ಸುದೀಪ್ ಅಭಿನಯದ ರನ್ನ ಚಿತ್ರ 
ಸಿನಿಮಾ ಸುದ್ದಿ

ರನ್ನ ಕ್ಲೈಮ್ಯಾಕ್ಸ್ ಪ್ರಿಪರೇಷನ್ ಗೆ 4 ದಿನ ತೆಗೆದುಕೊಂಡ ಸುದೀಪ್..!

ರನ್ನ ಚಿತ್ರ ದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ನಟ ಸುದೀಪ್ 4 ದಿನ ಕಾಲಾವಕಾಶ ತೆಗೆದುಕೊಂಡರಂತೆ...

ಬೆಂಗಳೂರು: ನಟ ಸುದೀಪ್ ಅಭಿನಯದ ರನ್ನ ಚಿತ್ರ ಗುರುವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಕುತೂಹಲಕಾರಿ ಅಂಶವೆಂದರೆ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ನಟ ಸುದೀಪ್ 4 ದಿನ ಕಾಲಾವಕಾಶ ತೆಗೆದುಕೊಂಡರಂತೆ.

ನಟ ಸುದೀಪ್ ಅಭಿನಯದ ಚಿತ್ರ ಇಂದು ರಾಜ್ಯಾದ್ಯಂತ ಸುಮಾರು 275ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದರಿಂದ ಇಂದು ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭಿಸಲಾಗಿದೆ.

ಚಿತ್ರದ ನಿರ್ದೇಶಕ ನಂದಕಿಶೋರ್ ಅವರು ತಿಳಿಸಿರುವಂತೆ ಸಾಮಾನ್ಯವಾಗಿ ಪ್ರತಿನಿತ್ಯ ಶೂಟಿಂಗ್ ಗೆ ಆಗಮಿಸುತ್ತಿದ್ದ ಸುದೀಪ್ ಅವರು ಮೇಕಪ್ ಮುಗಿಸಿ ಸೀನ್ ಪೇಪರ್ ತೆಗೆದುಕೊಂಡು ತಕ್ಷಣ ಡೈಲಾಗ್ ಗಳನ್ನು ಅಭ್ಯಾಸ ಮಾಡಿ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದರು. ಆದರೆ ರನ್ನ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಸುದೀಪ್ ಕೊಂಚ ಕಾಲಾವಕಾಶ ತೆಗೆದುಕೊಂಡರು. ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲೆಂದೇ ಅವರು ಸುಮಾರು 4 ದಿನ ತೆಗೆದುಕೊಂಡರು ಎಂದು ನಂದ ಕಿಶೋರ್ ಹೇಳಿದ್ದಾರೆ.

"ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಸುದೀಪ್ ಸಾಕಷ್ಟು ಹೋಮ್ ವರ್ಕ್ ಮಾಡಿದ್ದರು. ಸುಮಾರು 3 ರಿಂದ 4 ದಿನ ಕಾಲಾವಕಾಶ ತೆಗೆದುಕೊಂಡು ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಅಣಿಯಾದರು. ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಸುಮಾರು 15 ನಿಮಿಷಗಳಷ್ಟು ಸುದೀರ್ಘವಾಗಿದ್ದು, ನಟ ಸುದೀಪ್ ಅವರು ಇಡೀ 15 ನಿಮಿಷದ ಚಿತ್ರೀಕರಣವನ್ನು ಒಂದೇ ಶಾಟ್ ನಲ್ಲಿ ಮುಗಿಸಿದ್ದಾರೆ. ಇದೇ ಚಿತ್ರದ ಪ್ರಮುಖ ಘಟ್ಟ'' ಎಂದು ನಂದಕಿಶೋರ್ ಬಿಂಬಿಸಿದ್ದಾರೆ.

ವಿಮಾನ ಪ್ರಯಾಣವೆಂದರೆ ಸುದೀಪ್ ಗೆ ಭಯ
ತಮ್ಮ 18 ವರ್ಷದ ಚಿತ್ರ ಬದುಕಿನಲ್ಲಿ ಸುದೀಪ್ ಅವರು ಇದೇ ಮೊದಲ ಬಾರಿಗೆ ಯೂರೋಪ್ ಗೆ ಪ್ರಯಾಣ ಬೆಳೆಸಿದ್ದ ವಿಚಾರವನ್ನು ನಿರ್ದೇಶಕ ನಂದಕಿಶೋರ್ ಬಹಿರಂಗಪಡಿಸಿದರು. "ತಮ್ಮ ಹಲವು ಚಿತ್ರಗಳಿಗಾಗಿ ಜೋರ್ಡಾನ್ ಮತ್ತು ದುಬೈಗೆ ಪ್ರಯಾಣ ಬೆಳೆಸಿದ್ದ ಸುದೀಪ್ ಅವರು ಇದೇ ಮೊದಲ ಬಾರಿಗೆ ಯೂರೋಪ್ ಪ್ರಯಾಣಕ್ಕೆ ಒಪ್ಪಿಗೆ ನೀಡಿದ್ದರು. ಸುದೀಪ್ ಅವರಿಗೆ ಸುದೀರ್ಘ ಸಮಯ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಭಯ. ಹೀಗಾಗಿ ಅವರು ವಿಮಾನದಲ್ಲಿ ಹೆಚ್ಚಾಗಿ ಪ್ರಯಾಣ ಮಾಡಬಯಸುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಅವರು ನಮ್ಮೊಂದಿಗೆ ಸತತ 12 ಗಂಟೆಗಳ ವಿಮಾನದಲ್ಲಿ ಕುಳಿತಿದ್ದರು ಎಂದು ನಂದ ಕಿಶೋರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

16 ವರ್ಷಗಳ ಬಳಿಕ ಒಂದಾದ ರೇಖಾ-ಸುದೀಪ್..!
ರನ್ನ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಚಿತ್ರದ ಒಂದು ಹಾಡಿನಲ್ಲಿ ನಟ ಸುದೀಪ್ ಹಲವು ನಾಯಕ ನಟಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ 16 ವರ್ಷಗಳ ಹಿಂದೆ ತೆರೆಕಂಡಿದ್ದ ಸುದೀಪ್ ಅವರ ಮೊದಲ ಚಿತ್ರ ಸ್ಪರ್ಶ ಚಿತ್ರದ ನಾಯಕ ನಟಿ ರೇಖಾ ಅವರೊಂದಿಗೆ ಸುದೀಪ್ ಹೆಜ್ಜೆ ಹಾಕಿದ್ದಾರೆ. 1999ರಲ್ಲಿ ಚಿತ್ರೀಕರಣಗೊಂಡು 2000 ಜೂನ್ 9ರಂದು ತೆರೆಕಂಡಿದ್ದ ಸ್ಪರ್ಶ ಚಿತ್ರ ಸೂಪರ್ ಹಿಟ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!