ಕೃಷ್ಣಲೀಲಾ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ 
ಸಿನಿಮಾ ಸುದ್ದಿ

ಕೃಷ್ಣಲೀಲಾ ಸಾಂಗ್ಸ್ ರಿಲೀಸ್

ಇಲ್ಲಿರೋದು ಕೇವಲ ಮೇಕಿಂಗ್ ಮತ್ತು ಬೀಟ್ ಸಾಂಗ್ಸ್‌ನ ಝಲಕ್ ಅಷ್ಟೇ...

ಅಲ್ಲಿ ಪರದೆಯ ಮೇಲೆ ತೋರಿಸುತ್ತಿದ್ದ ಪ್ರತಿ ಹಾಡಿನ ನಂತರವೂ ಇಲ್ಲಿರೋದು ಕೇವಲ ಮೇಕಿಂಗ್ ಮತ್ತು ಬೀಟ್ ಸಾಂಗ್ಸ್‌ನ ಝಲಕ್ ಅಷ್ಟೇ. ಪೂರ್ತಿ ಹಾಡನ್ನು ನೋಡಿದರೆ ನೀವು ಖುಷಿಪಡುತ್ತೀರಿ ಎನ್ನುತ್ತಿದ್ದರು ನಿರ್ದೇಶಕ ಶಶಾಂಕ್.

ಅವರಿಗೆ ಸಾಥ್ ನೀಡುತ್ತಿದ್ದು ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್. ಅದು ಅವರ 'ಕೃಷ್ಣಲೀಲಾ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಅಜಯ್‌ರಾವ್ ನಿರ್ಮಾಣ ಮತ್ತು ನಟನೆಯ ಚಿತ್ರ ಇದು. ನಾಯಕಿ ಕಿರುತೆರೆ ಖ್ಯಾತಿಯ ಮಯೂರಿ.

ಶ್ರೀಧರ್ ಸಂಭ್ರಮ್ 'ಕೃಷ್ಣನ್ ಲವ್‌ಸ್ಟೋರಿ' ಚಿತ್ರಕ್ಕೂ ಸಂಗೀತ ನೀಡಿದ್ದರು. ಇಲ್ಲಿ ಮತ್ತೆ ಅದೇ ತಂಡ ಕೆಲಸ ಮಾಡುತ್ತಿದೆ. ಹಾಗಾಗಿ ಜನರಿಗೆ ನಿರೀಕ್ಷೆ ಇರುತ್ತದೆ.

ನಾವು ಅದನ್ನು ಮೀರಿಸುವಂಥದಲ್ಲದಿದ್ದರೂ ಅಟ್ಲೀಸ್ಟ್ ಅದನ್ನು ಮೀಟ್ ಮಾಡುವಂತ ಪ್ರಾಡಕ್ಟ್ ಕೊಡಬೇಕು ಎಂಬುದು ಶಶಾಂಕ್‌ರ ಮಾತು. ಆದರೆ ಅಂದು ತೋರಿಸಿದ ಹಾಡುಗಳಲ್ಲಿ 'ಕೃಷ್ಣನ್ ಲವ್‌ಸ್ಟೋರಿ'ಯನ್ನು ಮೀರಿಸುವ ಗುಣಗಳು ಅಷ್ಟು ಢಾಳಾಗಿ ಕಾಣಲಿಲ್ಲ ಎಂಬುದು ಬೇರೆ ಮಾತು.

ನಾಯಕಿ ಮಯೂರಿ ಎಂದಿನಂತೆ ಈ ತಂಡದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಥ್ಯಾಂಕ್ಸ್ ಎಂದರೆ, ನಾಯಕ ಅಜಯ್ ತಮ್ಮ ನವವಧುವಿನೊಂದಿಗೆ ಕ್ಯಾಮೆರಾಗಳಿಗೆ ಪೋಸು ಕೊಟ್ಟರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT