ಶ್! ಸಿನೆಮಾದ ಒಂದು ದೃಶ್ಯ 
ಸಿನಿಮಾ ಸುದ್ದಿ

ಶ್! ನಿಮ್ಮನ್ನು ಬೆಚ್ಚಿಬೀಳಿಸಲು ಮತ್ತೆ ತೆರೆಗೆ

ಕನ್ನಡದ ಚಿತ್ರರಂಗದಲ್ಲಿ ಇತಿಹಾಸ ಬರೆದ ಥ್ರಿಲ್ಲರ್ ಸಿನೆಮಾ 'ಶ್!' ಮತ್ತೆ ತೆರೆಗೆ ಬರಲಿದೆ. ಉಪೇಂದ್ರ ನಿರ್ದೇಶನದ 'ಓಂ' ಚಿತ್ರಮಂದಿರಗಳಲ್ಲಿ ಆಗಾಗ ಬಿಡುಗಡೆಯಾಗುವುದು

ಬೆಂಗಳೂರು: ಕನ್ನಡದ ಚಿತ್ರರಂಗದಲ್ಲಿ ಇತಿಹಾಸ ಬರೆದ ಥ್ರಿಲ್ಲರ್ ಸಿನೆಮಾ 'ಶ್!' ಮತ್ತೆ ತೆರೆಗೆ ಬರಲಿದೆ. ಉಪೇಂದ್ರ ನಿರ್ದೇಶನದ 'ಓಂ' ಚಿತ್ರಮಂದಿರಗಳಲ್ಲಿ ಆಗಾಗ ಬಿಡುಗಡೆಯಾಗುವುದು ಮಾಮೂಲಿ. ಈಗ ಇದೇ ನಿರ್ದೇಶಕನ 'ಶ್' ಕೂಡ ಎರಡನೆ ಬಾರಿಗೆ ಹಿರಿತೆರೆಗೆ ಹಿಗ್ಗುತ್ತಿದೆ.

೨೨ ವರ್ಷದ ಹಿಂದೆ ಬಿಡುಗಡೆಯಾದ ಈ ಚಲನಚಿತ್ರಕ್ಕೆ ತಾಂತ್ರಿಕ ಗುಣಮಟ್ಟವನ್ನು ನವೀಕರಿಸಿವುದರೊಂದಿಗೆ ಈ ಸಿನೆಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕುಮಾರ್ ಗೋವಿಂದ್ ತಿಳಿಸಿದ್ದಾರೆ.

ಈ ಸಿನೆಮಾವನ್ನು ೩೫ ಎಂ ಎಂ ರೀಲಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು ಈಗ ಅದನ್ನು ಡಿಜಿಟಲ್ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಹಾರರ್ ಭೀತಿಯನ್ನು ದ್ವಿಗುಣಗೊಳಿಸಲು ಕೆಲವು ಗ್ರಾಫಿಕ್ಸ್ ದೃಶ್ಯಗಳನ್ನು ಸೇರಿಸಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ.

"ಹೆಸರ ಪಟ್ಟಿ ಹೊರತುಪಡಿಸಿದರೆ, ಚಲನಚಿತ್ರವನ್ನು ಯಾವುದೇ ರೀತಿ ಬದಲಾಯಿಸುತ್ತಿಲ್ಲ. 'ಶ್' ಉಲಿತವನ್ನು ಸ್ವಲ್ಪ ಭೀಕರವಾಗಿ ಹೇಳಲಿದ್ದೇವೆ" ಎಂದಿದ್ದಾರೆ ಕುಮಾರ್ ಗೋವಿಂದ್.

ಇದಕ್ಕಾಗಿ ಅವರು ಉಪೇಂದ್ರ ಅವರನ್ನು ಸಂಪರ್ಕಿಸಲಿದ್ದಾರಂತೆ. "'ಶ್' ನ ಮೂಲ ನಿರ್ದೇಶಕ ಅವರು ಮತ್ತು ಹೊಸ ಅವತಾರದ ಬಗ್ಗೆ ಅವರ ನಿಲುವುಗಳನ್ನು ನಾನು ತಿಳಿದುಕೊಳ್ಳಬೇಕಿದೆ. ಸಿನೆಮಾಗೆ ಹೊಸ ಅವತಾರವನ್ನು ನೀಡಿದ ಮೇಲೆ ಅದಕ್ಕೆ ಮತ್ತೆ ಸೆನ್ಸಾರ್ ಆಗಬೇಕು. ನಂತರ ಒಂದೆರಡು ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

ಚೆನ್ನೈನ ಪ್ರಸಾದ್ ಲ್ಯಾಬ್ ನಲ್ಲಿ ಚಿತ್ರದ ನವೀಕರಣ ಕೆಲಸ ನಡೆಯುತ್ತಿದ್ದು "ನಾನಿದನ್ನು ೨೦ ದಿನಗಳಲ್ಲಿ ಮುಗಿಸಬಹುದಿತ್ತು ಆದರೆ ಗುಣಮಟ್ಟ ತೃಪ್ತಿದಾಯಕವಗಿರುವುದಿಲ್ಲ. ನನ್ನಂತೆಯೇ ಕೇರಳ ಮತ್ತು ಇತರ ಭಾಗದ ನಿರ್ಮಾಪಕರು ಅವರ ಸಿನೆಮಾಗಳನ್ನು ನವೀಕರಣಗೊಳಿಸಲು ಸಾಲಿನಲ್ಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಇದೂ ಅಲ್ಲದೆ 'ಶ್-೨'ಕ್ಕೂ ಮಾತುಕತೆ ನಡೆದಿದೆಯಂತೆ. "ಉಪೇಂದ್ರ ಸದ್ಯಕ್ಕೆ ಉಪ್ಪಿ೨ನಲ್ಲಿ ನಿರತರಾಗಿದ್ದಾರೆ. ಅವರಿಗೆ ಒತ್ತಡ ಹೇರಲು ಇಷ್ಟವಿಲ್ಲ. 'ಶ್೨' ಮಾಡಿದರೆ ಅವರೊಟ್ಟಿಗೆ ಮಾಡುತ್ತೇನೆ" ಎನ್ನುತ್ತಾರೆ ಕುಮಾರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT