ಶೃತಿ ಹಾಸನ್ 
ಸಿನಿಮಾ ಸುದ್ದಿ

ಚಿತ್ರಕ್ಕೆ ಸಹಿ ಹಾಕದಂತೆ ಶೃತಿ ಹಾಸನ್ ಗೆ ಕೋರ್ಟ್ ತಾಕೀತು

ಯಾವುದೇ ಚಿತ್ರಕ್ಕೆ ಸಹಿ ಹಾಕದಂತೆ ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ಗೆ ಸಿವಿಲ್ ನ್ಯಾಯಾಲಯ ಆದೇಶಿಸಿದೆ...

ಚೆನ್ನೈ: ಯಾವುದೇ ಚಿತ್ರಕ್ಕೆ ಸಹಿ ಹಾಕದಂತೆ ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ಗೆ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ಈ ಹಿಂದೆ ತೆಲುಗು ಹಾಗೂ ತಮಿಳು ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದ ಶೃತಿ ಹಾಸನ್ ಇದೀಗ ಡೇಟಿಂಗ್ ಸಮಸ್ಯೆ ಇದೆ ಎಂದು ಅದರಿಂದ ಹೊರ ಬಂದಿದ್ದರು. ಅಲ್ಲದೇ ತಮಗೆ ನಿಗದಿತ ಸಮಯದಲ್ಲಿ ಚಿತ್ರೀಕರಣಕ್ಕೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ನಿರ್ಮಾಪಕರಿಗೆ ಕಾರಣವನ್ನೂ ನೀಡಿದ್ದರು.

ಆದರೆ, ಶೃತಿ ಅವರ ಈ ನಿರ್ಧಾರದಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಸಿವಿಲ್ ಕೋರ್ಟ್ ನಲ್ಲಿ ದೂರು ದಾಖಲಿಸಿತ್ತು. ಚಿತ್ರ ನಿರ್ಮಾಣ ಸಂಷ್ಟೆಯ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಶೃತಿ ವಿರುದ್ದ ಎಫ್ ಐ ಆರ್ ದಾಖಲಿಸಲು ಸೂಚನೆ ನೀಡುವುದರ ಜತೆಗೆ ಯಾವುದೇ  ಹೊಸ ಚಿತ್ರಕ್ಕೆ ಸಹಿ ಹಾಕದಂತೆ ಸೂಚನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!

ಮಂಡ್ಯದಲ್ಲಿ ಭಿಕ್ಷುಕಿ ನಿಧನ: ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಕ್ರಿಕೆಟ್: ಮೈದಾನದಲ್ಲೇ ಜೈಸ್ವಾಲ್-ಅಸಿತ ಫೆರ್ನಾಂಡೊ ಕಿರಿಕ್: ಟೀಂ ಇಂಡಿಯಾ ಓಪನರ್‌ಗೆ ಭಾರೀ ಶಿಕ್ಷೆ ಸಾಧ್ಯತೆ!

KPSC ಕರ್ಮಕಾಂಡ: ನಾಪತ್ತೆಯಾಗಿರುವ IAS ಅಧಿಕಾರಿಗೆ ED ಬಿಗ್ ಶಾಕ್; ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ

ಐಫೋನ್ EMI ತಲೆನೋವು, ಯಮುನಾ ನದಿಗೆ ಹಾರಿದ ಡ್ಯಾನ್ಸ್ ಟೀಚರ್! ಮುಂದೇನಾಯ್ತು!