಿಸಲು ಸಿದ್ಧ, ಆದ್ರೆ.. ಒಂದು ಷರತ್ತು': Zelensky ಹೇಳಿದ್ದೇನು?

ಸಾಮಾಜಿಕ ಮಾಧ್ಯಮದಲ್ಲಿ ಸಂಕ್ಷಿಪ್ತ ಪೋಸ್ಟ್‌ನಲ್ಲಿ, ದಾಳಿಗಳನ್ನು ನಿಲ್ಲಿಸುವ ಒಪ್ಪಂದವು ತಕ್ಷಣವೇ ಜಾರಿಗೆ ಬರಲಿದೆ ಮತ್ತು ಎರಡೂ ಕಡೆಯವರು ಅದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಶ್ವೇತಭವನವು ಅಧ್ಯಕ್ಷರ ಪೋಸ್ಟ್ ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಅಥವಾ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ.

ಇದಕ್ಕೂ ಮೊದಲು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದರು. ಏಕೆಂದರೆ ಪ್ರಸ್ತುತ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದೊಂದಿಗಿನ ತಮ್ಮ ದೇಶದ ಯುದ್ಧವನ್ನು ಕೊನೆಗೊಳಿಸಲು ಏನನ್ನು ಮಾಡಿಲ್ಲ. ಅಮೆರಿಕದಲ್ಲಿ ಡೀಸೆಲ್ ಬೆಲೆ ಏರಿಕೆಗೆ ಟ್ರಂಪ್ ಜೆಲೆನ್ಸ್ಕಿ ಅವರನ್ನು ದೂಷಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com