ಜಾನ್ ಫೋರ್ಬ್ಸ್ ನ್ಯಾಸ್ 
ಸಿನಿಮಾ ಸುದ್ದಿ

'ಎ ಬ್ಯೂಟಿಫುಲ್ ಮೈಂಡ್' ಸ್ಫೂರ್ತಿ ಜಾನ್ ನ್ಯಾಶ್ ಮತ್ತು ಪತ್ನಿ ಅಪಘಾತದಲ್ಲಿ ಸಾವು

ಗಣಿತಶಾಸ್ತ್ರ ಮೇಧಾವಿ ಹಾಗು ೨೦೦೧ರ 'ಎ ಬ್ಯೂಟಿಫುಲ್ ಮೈಂಡ್' ಸಿನೆಮಾಗೆ ಸ್ಫೂರ್ತಿಯಾಗಿದ್ದ ಜಾನ್ ಫೋರ್ಬ್ಸ್ ನ್ಯಾಸ್ ಅವರು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ.

ಟ್ರೆಂಟನ್:  ಗಣಿತಶಾಸ್ತ್ರ ಮೇಧಾವಿ ಹಾಗು ೨೦೦೧ರ 'ಎ ಬ್ಯೂಟಿಫುಲ್ ಮೈಂಡ್' ಸಿನೆಮಾಗೆ ಸ್ಫೂರ್ತಿಯಾಗಿದ್ದ ಜಾನ್ ಫೋರ್ಬ್ಸ್ ನ್ಯಾಸ್ ಅವರು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಸುನೀಗಿದ್ದಾರೆ. ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ಇದೇ ಸಂದರ್ಭದಲ್ಲಿ ಅವರ ಪತ್ನಿ ಕೂಡ ಸಾವನ್ನಪ್ಪಿದ್ದಾರೆ.

ಮನೆಯಿಂದ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಮೂಲಕ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಎ ಬ್ಯೂಟಿಫುಲ್ ಮೈಂಡ್' ಚಲನಚಿತ್ರದಲ್ಲಿ ನ್ಯಾಶ್ ಪಾತ್ರ ವಹಿಸಿದ್ದ ರಸಲ್ ಕ್ರೋವ್ 'ಆಘಾತವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. "ನಮ್ಮದು ಒಳ್ಳೆಯ ಪಾಲುದಾರಿಕೆ ಇತ್ತು" ಎಂದಿರುವ ಅವರು "ಸುಂದರ ಮನಸ್ಸುಗಳು, ಸುಂದರ ಹೃದಯಗಳು" ಎಂದು ಕೂಡ ಟ್ವೀಟ್ ಮಾಡಿದ್ದಾರೆ.

ತಮ್ಮ ಪ್ರತಿಭೆಗೆ ಹಾಗೂ ವಿಲಕ್ಷಣ ಮನಸ್ಥಿತಿಗೆ ಹೆಸರುವಾಸಿಯಾಗಿದ್ದ ಜಾನ್ ನ್ಯಾಶ್ ಹಲವು ವರ್ಷಗಳವರೆಗೆ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಗಣಿತಶಾಸ್ತ್ರ ಸಂಶೋಧಕನಾಗಿ ಕೆಲಸ ನಿರ್ವಹಿಸಿದ್ದರು. ೧೯೯೪ರಲ್ಲಿ 'ಗೇಮ್ ಥಿಯರಿ' ವಿಭಾಗದಲ್ಲಿ ಅವರು ನಡೆಸಿದ ಸಂಶೋಧನೆಗೆ ಅರ್ಥಶಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಎಂ ಐ ಟಿ ವಿಶ್ವವಿದ್ಯಾಲಯದಲ್ಲಿ ಕೂಡ ಹಲವು ವರ್ಷಗಳ ಕಾಲ ಬೋಧನೆ ಮಾಡಿದ್ದರು.

ಇವರ ಜೀವನ ಆಧಾರಿತ 'ಎ ಬ್ಯೂಟಿಫುಲ್ ಮೈಂಡ್' ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತ್ತು. ಅದರಲ್ಲಿ ಅತ್ಯುತ್ತಮ ಸಿನೆಮಾ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಸೇರಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT