ಅಮೀರ್ ಖಾನ್ ಜೊತೆಗೆ ನಿಹಾಲ್ ಬಿಟ್ಲಾ 
ಸಿನಿಮಾ ಸುದ್ದಿ

ವಿಶೇಷ ಅಭಿಮಾನಿಗೆ ಅಮೀರ್ ಸ್ಪರ್ಷ ಸಿಂಚನ

ತನಗೆ ಸ್ಫೂರ್ತಿ ನೀಡಿದ ನೆಚ್ಚಿನ ನಟ ಅಮೀರ್ ಖಾನ್ ಅವರನ್ನು ಭೇಟಿ ಮಾಡಿದ ನಿಹಾಲ್ ಬಿಟ್ಲಾ ಅವರಿಗೆ ಕನಸು ನನಸಾದ ದಿನ! ಪ್ರೊಗೇರಿಯಾ ಎಂಬ ವಿರಳ ಆನುವಂಶಿಕ

ತನಗೆ ಸ್ಫೂರ್ತಿ ನೀಡಿದ ನೆಚ್ಚಿನ ನಟ ಅಮೀರ್ ಖಾನ್ ಅವರನ್ನು ಭೇಟಿ ಮಾಡಿದ ನಿಹಾಲ್ ಬಿಟ್ಲಾ ಅವರಿಗೆ ಕನಸು ನನಸಾದ ದಿನ! ಪ್ರೊಗೇರಿಯಾ ಎಂಬ ವಿರಳ ಆನುವಂಶಿಕ ಖಾಯಿಲೆಯಿಂದ ನರಳುತ್ತಿರುವ ನಿಹಾಲ್ ಬಿಟ್ಲಾ ಬಾಲಿವುಡ್ ನಟನನ್ನು ಭೇಟಿ ಮಾಡಲು ಸಾಧ್ಯವಾಗಿದ್ದು 'ಹ್ಯೂಮನ್ಸ್ ಆಫ್ ಬಾಂಬೆ' ಎಂಬ ಫೇಸ್ಬುಕ್ ಪುಟದಿಂದ.

ವೈರಲ್ ಆಗಿದ್ದ ಈ ಫೇಸ್ಬುಕ್ ಪೋಸ್ಟ್ ನಲ್ಲಿ ಬಿಟ್ಲಾ, ಅಮೀರ್ ಖಾನ್ ಅವರ ಸಿನೆಮಾ 'ತಾರೆ ಜಮೀನ್ ಪರ್' ತಮಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದರು ಮತ್ತು ಅವರನ್ನು ವೈಯಕ್ತಿವಾಗಿ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

ಇದನ್ನು ಗಮನಿಸಿದ್ದ ಸುಪರ್ಸ್ಟಾರ್ ಅಮೀರ್, ನಿಹಾಲ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದರು. "ನಿಮ್ಮ ಅನುಕೂಲ ತಿಳಿಸಿ ನಾನೇ ಬಂದು ಭೇಟಿ ಮಾಡುತ್ತೇನೆ. ನಿಮಗೆ ತಾರೆ ಜಮೀನ್ ಪರ್ ಇಷ್ಟ ಎಂದು ತಿಳಿದು ಖುಷಿಯಾಯಿತು" ಎಂದು ಬರೆದಿದ್ದರು.

ಪ್ರೊಗೇರಿಯಾ ರೋಗದಿಂದ ಬಳಲುವವರು ಅತಿ ಬೇಗನೆ ವಯಸ್ಸಾಗಿ ಅವಧಿಗೂ  ಮುಂಚಿತವಾಗಿ ಮರಣ ಹೊಂದುವ ಅಪಾಯ ಎದುರಿಸುತ್ತಾರೆ.

ನಟನನ್ನು ಭೇಟಿ ಮಾಡಿದ ನಿಹಾಲ್ ಉಡುಗೊರೆಗಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ. ನಂತರ ಹೊಸದೊಂದು ಪೋಸ್ಟ್ ಬರೆದ ನಿಹಾಲ್ "ಅಮೀರ್ ಅಂಕಲ್ ಧನ್ಯವಾದಗಳು. ನನ್ನ ಕನಸು ನನಸಾಯಿತು" ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT