ಹಾಫ್ ಟಿಕೆಟ್ಟಲ್ಲಿ ಇಪ್ಪತ್ತು ಸಿನಿಮಾ ನೋಡಿ!
ಬೆಂಗಳೂರಿನಲ್ಲಿ ಫ್ರೆಂಚ್ ಫಿಲ್ಮ್ ಫೆಸ್ಟಿವಲ್ ನಡೆಯುವುದು ಅಂದರೇನು? ಹೌದು. ಈ ಚಿತ್ರೋತ್ಸವದ ಹೆಸರೇ ಮೈ ಫ್ರೆಂಚ್ ಫಿಲ್ಮ್ ಫೆಸ್ಟಿವಲ್ ಇಂಡಿಯಾ ಎಂದು!..
ಬೆಂಗಳೂರಿನಲ್ಲಿ ಫ್ರೆಂಚ್ ಫಿಲ್ಮ್ ಫೆಸ್ಟಿವಲ್ ನಡೆಯುವುದು ಅಂದರೇನು? ಹೌದು. ಈ ಚಿತ್ರೋತ್ಸವದ ಹೆಸರೇ ಮೈ ಫ್ರೆಂಚ್ ಫಿಲ್ಮ್ ಫೆಸ್ಟಿವಲ್ ಇಂಡಿಯಾ ಎಂದು!
ಕಳೆದ ವಾರ ಶುರುವಾಗಿರುವ ಈ ಚಿತ್ರೋತ್ಸವ ಒಂದು ತಿಂಗಳ ಕಾಲ ಚಿತ್ರರಸಿಕರನ್ನು ರಂಜಿಸಲಿದೆ. ಜ.16ರಂದು ಉದ್ಘಾಟನೆಯಾದ ಈ ಫೆಸ್ಟಿವಲ್ ನ ವಿಶೇಷವೇನೆಂದರೆ, ಇದು ದೊಡ್ಡ ಸಿನಿಮಾಗಳ ಚಿತ್ರೋತ್ಸವ ಮಾತ್ರವಲ್ಲ. ಇಲ್ಲಿ ಕಿರುಚಿತ್ರಗಳೂ ಪ್ರದರ್ಶಿತಗೂಳ್ಳುತ್ತಿವೆ. ಮೊದಲ ದಿನ ಅನುರಾಗ್ ಕಶ್ಯಪ್, ಕೇತನ್ ಮೆಹ್ತಾ ಮುಂತಾದ ತಾರಾನಿರ್ದೇಶಕರು ಬೆಂಗಳೂರಿಗೆ ಚಿತ್ರೋತ್ಸವ ಪ್ರಯುಕ್ತ ಬಂದಿದ್ದರು.
ಅಂದರೆ ಇದರ ಮಹತ್ವ ನಿಮಗೆ ಅರಿವಾಗಿರಬೇಕು. ಚಿತ್ರೋತ್ಸವದುದ್ದಕ್ಕೂ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. `ಈಸ್ಟರ್ನ್ ಬಾಯ್ಸ್ ಎಂಬ ರಾಬಿನ್ ಕ್ಯಾಪ್ಲಿಯೋ ಅವರ ಚಿತ್ರ ಪ್ರದರ್ಶನದೊಂದಿಗೆ ಆರಂಭವಾದ ಈ ಚಿತ್ರೋತ್ಸವದಲ್ಲಿ ಫ್ರೆಂಚ್ ಚಲನಚಿತ್ರ ಜಗತ್ತಿನ 20ಕ್ಕೂ ಹೆಚ್ಚಿನ ಚಿತ್ರಗಳು ಹಾಗೂ ಕಿರುಚಿತ್ರಗಳು ಪ್ರದರ್ಶನವಾಗಲಿದೆ.
ಭಾರತದಲ್ಲಿ ಈ ಚಿತ್ರೋತ್ಸವ www.halfticket.tv ವೆಬ್ಸೈಟ್ನಲ್ಲಿ ಉಚಿತವಾಗಿ ಲಭ್ಯವಿದೆ. ನಿರ್ದೇಶಕ ಕೇತನ್ ಮೆಹ್ತಾ ಅವರು ಭಾರತದಲ್ಲಿ ಫ್ರೆಂಚ್ ಚಿತ್ರೋತ್ಸವ ನಡೆಯುತ್ತಿರುವುದರ ಔಚಿತ್ಯದ ಬಗ್ಗೆ ಮಾತನಾಡುತ್ತಾ, `ನಮ್ಮ ಆಲೋಚನೆಗಳನ್ನು ಮುಕ್ತಗೊಳಿಸಿ, ಬಾಲಿವುಡ್ ಹಾಗೂ ಹಾಲಿವುಡ್ ಆಚೆಗೆ ನೋಡುವ ಸಮಯ ಒದಗಿ ಬಂದಿದೆ.
ಪ್ರಸ್ತುತ ಜಗತ್ತಿನಲ್ಲಿ, ಉತ್ಸಾಹಪೂರ್ವಕ, ರೋಚಕ ಸಿನಿಮಾಗಳ ನಿರ್ಮಾಣವಾಗುತ್ತಿದ್ದು, ಇದನ್ನು ಗುರುತಿಸುವ ಅಗತ್ಯವಿದೆ ಮತ್ತು ಈ ನಿಟ್ಟಿನಲ್ಲಿ, ಈ ಚಿತ್ರೋತ್ಸವ ಒಂದು ಮಹತ್ವಪೂರ್ಣ ಪ್ರಯತ್ನವಾಗಿದೆ' ಎಂದದ್ದು ಹಲವು ಪ್ರಶ್ನೆಗಳಿಗೆ ಉತ್ತರದಂತಿತ್ತು. ಒಟ್ಟಾರೆ ವಿಶ್ವ ಸಿನಿಮಾದಲ್ಲಿ ತನ್ನದೇ ಸ್ಥಾನ ಪಡೆದಿರುವ ಫ್ರೆಂಚ್ ಚಿತ್ರಗಳನ್ನು ಸವಿಯಲು ನೀವು ಈಗ ಹಾಫ್ ಟಿಕೆಟ್ ತಗೊಂಡ್ರೆ ಸಾಕು! ಇನ್ನು ಕೆಲವೇ ದಿನಗಳು ಈ ಪ್ರದರ್ಶನಗಳು ವೆಬ್ನಲ್ಲಿ ಲಭ್ಯವಿರೋದ್ರಿಂದವ ಬೇಗಬೇಗ ಲಾಗಿನ್ ಆಗುವುದೊಳಿತು.