ನಟಿ ರೂಪಶ್ರೀ ಮತ್ತು ನೀರಜ್ 
ಸಿನಿಮಾ ಸುದ್ದಿ

ಸದ್ದಿಲ್ಲದೇ ನಡೆದ ನಟಿ ರೂಪಶ್ರೀ ವಿವಾಹ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ನಟಿ ರೂಪಶ್ರೀ ಅವರು ಸದ್ದಿಲ್ಲದೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರೂಪಶ್ರೀ ಅವರು ಸದ್ದಿಲ್ಲದೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ತಮ್ಮ ಧೀರ್ಘಕಾಲದ ಗೆಳೆಯ ನೀರಜ್ ಅವರೊಂದಿಗೆ ನಟಿ ರೂಪಶ್ರೀ ಅವರ ವಿವಾಹ ನಿಶ್ಚಿತಾರ್ಥ ನಿನ್ನೆ ನಡೆದಿದೆ. ಆದರೆ ಈ ವಿಚಾರವನ್ನು ಎಲ್ಲಿಯೂ ಹೇಳಿ ಕೊಳ್ಳದ ನಟಿ ರೂಪಶ್ರೀ ಫೇಸ್ ಬುಕ್ ನ ತಮ್ಮ ವಾಲ್ ನಲ್ಲಿ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್ ಮಾಡುವ ಮೂಲಕ ತಮ್ಮ ವಿವಾಹ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ.

ಮದುವೆ ಆಗುವವರೆಗೂ ಯಾವುದೇ ಗಾಸಿಪ್ ಗಳಿಗೆ ಆಹಾರವಾಗಬಾರದು ಎನ್ನುವ ಒಂದೇ ಕಾರಣಕ್ಕೆ ನಟಿ ರೂಪಶ್ರೀ, ತಮ್ಮ ನಿಶ್ವಿತಾರ್ಥದ ವಿಚಾರವನ್ನ ಬಹಿರಂಗಗೊಳಿಸಿರಲಿಲ್ಲವಂತೆ. ಅಸಲಿಗೆ ಇಷ್ಟು ಬೇಗ ಮದುವೆಯಾಗುವುದು ರೂಪಶ್ರೀ ಅವರಿಗೂ ಕೂಡ ಇಷ್ಟವಿರಲಿಲ್ಲವಂತೆ. ತಾಯಿಯ ಬಲವಂತಕ್ಕೆ ಮಣಿದು ಬೇಗ ಮದುವೆಯಾಗುವುದಕ್ಕೆ ಒಪ್ಪಿಕೊಂಡಿದ್ದಾರೆ ರೂಪಶ್ರೀ.



ಕಳೆದ ಕೆಲ ವರ್ಷಗಳಿಂದ ನೀರಜ್ ಮತ್ತು ರೂಪಶ್ರೀ ಆಪ್ತ ಸ್ನೇಹಿತರಾಗಿದ್ದರು. ಮೂಲತಃ ಕೋಲ್ಕತಾ ಮೂಲದ ಉಧ್ಯಮಿಯಾಗಿರುವ ನೀರಜ್ ಇತ್ತೀಚೆಗೆ ಮಾಧ್ಯಮ ರಂಗದಲ್ಲಿ ಗುರುತಿಸಿಕೊಂಡಿದ್ದರು.

ಸ್ನೇಹಿತರ ಮುಖಾಂತರ ರೂಪಶ್ರೀ ಅವರಿಗೆ ನೀರಜ್ ಪರಿಚಯವಾಗಿದ್ದು, ಕ್ರಮೇಣ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿದ ಪರಿಣಾಮ ಈ ಜೋಡಿ ವಿವಾಹವಾಗಲು ನಿಶ್ಚಯಿಸಿದೆ. ಇದೇ 2015ರ ವರ್ಷಾಂತ್ಯದಲ್ಲಿ ಈ ಜೋಡಿಯ ಮದುವೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

'ಸಂಕ್ರಾಂತಿ', 'ಜಟಾಯು', 'ಚಡ್ಡಿ ದೋಸ್ತ್', 'ಸಿಗರೇಟ್'...ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ರೂಪಶ್ರೀ ಸ್ಯಾಂಡಲ್ ವುಡ್ ನಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ನಟಿ. ಮದುವೆಯ ನಂತರವೂ ತಾವು ಚಿತ್ರಗಳಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ ನಟಿ ರೂಪಶ್ರೀ. ಅಲ್ಲದೆ ತಾವು ಬೆಂಗಾಲಿ ಚಿತ್ರಗಳಲ್ಲಿಯೂ ನಟಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ನೀರಜ್ ಕುಟುಂಬದ ಒಪ್ಪಿಗೆ ಕೂಡ ಇದೆಯಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: 'ಹನುಮಾನ್‌ ಜಿ ಮಹಾನ್'.. ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

SCROLL FOR NEXT