ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಬಿಗ್ ಬಾಸ್ ಸೀಸನ್9ಕ್ಕೆ ರಾಧೆ ಮಾ?

ಪ್ರತಿಷ್ಟಿತ ರಿಯಾಲಿಟಿ ಶೋ ಎಂದೇ ಖ್ಯಾತಿಗಳಿಸಿರುವ ಹಿಂದಿಯ ಬಿಗ್ ಬಾಸ್ ಸೀಸನ್ -9ಕ್ಕೆ ವಿವಾದಿತ ಹಾಗೂ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ...

ಪ್ರತಿಷ್ಟಿತ ರಿಯಾಲಿಟಿ ಶೋ ಎಂದೇ ಖ್ಯಾತಿಗಳಿಸಿರುವ ಹಿಂದಿಯ ಬಿಗ್ ಬಾಸ್ ಸೀಸನ್ -9ಕ್ಕೆ ವಿವಾದಿತ ಹಾಗೂ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ ಬರಲಿದ್ದಾರೆಂಬ ಹಲವು ಸುದ್ದಿಗಳು ಇದೀಗ ಭಾರೀ ಸುದ್ದಿ ಮಾಡುತ್ತಿವೆ.

ಪ್ರತೀ ಸಲದಂತೆ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ಸ್ಪರ್ಧಾಳುಗಳ ಹೆಸರನ್ನು ಗೌಪ್ಯವಾಗಿಡಲು ಯತ್ನಿಸಿದರೂ ಪ್ರತೀ ಬಾರಿಯಂತೆಯೇ ಈ ಸಲದ ಸೀಸನ್ ನಲ್ಲೂ ತನ್ನ ಗೌಪ್ಯವನ್ನು ಕಾಪಾಡಲು ಯತ್ನಿಸಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಸ್ಪರ್ಧಾಳುಗಳ ಪಟ್ಟಿ ಲೀಕ್ ಆಗುತ್ತಲೇ ಇರುತ್ತದೆ. ಶೀಘ್ರದಲ್ಲೇ ಮತ್ತೆ ಆರಂಭವಾಗಲಿರುವ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಾರ್ಥಿಗಳ ಪಟ್ಟಿಯೊಂದು ಇದೀಗ ಲೀಕ್ ಆಗಿದ್ದು, ಸ್ಪರ್ಧಾರ್ಥಿಗಳ ಪಟ್ಟಿಯಲ್ಲಿ ರಾಧೆ ಮಾ ಕೂಡ ಜಾಗ ಪಡೆದಿರುವುದಾಗಿ ಹೇಳಲಾಗುತ್ತಿದೆ.

ಈ ಹಿಂದಿನಿಂದಲೂ ಬಿಗ್ ಬಾಸ್ ರಿಯಾಲಿಟಿ ಶೋ ಹಲವು ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದವು. ಪ್ರತೀ ಸೀಸನ್ ನಂತೆಯೇ ಈ ಸೀಸನ್ ನಲ್ಲೂ ವಿವಾದಿತ ವ್ಯಕ್ತಿಗಳನ್ನೇ ಬಿಗ್ ಬಾಸ್ ಆಯೋಜಕರು ಆಯ್ಕೆ ಮಾಡಿದ್ದು, ಈ ಬಾರಿ ರಾಧೆ ಮಾ ಭಾಗವಹಿಸುತ್ತಿದ್ದಾರೆಂಬ ಸುದ್ದಿ ಇದೀಗ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಲೀಕ್ ಆಗಿರುವ ಸ್ಪರ್ಧಾಳುಗಳ ಪಟ್ಟಿ ಈ ಕೆಳಕಂಡಂತಿದೆ.

ಗುರ್ ಮಿತ್ ರಾಮ್ ರಹೀಂ ಸಿಂಗ್: ಎಂಎಸ್ ಜಿ -ಮೆಸೆಂಜರ್ ಟು ಗಾಡ್ ಸಿನಿಮಾ ಮಾಡಿ ಹಲವು ವಿವಾದಗಳನ್ನು ಸೃಷ್ಟಿಸಿದ್ದ ಸ್ವಯಂಘೋಷಿತ ದೇವಮಾನವ ಗುರ್ ಮಿತ್ ರಾಮ್ ರಹೀಂ ಸಿಂಗ್.



ಗುರ್ ಮಿತ್ ಸಿಂಗ್ ನ ಎಂಎಸ್ ಜಿ ಚಿತ್ರದಲ್ಲಿ ಕೋಮುಭಾವನೆ ಕೆರಳಿಸುವ ಹಲವು ಸಂದೇಶಗಳಿದ್ದು, ಚಿತ್ರಕ್ಕೆ ಅನುಮತಿ ನೀಡಬಾರದೆಂದು ಸೆನ್ಸಾರ್ ಮಂಡಳಿಯಲ್ಲೇ ಹಲವು ಚರ್ಚೆಗಳು ಆರಂಭವಾಗಿದ್ದವು. ಇದರಿಂದಾಗಿ ಆಡಳಿತ ಮಂಡಳಿಯ ಹಲವು ಸದಸ್ಯರು ರಾಜಿನಾಮೆ ನೀಡಿದ್ದರು.

ಶ್ವೇತ ಬಸು:
ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದು ಹಲವು ವಿವಾದಗಳಿಗೆ ಕಾರಣವಾಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ವೇತ ಬಸು.

 

ಅವಕಾಶಗಳಿಂದ ವಂಚಿತಳಾಗಿ ದುಡ್ಡು ಮಾಡುವ ಸಲುವಾಗಿ ವೇಶ್ಯಾವಾಟಿಕೆಗಿಳಿದಿದ್ದ ಉದಯೋನ್ಮುಖ ನಟಿ ಶ್ವೇತಾ ಬಸು ಹೈದರಾಬಾದಿನ ಬಂಜಾರ ಹಿಲ್ಸ್‌ನ ಸ್ಟಾರ್ ಹೋಟೆಲ್‌ ಒಂದರಲ್ಲಿ ಸಿಕ್ಕಿಬಿದ್ದಿದ್ದಳು. ಶ್ವೇತಾ ಬಗ್ಗೆಯೇ ಟಿವಿ ಚಾನೆಲ್‌ವೊಂದು ಸ್ಟಿಂಗ್ ಆಪರೇಷನ್ ನಡೆಸಿ ನಿಜ ಬಣ್ಣ ಬಯಲು ಮಾಡಿತ್ತು. ಇದೀಗ ಈ ವಿವಾದಿತ ನಟಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆಂದು ಹೇಳಲಾಗುತ್ತಿದೆ.

ರಾಹುಲ್ ಯಾದವ್:



ರಾಜೀನಾಮೆ ಪ್ರಹಸನದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ಹಾಗೂ ಇತ್ತೀಚೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಖತ್ ಸೌಂಡ್ ಮಾಡಿದ್ದ ವೆಬ್ಸೈಟ್ ಹೌಸಿಂಗ್.ಕಾಮ್ ನ ಸಿಇಒ ರಾಹುಲ್ ಯಾದವ್.

ವಿಜೆ ಬನಿ:


ಎಂಟಿವಿಯ ವಿನೂತನ ಹಾಗೂ ಪ್ರತಿಷ್ಠಿತ ರಿಯಾಲಿಟಿ ಶೋ ರೋಡೀಸ್ ನಲ್ಲಿ ಸ್ಪರ್ಧಾಳು ಆಗಿ ಇದೀಗ ರೋಡೀಸ್ ಸೀಸನ್ 12ರಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜೆ ಬನಿ.

ಆಶಾ ನೇಗಿ:


ಉತ್ತರಾಖಂಡದ ಮಾಜಿ ಸುಂದರಿ ಹಾಗೂ ಜೀ ಟಿವಿಯ ಯಶಸ್ವಿ ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದ ಆಶಾ ನೇಗಿ.

ಸೇನಾ ಸಯೀದ್:


ಬಾಲಿವುಡ್ ಕಿಂಗ್ ಖಾನ್ ನಟಿಸಿರುವ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿ ಇದೀಗ ತನ್ನ ಮೈಮಾಟದಿಂದಲೇ ಹಲವು ರೀತಿಯಲ್ಲಿ ಸುದ್ದಿ ಮಾಡುತ್ತಿರುವ ಸೇನಾ ಸಯೀದ್.
 
ರಶ್ಮಿ ದೇಸಾಯಿ:


ಕಲರ್ಸ್ ಚಾನೆಲ್ ನ ಯಶಸ್ವಿ ಧಾರಾವಾಹಿ ಎನಿಸಿಕೊಂಡಿದ್ದ ಉತರನ್ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿ ಖ್ಯಾತಿಗಳಿಸಿರುವ ನಟಿ ರಶ್ಮಿ ದೇಸಾಯಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT