ನಿರ್ದೇಶಕ ಪ್ರೇಮ್, ಶಿವರಾಜ ಕುಮಾರ್ ಮತ್ತು ಸುದೀಪ್ 
ಸಿನಿಮಾ ಸುದ್ದಿ

ಪ್ರೇಮ್ ನಿರ್ದೇಶನದಲ್ಲಿ ಶಿವಣ್ಣ-ಕಿಚ್ಚ ಒಟ್ಟಿಗೆ ನಟನೆ

ನಿರ್ದೇಶಕ ಪ್ರೇಮ್ ಮಹತ್ತರವಾದ ಸಿನೆಮಾವೊಂದಕ್ಕೆ ಕೈಹಾಕಿದ್ದಾರೆ. ಗಾಂಧಿನಗರದ ವದಂತಿಗಳನ್ನು ನಂಬುವುದಾದರೆ ಕನ್ನಡದ ಇಬ್ಬರು ಖ್ಯಾತ ನಟರನ್ನು ಒಟ್ಟಿಗೆ ನಟಿಸಲು

ಬೆಂಗಳೂರು: ನಿರ್ದೇಶಕ ಪ್ರೇಮ್ ಮಹತ್ತರವಾದ ಸಿನೆಮಾವೊಂದಕ್ಕೆ ಕೈಹಾಕಿದ್ದಾರೆ. ಗಾಂಧಿನಗರದ ವದಂತಿಗಳನ್ನು ನಂಬುವುದಾದರೆ ಕನ್ನಡದ ಇಬ್ಬರು ಖ್ಯಾತ ನಟರನ್ನು ಒಟ್ಟಿಗೆ ನಟಿಸಲು ಒಪ್ಪಿಸಲು ಪ್ರೇಮ್ ಯಶಸ್ವಿಯಾಗಿದ್ದಾರೆ. ಶಿವರಾಜ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲು.

ಸಿನೆಮಾದ ನಿರ್ಮಾಪಕರು ಈ ಯೋಜನೆ ಬಗ್ಗೆ ತುಟಿ ಬಿಚ್ಚುತ್ತಿಲ್ಲವಾದರೂ ಇದು ಸಿ ಆರ್ ಮನೋಹರ್ ಅವರ ದೊಡ್ಡ ಬಜೆಟ್ ಚಿತ್ರ ಎಂದು ಮೂಲಗಳಿಂದ ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ  ಡಿಸೆಂಬರ್ 7ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಚಿತ್ರೀಕರಣಕ್ಕೂ ಮುಂಚಿನ ಕಾರ್ಯಗಳು ಪ್ರಾರಂಭವಾಗಿವೆ. ಚಿತ್ರೀಕರಣ ಜನವರಿ ೨೦೧೬ರಿಂದ ಪ್ರಾರಂಭವಾಗಲಿದೆ" ಎಂದು ಮೂಲಗಳು ತಿಳಿಸಿವೆ.

ಇದು ಬಹುಭಾಷಾ ಚಲನಚಿತ್ರ ಎಂದು ತಿಳಿದುಬಂದಿದ್ದು, ಸುದೀಪ್ ಎಲ್ಲ ಭಾಷೆಗಳಲ್ಲೂ ಪಾತ್ರ ಪಡೆದಿದ್ದರೆ, ಶಿವರಾಜ್ ಕುಮಾರ್ ಕನ್ನಡ ಅವತರಿಣಿಕೆಯಲ್ಲಿ ಮಾತ್ರ ಇರಲಿದ್ದಾರೆ ಎನ್ನಲಾಗಿದೆ. ಇವರಲ್ಲದೆ ದಕ್ಷಿಣ ಭಾರತದ ಇತರ ದೊಡ್ಡ ನಟರ ತಾರಾಗಣವೂ ಇರಲಿದೆಯಂತೆ. ಶಿವಣ್ಣ ಮತ್ತು ಸುದೀಪ್ ಜೋಡಿ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳುತ್ತಿದ್ದು, ಚಿತ್ರಕ್ಕೆ 'ಕುಂಭಮೇಳ' ಎಂದು ಶೀರ್ಷಿಕೆ ಇಡಲಾಗುತ್ತದೆ  ಎಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ.

ಸದ್ಯಕ್ಕೆ ಶಿವರಾಜಕುಮಾರ್ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಕಾಯುತ್ತಿದ್ದರೆ, 'ಕಬೀರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆ ಎಸ್ ರವಿಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನೆಮಾದ ಚಿತ್ರೀಕರಣದಲ್ಲಿ ಸುದೀಪ್ ನಿರತರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT