'ಈಗ' ಸಿನಿಮಾ ನಂತರ ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಜುಲೈ 10 ರಂದು ತೆರೆ ಕಾಣಲಿದೆ. ಪ್ರಭಾಸ್ ನಾಯಕನಾಗಿರುವ ಈ ಚಿತ್ರದಲ್ಲಿ ಅನುಷ್ಕಾ, ತಮನ್ನಾ, ರಾಣಾ, ಸತ್ಯರಾಜ್, ನಾಸರ್, ರಮ್ಯಾ ಕೃಷ್ಣ, ಅದ್ವಿತಿ ಶೇಶ್ ಮೊದಲಾದವರು ತಾರಾಗಣದಲ್ಲಿದ್ದಾರೆ.
ಸಂಗೀತ ನಿರ್ದೇಶನ ಎಂಎಂ ಕೀರವಾಣಿಯವರದ್ದು. ಇದೇ ಚಿತ್ರ ತಮಿಳಿನಲ್ಲಿ ಮಹಾಬಲಿ ಎಂಬ ಹೆಸರಿನಲ್ಲಿ ರಿಲೀಸ್ ಆಗಲಿದೆ. 2013ರಲ್ಲಿ ಸಿನಿಮಾದ ಚಿತ್ರೀಕರಣ ಆರಂಭಗೊಂಡಿತ್ತು. ಈ ಚಿತ್ರಕ್ಕಾಗಿ 17 ಸ್ಟುಡಿಯೋಗಳಲ್ಲಿ 600 ಕಲಾವಿದರು ಅಹೋರಾತ್ರಿ ದುಡಿದಿದ್ದರು.
ಇಷ್ಟೊಂದು ಕಾಲ ಚಿತ್ರೀಕರಣ ನಡೆಸಿ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಬಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಬಾಹುಬಲಿ ಚಿತ್ರವನ್ನು ಹಿಂದಿ ಭಾಷೆಯಲ್ಲಿ ತರಲಿದ್ದು, ಚಿತ್ರದ ಫಸ್ಟ್‌ಲುಕ್‌ನ್ನು ಟ್ವೀಟ್ ಮಾಡಿದ್ದಾರೆ.