ದಕ್ಷಿಣ ಭಾರತದ ನಟಿ, ಬೆಂಗಳೂರು ಬೆಡಗಿ ಪ್ರಿಯಾಮಣಿ ಶೀಘ್ರದಲ್ಲೇ ಮದುವೆಯಾಗ್ತಾರಾ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಬಾಯ್ ಫ್ರೆಂಡ್ ಬಗ್ಗೆ ಬಾಯ್ದಿಟ್ಟಿದ್ದ ಪ್ರಿಯಾಮಣಿ, ಮದುವೆ ಮನೆ ಮಕ್ಕಳು ಚಿಂತೆಯಲ್ಲಿದ್ದಾರಂತೆ. ಸ್ಯಾಂಡಲ್‌ವುಡ್‌ನ ಬೇಡಿಕೆ ನಟಿಯರಲ್ಲಿ ಒಬ್ಬರಾದ ಪ್ರಿಯಾಮಣಿ, ಹಸೆಮಣೆ ಏರಲಿದ್ದಾರಾ ಅಥವಾ ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ಮನಸ್ಸು ಗೆಲ್ಲಲಿದ್ದಾರಾ ಎಂಬುದು ಕಾದು ನೋಡಬೇಕಿದೆ.
ಕಳೆದ ಎರಡು ವರ್ಷಗಳಿಂದ ಬಾಯ್‌ಫ್ರೆಂಡ್‌ನೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದ ಪ್ರಿಯಾಮಣಿ, ಅದೇ ಹುಡುಗನನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ಈಗಲೇ ತಾವು ಮದುವೆಯಾಗಬೇಕೆಂಬ ಉದ್ದೇಶವಿಲ್ಲ. ಮದುವೆಗೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದ ಪ್ರಿಯಾಮಣಿ ಮದುವೆ ಬಗ್ಗೆ ಮತ್ತೆ ಒಲವು ತೋರಿದಂತಿದೆ.
ಈ ಹಿಂದೆ ಮಲಯಾಳಂನ ರಿಯಾಲಿಟಿ ಶೋ ನಿರೂಪಕ ಗೋವಿಂದ ಪದ್ಮಸೂರ್ಯ ಅವರೊಡನೆ ಪ್ರಿಯಾಮಣಿ ಡೇಟಿಂಗ್‌ನಲ್ಲಿದ್ದಾರೆ ಎಂಬ ಗಾಸಿಪ್ಪು ಹರಡಿತ್ತು.
ಆದರೆ ಇತ್ತೀಚೆಗೆ ಪ್ರಿಯಾಮಣಿ ತಮಗೆ ಏನು ಬೇಕೆಂಬ, ತಮ್ಮ ಮನಕ್ಕೆ ಪ್ರಿಯರಾಗುವ ತಮ್ಮ ಇಚ್ಚಾರ್ಥಗಳನ್ನು ಪೂರೈಸುವಂತಾ ಅಭಿಲಾಷೆಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಆ ಚಿತ್ರದ ಪ್ರಕಾರ, ಪ್ರಿಯಾಮಣಿ ಮುಂದಿನ ಆಲೋಚನೆ ಮದುವೆ ಎಂಬುದನ್ನು ಬಿಂಬಿಸುತ್ತದೆ.