ತಮ್ಮ ಮುಂಬರುತ್ತಿರುವ ಸಿನೆಮಾ 'ನೀರಜ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಕಾನ್ ಚಲನಚಿತ್ರೋತ್ಸವದ ಕೆಂಪು ಹಾಸಿನ ನಡಿಗೆಗೆ ತೊಟ್ಟಿದ್ದ ಉಡುಗೆಗೆ ಬಂದಿರುವ ವ್ಯಂಗ್ಯ ಪ್ರತಿಕ್ರಿಯೆಗಳಿಗೆ ಸಮಾಧಾನದ ಉತ್ತರ ನೀಡಿದ್ದಾರೆ.
"ನನಗೆ ರಾಣಿಯಂತೆ ಭಾಸವಾಯಿತು" ಎಂದು ಭರವಸೆಯಿಂದ ನುಡಿದಿರುವ ನಟಿ ತಮ್ಮ ಉಡುಗೆಯ ಬಗ್ಗೆ ಹಾಸ್ಯ ಮಾಡಿದವರಿಗೆ ಹಾಗು ಟೀಕಿಸಿದವರಿಗೆ ಸರಳ ಸಮಾಧಾನದ ಉತ್ತರ ನೀಡಿದ್ದಾರೆ.
"ಸೋನಮ್ ಅನಿಲ್ ಕಪೂರ್ ಅವರನ್ನೇ ತೊಟ್ಟಿದ್ದಾರೆ" ಎಂಬ ಜೋಕು ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು.
ಸೋನಮ್ ಅವರನ್ನು ಬೆಂಬಲಿಸಿರುವ ಸಹೋದರಿ ರಿಯಾ "ನೀವು ಸುಂದರವಾಗಿದ್ದೀರಿ ಎಂದೆನಿಸಿದರೆ ನಿಮಗೆ ಮನಬಂದದ್ದನ್ನು ಮಾಡಬೇಕು. ಬೇರೆಯವರ ಅನಿಸಿಕೆಗೆ ಯಾವ ಹುಡುಗಿಯೂ ನಯಾ ಪೈಸೆಯ ಬೆಲೆ ನೀಡುವುದಿಲ್ಲ. ನಿಮಗೆ ಇಷ್ಟವಾದದನ್ನು ತೊಡಬೇಕು ಹಾಗು ಧೈರ್ಯದಿಂದಿರಬೇಕು. ನಿಮಗೆ ಖುಷಿಯಾದರೆ ಅಷ್ಟೆ ಸಾಕು" ಎಂದಿದ್ದಾರೆ.