ತ್ರಿಶಾ 
ಸಿನಿಮಾ ಸುದ್ದಿ

'ಹಚ್ಚೇ' ದಿನ್ ಆನೇವಾಲೆ ಹೈ

ತ್ರಿಶಾ ಟ್ಯಾಟೂ ಹಾಕಿಸಿಕೊಳ್ಳುವ ದೃಶ್ಯಗಳು ರಹಸ್ಯವಾಗಿ ಹೊರಬಂದಿವೆ

ಟ್ಯಾಟೂ ಹಾಕಿಸಿಕೊಳ್ಳುವ ದೃಶ್ಯಗಳು ರಹಸ್ಯವಾಗಿ ಹೊರಬಂದಿದೆ

ಸಿನಿಮಾ ನಟಿಯರಿಗೂ ಟ್ಯಾಟೂ ಜಗತ್ತಿಗೂ ಬಿಡಿಸಲಾಗದ ನಂಟು. ಶೋಕಿಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ನಟಿಯರೇ ಹೆಚ್ಚು. ಆದರೆ ನಟಿ ತ್ರಿಶಾ ಮಾತ್ರ ಈ ಟ್ಯಾಟೂ ಶೋಕಿಯನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಹೊರಟಿದ್ದಾಳೆ. ಹೀಗಾಗಿ ನಟಿ ತ್ರಿಶಾ ಇತ್ತೀಚೆಗೆ ಸಿಕ್ಕಾಪಟ್ಟೆ ಗಿಮಿಕ್ ಕಂ ಮ್ಯಾಜಿಕ್ ಮಾಡುತ್ತಿದ್ದಾರೆ. ಅವರ ಈ ಆಟ ಬಿಡುಗಡೆಯ ಹಂತದಲ್ಲಿರುವ ಚಿತ್ರವೊಂದರ ಪ್ರಚಾರದ ತಂತ್ರ. ಇಲ್ಲಿರುವ ಫೋಟೋಗಳನ್ನು ಒಮ್ಮೆ ನೋಡಿ. ಹೌದು, ಜನವರಿಯಲ್ಲಿ ತೆರೆ ಕಾಣಲಿರುವ 'ಭೂಲೋಗಂ' ಎನ್ನುವ ಚಿತ್ರಕ್ಕೆ ತ್ರಿಶಾ ಕಂಡ ಕಂಡ ಜಾಗದಲ್ಲಿ ಟ್ಯಾಟೂ ಬಿಸಿಡಿಸಕೊಂಡಿದ್ದಾಳೆ. ನಟ ಜಯಂ ರವಿ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ತ್ರಿಶಾ. ಈ ಹಿಂದೆ ಎದೆ ಮೇಲೆ ಟ್ಯಾಟೂ ಬಿಡಿಸಿಕೊಂಡು ಎಲ್ಲರ ಕುತೂಹಲ ಕೆರಳಿಸಿದ ತ್ರಿಶಾ, ಈಗ ತಾನೂ ನಟಿಸಿರುವ ಚಿತ್ರದ ನಾಯಕನ ಭಾವಚಿತ್ರ ಬಿಡಿಸಿಕೊಳ್ಳುವ ಮೂಲಕ ತಮಿಳು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದ್ದಾಳೆ. ಈ ಟ್ಯಾಟೂಗಳನ್ನು ನೋಡಿ ಸ್ವತಃ ಜಯಂ ರವಿನೇ ಅಚ್ಚರಿಗೊಂಡಿದ್ದಾರೆನ್ನುವುದು ಮತ್ತೊಂದು ಗಾಸಿಪ್. ಇನ್ನೂ ಈ ಟ್ಯಾಟೂ ಹಾಕಿಸಿಕೊಳ್ಳುವ ದೃಶ್ಯಗಳು ರಹಸ್ಯವಾಗಿ ಹೊರಬಂದಿದೆ ಎಂದು ಹೇಳಲಾಗುತ್ತಿದೆಯಾದರೂ ಇಲ್ಲಿ ಯಾವ ರಹಸ್ಯವೂ ಇಲ್ಲ. ಯಾಕೆಂದರೆ ಚಿತ್ರತಂಡದ್ದೇ ಗಿಮಿಕ್ ಎಂಬುದರಲ್ಲಿ ಎರಡು ಮಾತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್