ಸಿನಿಮಾ ಲೇಖನ

ಪುನೀತ್ ಈಗ ಅಶ್ವತ್ಥಾಮ

ಮಹಾಭಾರತದ ಕಥೆಯೊಂದನ್ನೇ ಇಟ್ಟುಕೊಂಡು ಅದೆಷ್ಟೋ ಸಿನಿಮಾಗಳಿಗೆ ಕಥೆ ಮಾಡಿಬಿಡಬಹುದು ...

ಮಹಾಭಾರತದ ಕಥೆಯೊಂದನ್ನೇ ಇಟ್ಟುಕೊಂಡು ಅದೆಷ್ಟೋ ಸಿನಿಮಾಗಳಿಗೆ ಕಥೆ ಮಾಡಿಬಿಡಬಹುದು ಎಂಬುದು ಸಿನಿಮಾ ರಂಗದ ಬರಹಗಾರರ ವಲಯದಲ್ಲಿ ಆಗಾಗ ಕೇಳಿಬರುವ ಮಾತು. ಅದೆಷ್ಟು ಕಥೆಗಳಿಗೆ ಮಹಾಭಾರತ ಸ್ಫೂರ್ತಿಯಾಗಿದೆಯೋ ಗೊತ್ತಿಲ್ಲ. ಆದರ ಸಾಕಷ್ಟು ಸಂಖ್ಯೆಯ ಸಿನಿಮಾಗಳಿಗೆ ಶೀರ್ಷಿಕೆಯಾಗಿಯಂತೂ ಮಹಾಭಾರತ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಸ್ವತಃ ಮಹಾಭಾರತ ಎಂಬ ಹೊಸರಿನ ಜೊತೆಗೆ ಮಹಾಭಾರತದ ಹಲವು ಕ್ಯಾರೆಕ್ಟರ್‌ಗಳು ಚಿತ್ರರಂಗದಲ್ಲಿ ಸಿನಿಮಾ ಆಗಿವೆ. ಕನ್ನಡದಲ್ಲಿ ಅರ್ಜುನ್, ಕರ್ಣ, ಹೆಸರಿನ ಜೊತೆ ಏನನ್ನೋ ಸೇರಿಸಿಕೊಂಡ ಭೀಮ, ಪಡುವಾರಳ್ಳಿ ಪಾಂಡವರು, ಸಿಡಿದೆದ್ದ ಪಾಂಡವರು, ಪಾಂಡವರು, ಕೌರವ, ದ್ರೋಣ, ವೆರೈಟಿ ವೆರೈಟಿ ಕೃಷ್ಣಂದಿರು, ಬಲರಾಮ, ಅಭಿಮನ್ಯು, ಜರಾಸಂಧ, ಇನ್ನೂ ಆಗಬೇಕಿರುವ ಕೀಚಕ, ತೆಲುಗಿನಲ್ಲಿ ಧುರ್ಯೋಧನ, ಹೀಗೆ ಮಹಾಭಾರತದ ಹಲವು ಕ್ಯಾರೆಕ್ಟರ್‌ಗಳು ಸಿನಿಮಾರಂಗದಲ್ಲಿ 'ಹೆಸರು ಮಾಡಿವೆ'. ಈಗ ಆ ಪಟ್ಟಿಗೆ ಹೊಸ ಸೇರ್ಪಡೆ ಅಶ್ವತ್ಥಾಮ. ದ್ರೋಣ ಪುತ್ರನ ಈ ಹೆಸರು ಶೀರ್ಷಿಕೆಯಾಗಿರುವುದು ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ. ಹಾಗೆ ನೋಡಿದರೆ  ಈ ಚಿತ್ರ ಅದಾಗಲೇ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಆದರೆ ಯಾವ ಕಾರಣಕ್ಕೋ ಏನೋ ಈ ಚಿತ್ರಕ್ಕೆ ಒಂದು ಶೀರ್ಷಿಕೆ ಮಾತ್ರ ಇನ್ನೂ ಪಕ್ಕಾ ಆಗಿರಲಿಲ್ಲ. ಬಿಡುಗಡೆಯ ಹಂತ ತಲುಪಿದ ಮೇಲೆ ತೆಲುಗಿನ ದೂಕುಡು ಚಿತ್ರದ ರಿಮೇಕ್ ಆಗದಿರುವ ಪುನೀತ್‌ರ ಈ ಚಿತ್ರಕ್ಕೆ ಕಡೆಗೂ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಗಿದೆ. ಮಹಾಭಾರತದ ಅಶ್ವತ್ಥಾಮನ ಪಾತ್ರದ ಯಾವ ಅಂಶಗಳು ಈ ಚಿತ್ರದಲ್ಲಿರಲಿವೆ ಎಂಬುದು ಗೊತ್ತಿಲ್ಲ. ಆದರೆ, ಚಿತ್ರವಂತೂ ಮುಂದಿನ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)